Urdu   /   English   /   Nawayathi

ಶಾಲೆಯಲ್ಲೇ ವಿದ್ಯಾರ್ಥಿನಿ ಮೇಲೆ 18ಕಾಮಾಂಧರಿಂದ ನಿರಂತರ ಗ್ಯಾಂಗ್‌ರೇಪ್

share with us

ಛಾಪ್ರಾ: 07 ಜುಲೈ (ಫಿಕ್ರೋಖಬರ್ ಸುದ್ದಿ) ಬಿಹಾರದಲ್ಲಿ ನಡೆದ ಅತ್ಯಂತ ಹೇಯ ಮತ್ತು ಕಳವಳಕಾರಿ ಘಟನೆಯೊಂದರಲ್ಲಿ  10 ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಪ್ರಿನ್ಸಿಪಾಲ್‌, ಇಬ್ಬರು ಶಿಕ್ಷಕರು ಮತ್ತು 15 ವಿದ್ಯಾರ್ಥಿಗಳು ನಿರಂತರವಾಗಿ ಶಾಲೆಯಲ್ಲೇ ಗ್ಯಾಂಗ್‌ ರೇಪ್‌ ಎಸಗಿರುವುದು ಬೆಳಕಿಗೆ ಬಂದಿದೆ. 

ಸಂತ್ರಸ್ತ ಬಾಲಕಿಯ ತಂದೆ ಪ್ರಕರಣವೊಂದರಲ್ಲಿ  ಜೈಲು ಪಾಲಾಗಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ  ಸಹಪಾಠಿಯೊಬ್ಬ  ಮೊದಲು ಹೇಯ ಕೃತ್ಯ ಎಸಗಿದ್ದಾನೆ. ಬಳಿಕ ಒಬ್ಬರಾದ ಬಳಿಕ ಒಬ್ಬರು ದೌರ್ಜನ್ಯ ಎಸಗಿದ್ದಾರೆ. ನಂತರ ನ್ಯಾಯ ಕೊಡಿಸಬೇಕಾಗಿದ್ದ ಪ್ರಿನ್ಸಿಪಾಲ್‌ ಮತ್ತು ಇಬ್ಬರು ಶಿಕ್ಷಕರು ಕಾಮಾಂಧರಾಗಿ ನಿರಂತರವಾಗಿ 7 ತಿಂಗಳ ಕಾಲ ದೌರ್ಜನ್ಯ ಎಸಗಿದ್ದಾರೆ. 

ಸಂತ್ರಸ್ತೆ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದು,ಅಸ್ವಸ್ಥಗೊಂಡಿರುವ ಆಕೆಗೆ ವೈದ್ಯಕೀಯ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ. 

ತಂದೆ ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಬಾಲಕಿ ಪೊಲೀಸರಿಗೆ ದೂರು ನೀಡಿದ್ದು, ಈಗಾಗಲೇ ಪ್ರಿನ್ಸಿಪಾಲ್‌ ಮತ್ತು ಶಿಕ್ಷಕನನ್ನು ಬಂಧಿಸಿದ್ದಾರೆ. ಆರೋಪಿಗಳಾಗಿರುವ ಇನ್ನೋರ್ವ ಶಿಕ್ಷಕ ಮತ್ತು 15  ವಿದ್ಯಾರ್ಥಿಗಳು ತಲೆ ಮರೆಸಿಕೊಂಡಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا