Urdu   /   English

ಥಾಯ್ಲಂಡ್‌ ಗುಹೆ ಬಂದಿ ಕಾರ್ಯಾಚರಣೆ ಐದನೇ ಬಾಲಕನ ರಕ್ಷಣೆ

share with us

ಬ್ಯಾಂಕಾಕ್‌: 09 ಜುಲೈ (ಫಿಕ್ರೋಖಬರ್ ಸುದ್ದಿ) ಥಾಯ್ಲಂಡ್‌ ಗುಹೆಯೊಳಗೆ ಬಂದಿಯಾಗಿರುವ 12 ಮಂದಿ ಬಾಲಕರು ಮತ್ತು ಅವರ ಕೋಚ್‌ ಪೈಕಿ ಇಂದು ಸೋಮವಾರ ಐದನೇ ಬಾಲಕನನ್ನು ಯಶಸ್ವಿಯಾಗಿ ರಕ್ಷಿಸಿ ಗುಹೆಯಿಂದ ಹೊರತರಲಾಗಿದೆ. 

ನಿನ್ನೆ  ಭಾನುವಾರ ನಾಲ್ಕು ಬಾಲಕರನ್ನು ರಕ್ಷಣಾ ತಂಡ ಹರಸಾಹಸ ಪಟ್ಟು ರಕ್ಷಿಸಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಅವರ ದೇಹಾರೋಗ್ಯ ಸಾಕಷ್ಟು ಸುಧಾರಿಸಿದೆ. ಇಂದು ಐದನೇ ಬಾಲಕನ ಜೀವಸಹಿತ ರಕ್ಷಣೆ ಸಾಧ್ಯವಾಯಿತು ಎಂದು ನೌಕಾ ಪಡೆ ಅಧಿಕಾರಿಯೋರ್ವರು ತಿಳಿಸಿದ್ದಾರೆ. 

ಬಾಲಕರ ರಕ್ಷಣಾ ಕಾರ್ಯಾಚರಣೆಯಲ್ಲಿ ಹದಿಮೂರು ವಿದೇಶಿ ಡೈವರ್‌ಗಳು, ಐವರು ಥಾಯ್ಲಂಡ್‌ನ‌ ಉನ್ನತ ನೇವಿ ಸೀಲ್‌ ತಂಡದವರು ಇದ್ದಾರೆ. ಇಂದಿನ ರಕ್ಷಣಾ ಕಾರ್ಯಾಚರಣೆ ಬೆಳಗ್ಗೆ 11 ಗಂಟೆಗೆ ಆರಂಭವಾಗಿತ್ತು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا