Urdu   /   English   /   Nawayathi

ಬೆಳೆಗಳಿಗೆ ಬಂಪರ್ ಬೆಲೆ ನಿಗದಿ: ಪ್ರಧಾನಿಗೆ ಉಡುಪಿ ಜಿಲ್ಲಾ ರೈತ ಮೋರ್ಚಾ ಅಭಿನಂದನೆ

share with us

ಉಡುಪಿ: 05 ಜುಲೈ (ಫಿಕ್ರೋಖಬರ್ ಸುದ್ದಿ) ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಈ ದೇಶದ ರೈತರು ತಮ್ಮ ಕೃಷಿ ಭೂಮಿಯಲ್ಲಿ ಬೆಳೆಯುವ ಪ್ರಮುಖ ಆಹಾರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದ್ದು, ರೈತರ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದರೊಂದಿಗೆ ರೈತರ ಜೊತೆಗೆ ಅವರ ಆದಾಯವನ್ನು ವೃದ್ಧಿಸುವಲ್ಲಿ ಅವರ ನೆರವಿಗೆ ಕೇಂದ್ರ ಸರಕಾರ ಜೊತೆಗೆ ಇದೆ ಎಂಬುವುದನ್ನು  ಈ ದೇಶದ ರೈತಾಪಿ ವರ್ಗಕ್ಕೆ ಮನನ ಮಾಡಿರುತ್ತಾರೆ ಎಂದು ಉಡೂಪಿ ಜಿಲ್ಲ ರೈತ ಮೋರ್ಚಾ ಮೋದಿ ಸರ್ಕಾರವನ್ನು ಅಭಿನಂದಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರೈತ ಮೋರ್ಚಾ 'ಈ ಮೊದಲು ರೈತರಿಗೋಸ್ಕರ ಅವರು ತಮ್ಮ ಹೊಲದಲ್ಲಿ ಬೆಳೆಸುವ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಭಿಮಾ ಎಂಬ ವಿಮಾ ಯೋಜನೆಯನ್ನು ಜಾರಿಗೆತಂದು ಕೃಷಿಕರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದಲ್ಲದೇ, ಪ್ರಧಾನ ಮಂತ್ರಿ ಕೃಷಿ ಸಿಂಚಯಿನಿ ಹನಿ ನೀರಾವರಿ ಯೋಜನೆ 90% ಸಬ್‍ಸಿಡಿ ಹಣ ಒದಗಿಸುವುದು, ಬೇವು ಲೇಪಿತ ಯೂರಿಯಾ, ನೀರಾವರಿ ಯೋಜನೆಗಳಿಗಾಗಿ ಹಣ ವ್ಯಯ, ರೈತರಿಗಾಗಿ ಸುಧಾರಿತ ವಿದ್ಯುತ್ ಯೋಜನೆಗಳು, ತೋಟಗಾರಿಕಾ ಬೆಳೆ, ದ್ವಿದಳ ಧಾನ್ಯ ಕಬ್ಬು, ಭತ್ತ, ರಾಗಿ, ಜೋಳ, ಶೇಂಗಾ, ತೊಗರಿ, ಹಣ್ಣು ಹಂಪಲುಗಳು, ತೆಂಗು, ಅಡಿಕೆ ಹೀಗೆ ಎಲ್ಲಾ ತರಹದ ಬೆಳೆ ಬೆಳೆಯುವ ರೈತರಿಗೆ ಮತ್ತು ಇವುಗಳನ್ನೆಲ್ಲಾ ಸಂರಕ್ಷಣೆ ಮಾಡುವಂತಹ ಸಂಸ್ಕರಣಾ ಘಟಕಗಳಿ, ಮಾರುಕಟ್ಟೆಗಳಿಗೆ, ಕೃಷಿ ಯಂತ್ರೋಪಕರಣಗಳಿಗೆ, ನರ್ಸರಿಗಳಿಗೆ ಹೀಗೆ ರೈತರು ತಮ್ಮ ಜಮೀನುಗಳಲ್ಲಿ ಬೆಳೆಸುವ ಅರಣ್ಯೀಕರಣ ಮರಮಟ್ಟುಗಳೂ ಸೇರಿದಂತೆ ಎಲ್ಲಾ ತರಹದ ಬೆಳೆಗಳಿಗೆ ಮಣ್ಣು ಪರೀಕ್ಷೆ ತಯಾರಿಯ ಹೆಲ್ತ್ ಕಾರ್ಡುಗಳಿಂದ ಮೊದಲ್ಗೊಂಡು ರೈತರಿಗೆ ಕೃಷಿ ವಿಶ್ವ ವಿದ್ಯಾಲಯಗಳ ವಿಜ್ಞಾನಿಗಳ ನೆರವನ್ನು ರೈತರು ಪೂರ್ಣ ಪ್ರಮಾಣದಲ್ಲಿ ಪಡೆದುಕೊಂಡು ಬೆಳೆ ಬೆಳೆಯುವುದರಿಂದ ಮೊದಲ್ಗೊಂಡು ಮಾರುಕಟ್ಟೆಯವರೆಗೂ ರೈತರೊಂದಿಗೆ ಸನ್ಮಾನ್ಯ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ನೇರ ಸಂವಾದಗಳೊಂದಿಗೆ ಅವರ ಕಷ್ಟ ಸುಖಗಳಿಗೆ ಸ್ಪಂಧಿಸುತ್ತಾ, ಕೃಷಿ ಚಟುವಟಿಕೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡು ರೈತರಿಗೆ ಇನ್ನೂ ಹೆಚ್ಚಿನ ನೆರವು ಸಿಗಬೇಕೆಂಬ ಆಶಯದೊಂದಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು ರೈತರಿಗೆ ಸಂತಸವುಂಟು ಮಾಡಿದೆ' ಎಂದು ಅಭಿಪ್ರಾಯಪಟ್ಟಿದೆ.

ನಮ್ಮ ಜಿಲ್ಲೆಯಲ್ಲಿ ಹೆಚ್ಚಾಗಿ ಹೊಲದಲ್ಲಿ ಬೆಳೆಸುವ ಭತ್ತ, ದ್ವಿದಳ ಧಾನ್ಯಗಳಾದ ಉದ್ದು, ಶೇಂಗಾ ಬೆಳೆಗಾರರಿಗೆ ಖುಷಿಯನ್ನುವುಂಟು ಮಾಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು, ಹೆಚ್ಚು ರೈತರು ತಮ್ಮ ಕೃಷಿ ಭೂಮಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದಂತೂ ಖಂಡಿತಾ ಸತ್ಯ. ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ಮುಂದಿರುವ  ಇಸ್ರೇಲ್, ಚೀನಾ, ಅಮೇರಿಕಾ ದೇಶಗಳಂತೆ ನಮ್ಮ ರೈತರು ಕೂಡಾ ಕೇಂದ್ರ ಸರಕಾರದ ರೈತಾಭಿವೃದ್ಧಿ ಯೋಜನೆಗಳ ನೆರವಿನೊಂದಿಗೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ತಮ್ಮ ಆದಾಯಗಳನ್ನು ವೃದ್ಧಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ ಎಂಬುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಸತೀಶ್ ಶೆಟ್ಟಿ ಮುಟ್ಲುಪಾಡಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಉಪ್ಪೂರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا