Urdu   /   English   /   Nawayathi

ರಾತ್ರೊರಾತ್ರಿ ಕುಬೇರನಾದ ಕೇರಳದ ಯುವಕ

share with us

ಅಲಾಪ್ಪುಜಾ: 05 ಜುಲೈ (ಫಿಕ್ರೋಖಬರ್ ಸುದ್ದಿ) ರಾತ್ರೊರಾತ್ರಿ ಕೇರಳ ಯುವಕನ ಅದೃಷ್ಟವೇ ಬದಲಾಗಿದೆ, ಹೌದು ಅದೃಷ್ಟವೊಲಿದರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ತಾಜಾ ಉದಾಹರಣೆ ಇಲ್ಲಿದೆ.ಲಾಟರಿಯಲ್ಲಿ ೧೩ ಕೋಟಿ ರೂಪಾಯಿ ಬಹುಮಾನ ಬಂದಿದ್ದರಿಂದ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾನೆ.

ಕೇರಳದ ಕುಟ್ಟನಾಡಿನ ನಿವಾಸಿ ೩೦ ವರ್ಷದ ತೋಜೋ ಮ್ಯಾಥ್ಯೂಗೆ ಲಾಟರಿಯಲ್ಲಿ ಏಳೂ ದಶಲಕ್ಷ ಧಿರಾಮ್ ಬಹುಮಾನ ಬಂದಿದೆ.ತನ್ನ ಸ್ನೇಹಿತನ ಸಹಾಯದಿಂದ ಲಾಟರಿ ಟಿಕೆಟ್ ಖರೀದಿಸಿದ್ದನು. ಈತ ಖರೀದಿಸಿದ ಟಿಕೆಟ್ ಸಂಖ್ಯೆ -೦೭೫೧೭೧ಗೆ ಇಷ್ಟೊಂದು ಮೊತ್ತದ ಬಹುಮಾನ ಬಂದಿದೆ.

ಜೂ ೨೪ ರಂದು ಭಾರತಕ್ಕೆ ಬರುವ ವಿಮಾನ ಹತ್ತುವ ಮುನ್ನ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಈ ಲಾಟರಿ ಟಿಕೆಟ್ ಖರೀದಿಸಿದ್ದನು. ೧೮ ಮಂದಿ ಈತನ ಸ್ನೇಹಿತರು ಹಣ ಸಹಾಯ ಮಾಡಿದ್ದರು. ಆದರೆ ಲಾಟರಿ ಮ್ಯಾಥ್ಯೂ  ಹೆಸರಿನಲ್ಲಿದೆ ಎಂದು ಈತನ ತಾಯಿ ಕುಂಜಮ್ಮ ಮ್ಯಾಥ್ಯೂ ತಿಳಿಸಿದ್ದಾರೆ.

ತನ್ನ ಪುತ್ರ ಮನೆ ನಿರ್ಮಿಸುವ ಕನಸು ಕಂಡಿದ್ದನು. ಆದರೆ ಅವನ ಬಳಿ ಹಣವಿರಲಿಲ್ಲ. ಲಾಟರಿಯಲ್ಲಿ ಬಹುಮಾನ ಬಂದರೆ ಮಗನ ಕನಸು ನನಸಾಗುತ್ತದೆ ಎಂದು ನಿನ್ನೆಯಷ್ಟೇ ತಮ್ಮ ಪತಿಯತ್ತ ಹೇಳಿದ್ದೆ. ಈಗ ನಿಜವಾಗಿಯೂ ಕನಸು ನನಸಾಗಿದೆ ಎಂದು ಹೇಳಿದರು.

ಈ ಹಿಂದೆಯೂ ಭಾರತೀಯ ಚಾಲಕನೊಬ್ಬ ಲಾಟರಿಯಲ್ಲಿ ೧೨ ದಶಲಕ್ಷ ಧಿರಾಮ್ ಬಹುಮಾನ ಗೆದ್ದಿದ್ದನು.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا