Urdu   /   English   /   Nawayathi

ಸೌದಿ ತೊರೆದ ವಿದೇಶೀಯರು

share with us

ರಿಯಾದ್‌: 11 ಜುಲೈ (ಫಿಕ್ರೋಖಬರ್ ಸುದ್ದಿ) ಸೌದಿ ಅರೇಬಿಯಾದಲ್ಲಿ ಉದ್ಯೋಗಕ್ಕೆ ಸೇರಿ ಉತ್ತಮ ಜೀವನ ನಡೆಸಬೇಕು ಎಂಬುವರಿಗೆ ಇದೊಂದು ಎಚ್ಚರಿಕೆಯ ಮಾಹಿತಿ. ಭಾರತ ಸೇರಿದಂತೆ ಹಲವಾರು ದೇಶಗಳಿಂದ ಅಲ್ಲಿಗೆ ತೆರಳಿದ್ದವರು ಮರಳಿ ಸ್ವದೇಶಕ್ಕೆ ವಾಪಸಾಗುತ್ತಿದ್ದಾರೆ. ಉತ್ತಮ ರೀತಿಯ ವ್ಯಾಪಾರ ವೃದ್ಧಿಸಿಕೊಳ್ಳಲು ಕಂಪೆನಿಗಳು ಹೆಣಗಾಡುತ್ತಿರುವುದು, ವಿದೇಶಿ ಪ್ರಜೆಗಳನ್ನು ನೇಮಿಸಿಕೊಳ್ಳುವುದರ ವಿರುದ್ಧ ಸರಕಾರ ವಿಧಿಸುವ ಅಧಿಕ ಪ್ರಮಾಣದ ಶುಲ್ಕಗಳಿಂದಾಗಿ ಉದ್ಯೋಗದ ಅವಕಾಶಗಳು ಕಡಿಮೆಯಾಗಿವೆ. 

ಈ ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ವಿದೇಶಿ ಕೆಲಸಗಾರರ ಸಂಖ್ಯೆ 1.2 ಕೋಟಿ (10.2 ಮಿಲಿಯನ್‌)ಯಷ್ಟು ಕಡಿಮೆಯಾಗಿದೆ. ಉತ್ಪಾದನಾ ಕ್ಷೇತ್ರ, ವ್ಯಾಪಾರ, ನಿರ್ಮಾಣ ಕ್ಷೇತ್ರಗಳಲ್ಲಿ ವಿದೇಶಗಳ ಕೆಲಸಗಾರರು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದಾರೆ. ಇದರ ಜತೆಗೆ ಸೌದಿ ಅರೇಬಿಯಾದಲ್ಲಿನ ನಿರುದ್ಯೋಗ ಪ್ರಮಾಣ ಕೂಡ ಶೇ.12.9ಕ್ಕೆ ವೃದ್ಧಿಸಿದೆ. ತೈಲ ಉತ್ಪಾದನೆ ಕುಂಠಿತವಾಗುತ್ತಿರುವ ಆತಂಕದ ನಡುವೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶ ಗಳನ್ನು ಸೃಷ್ಟಿಸುವುದು ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ಗೆ ಸವಾಲಾಗಿದೆ. 2020ರ ಒಳಗಾಗಿ ಸೌದಿಯ ಸರಕಾರ ನಿರುದ್ಯೋಗ ಪ್ರಮಾಣವನ್ನು ಶೇ.9ಕ್ಕೆ ಇಳಿಕೆ ಮಾಡಬೇಕು ಎಂಬ ಗುರಿ ಹಾಕಿಕೊಂಡಿದೆ. 

ವಿದೇಶದ ಪ್ರಜೆಗಳನ್ನು ನೇಮಕ ಮಾಡಿ ಕೊಳ್ಳು ವುದರ ಮೇಲೆ ನಿಯಂತ್ರಣ ಹೇರಲು 2017ರ ಜುಲೈಯಿಂದ ಪ್ರತಿ ತಿಂಗಳಿಗೆ 1,785 ರೂ.ಗಳನ್ನು ಶುಲ್ಕವಾಗಿ ಪಾವತಿ ಮಾಡುವಂತೆ ಸೂಚಿಸಲಾಗಿತ್ತು. ಅದು 2020ರ ವೇಳೆ ಪ್ರತಿ ತಿಂಗಳಿಗೆ 7,324 ರೂ.ಗಳಿಗೆ ಏರಿಕೆಯಾಗುವ ಸಾಧ್ಯತೆಗಳಿವೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا