Urdu   /   English   /   Nawayathi

ಘೋಷಣೆಯಾಗಿ ಉಳಿದ ಹೊಸ ತಾಲ್ಲೂಕುಗಳು

share with us

ಬೆಂಗಳೂರು: 09 ಜುಲೈ (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿ 50 ಹೊಸ ತಾಲೂಕುಗಳು ಘೋಷಣೆಯಾಗಿರುವುದನ್ನು ಬಿಟ್ಟರೆ ಇದುವರೆಗೆ ಯಾವುದೇ ಹೊಸ ತಾಲೂಕುಗಳಲ್ಲಿ ಆಡಳಿತ ಕಾರ್ಯಾರಂಭವಾಗಿಲ್ಲ ಎಂಬ ವಿಷಯ ವಿಧಾನಸಭೆಯಲ್ಲಿಂದು ಕೆಲಕಾಲ ಚರ್ಚೆಗೆ ಗ್ರಾಸವಾಯಿತು.

ಪ್ರಶ್ನೋತ್ರರ ವೇಳೆಯಲ್ಲಿ ಕಾರ್ಕಳ ಶಾಸಕ ಸುನೀಲ್‍ಕುಮಾರ ಅವರು ಕೇಳಿದ ಪ್ರಶ್ನೆ ವೆಳೆ ಹೊಸ ತಾಲೂಕುಗಳ ಕುರಿತು ಚರ್ಚೆ ನಡೆಯಿತು. ಹೊಸದಾಗಿ ಘೋಷಣೆಯಾಗಿರುವ ಯಾವದೇ ತಾಲೂಕುಗಳಲ್ಲಿ ಆಡಳಿತ ಕಾರ್ಯಾರಂಭವಾಗಿಲ್ಲ. ಅದಕ್ಕೆ ಕಾರಣವೇನು ? ಯಾವಾಗ ಮಿನಿ ವಿಧಾನಸೌಧಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಪ್ರಶ್ನಿಸಿದರು.

ಹೊಸ ತಾಲೂಕುಗಳಲ್ಲಿ ಕೆಲವುಕಡೆ ಹೊಸ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಇನ್ನೂ ಕೆಲವು ಕಡೆ ಸ್ಥಳ ಗುರುತಿಸಬೇಕಿದೆ. ಆದ್ದರಿಂದ ಜಿಲ್ಲಾ ಹಂತದಲ್ಲಿ ಸ್ಥಳ ಗುರುತಿಸಿ ಅಂದಾಜು ಪಟ್ಟಿ ಮತ್ತು ನಕ್ಷೆಯೊಂದಿಗೆ ಪ್ರಸ್ಥಾವನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದಕೂಡಲೇ ಅನುದಾನ ಲಭ್ಯತೆಯನ್ನಾಧರಿಸಿ ಹೊಸ ವಿಧಾನಸೌಧ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಡಳಿತಾತ್ಮಕ ಪ್ರಕ್ರಿಯೆ ಪ್ರಾರಂಭಿಸಲು ತಲಾ ತಾಲೂಕಿಗೆ 10 ಲಕ್ಷ ರೂ. ಅನುದಾನವನ್ನು ಆಯಾಂ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.

ಹೊಸದಾಗಿ ರಚನೆಯಾಗಿರುವ ಎಲ್ಲಾ ತಾಲೂಕುಗಳ ಶಾಸಕರು ವಕ್ಕೊರಲಾಗಿ ತಮ್ಮದೂ ಅದೇ ಸಮಸ್ಯೆ ಎಂದು ಸಭಾಧ್ಯಕ್ಷರಲ್ಲಿ ವಿನಂತಿಸಿಕೊಂಡರು. ಇದನ್ನು ಒಪ್ಪಿಕೊಂಡ ಕಂದಾಯ ಸಚಿವರು ತಾಲೂಕುಗಳಲ್ಲಿ ಆಡಳಿತಾತ್ಮಕ ಪ್ರಕ್ರಿಯೆ ಆರಂಭಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಹಣಕಾಸು ಇಲಾಖೆಗೆ ತಮ್ಮ ಪ್ರಸ್ಥಾವನೆಯನ್ನು ಕಳುಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೆ ಇಂಬು ಕೊಡುವಂತೆ ಪ್ರಶ್ನೆ ಮಾಡಿದ ಹನೂರು ಶಾಸಕ ಆರ್. ನರೇಂದ್ರ ಹನೂರು ತಾಲೂಕು ಕೇಂದ್ರದಲ್ಲಿ ವಿಶೇಷ ತಹಶೀಲ್ದಾರ್ ಬಿಟ್ಟರೆ ಯಾವುದೇ ಅಧಿಕಾರಿಗಳ ನೇಮಕವಾಗಿಲ್ಲ ಎಂದರು. ಅದಕ್ಕೆ ಉತ್ತರಿಸಿದ ಸಚಿವ ದೇಶಪಾಂಡೆ ಹಣಕಾಸು ಇಲಾಖೆಯಿಂದ ಹಸಿರು ನಿಶಾನೆ ಸಿಕ್ಕಕೂಡಲೇ ಸಿಬ್ಬಂದಿಗಳ ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا