Urdu   /   English   /   Nawayathi

26 ಬಾಲಕಿಯರನ್ನು ರಕ್ಷಿಸಿದ ಮೊಬೈಲ್ ಸಂದೇಶ

share with us

ನವದೆಹಲಿ: 07 ಜುಲೈ (ಫಿಕ್ರೋಖಬರ್ ಸುದ್ದಿ) ಸಹಪ್ರಯಾಣಿಕರೊಬ್ಬರು ರೈಲ್ವೆ ಇಲಾಖೆಗೆ ಕಳುಹಿಸಿದ ಮೊಬೈಲ್ ಸಂದೇಶವೊಂದು ವೇಶ್ಯಾವಾಟಿಕೆ ದಂದೆಗೆ ತಳ್ಳಲು ಕರೆದೊಯ್ಯುತ್ತಿದ್ದ 26 ಅಪ್ರಾಪ್ತ ಬಾಲಕಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಮುಜಾಫರಬಾದ್-ಬಾಂದ್ರಾ ಅವಾದ್ ಎಕ್ಸ್‌ಪ್ರೆಸ್ ರೈಲಿನ ಕಾಯ್ದಿಟ್ಟ ಬೋಗಿ 55 ರಲ್ಲಿ 26 ಅಪ್ರಾಪ್ತ ಬಾಲಕಿಯರು ಭಯದಿಂದ ಅಳುತ್ತಿದ್ದುದನ್ನು ಕಂಡ ಸಹ ಪ್ರಯಾಣಿಕರೊಬ್ಬರು, ರೈಲಿನಲ್ಲಿ 26 ಅಪ್ರಾಪ್ತ ಬಾಲಕಿಯರನ್ನು ಅನುಮಾನಾಸ್ಪದವಾಗಿ ಕರೆದೊಯ್ಯಲಾಗುತ್ತಿದೆ. ಆ ಮಕ್ಕಳು ಅಳುತ್ತಿದ್ದಾರೆ ಇದನ್ನು ನೋಡಿದರೆ ಮಕ್ಕಳು ಅಪಾಯದಲ್ಲಿರುವಂತೆ ಕಾಣುತ್ತಿದೆ ಎಂದು ರೈಲ್ವೆ ಇಲಾಖೆಗೆ ಸಂದೇಶ ರವಾನಿಸಿದ್ದಾರೆ.
ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಸಹ ಪ್ರಯಾಣಿಕರ ಸಂದೇಶಕ್ಕೆ ತಕ್ಷಣ ಸ್ಪಂದಿಸಿದ ರೈಲ್ವೆ ಪೊಲೀಸರು, ರೈಲ್ವೆ ರಕ್ಷಣಾಪಡೆ ಹಾಗೂ ವಾರಣಾಸಿ ಮತ್ತು ಲಕ್ನೋ ಅಧಿಕಾರಿಗಳು ಕೆಲವೇ ಗಂಟೆಗಳಲ್ಲಿ ಅಪಾಯದಲ್ಲಿದ್ದ ಬಾಲಕಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾನ್ಯ ಉಡುಪು ಧರಿಸಿದ ರೈಲ್ವೆ ರಕ್ಷಣಾ ಪಡೆಯ ಕೆಲ ಪೊಲೀಸರು ಕಾಪ್ಟನ್‌ಗಂಜ್ ರೈಲ್ವೆ ನಿಲ್ದಾಣದಲ್ಲಿ ಬಾಲಕಿಯರನ್ನು ಸಾಗಿಸುತ್ತಿದ್ದ ರೈಲಿಗೆ ಹತ್ತಿಕೊಂಡಿದ್ದಾರೆ.
ಗೋರಖ್‌ಪುರ್‌ನಲ್ಲಿ ಎಸ್ಕಾರ್ಟ್‌ನವರು ಅವರೊಂದಿಗೆ ಸೇರಿಕೊಂಡು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا