Urdu   /   English   /   Nawayathi

ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸೇತುವೆಯಲ್ಲಿ ಬಿರುಕು

share with us

ಬಂಟ್ವಾಳ: 04 ಜುಲೈ (ಫಿಕ್ರೋಖಬರ್ ಸುದ್ದಿ) ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸಂಭಾವ್ಯ ಅಪಾಯದ ಬಗ್ಗೆ ಸ್ಥಳೀಯರು ಎಚ್ಚರಿಸಿದ್ದಾರೆ. ರಸ್ತೆ ಇಲ್ಲಿ ಚತುಷ್ಪಥವಾಗಿದ್ದು, ಮಂಗಳೂರಿಗೆ ಹೋಗುವ ಬದಿಯ ಸೇತುವೆಯಲ್ಲಿ ಬಿರುಕು ಮೂಡಿದೆ. ಘನ ವಾಹನಗಳು ಸಂಚರಿಸುವಾಗ ಇಲ್ಲಿ ಬಲವಾದ ಶಬ್ದ ಕೇಳಿಬರುತ್ತಿದೆ. ಇತ್ತೀಚೆಗೆ ಮುರಿದು ಬಿದ್ದ ಮೂಲರಪಟ್ಣ ಸೇತುವೆಯಲ್ಲೂ ಕೆಲವು ತಿಂಗಳ ಹಿಂದೆ ಇದೇ ರೀತಿ ಬಿರುಕು ಕಾಣಿಸಿಕೊಂಡಿತ್ತು. ಆಗಲೂ ಸ್ಥಳೀಯರು ಎಚ್ಚರಿಸಿದ್ದರು. ಸಂಬಂಧಪಟ್ಟವರು ನಿರ್ಲಕ್ಷ್ಯ ತೋರಿದ್ದರು. ಕೆಲವೇ ದಿನಗಳಲ್ಲಿ ಸೇತುವೆಯೇ ನೀರುಪಾಲಾಗಿತ್ತು.

ಈ ಸೇತುವೆಯ ಅಡಿ ಭಾಗದಿಂದ ನೇತ್ರಾವತಿ ನದಿಗೆ ಮರಳು ಸಾಗಾಟದ ಲಾರಿಗಳು ಬೇಸಗೆಯಲ್ಲಿ ಇಳಿಯುತ್ತಿದ್ದವು. ಇದೇ ಸೇತುವೆಯ ಅಡಿಭಾಗದಲ್ಲಿ ಈಗ ಡಾಮಾರು ಮಿಶ್ರಣ ಮಾಡುವ ಯಂತ್ರೋಪಕರಣ ನಿರ್ವಹಿಸುವ ಹಿಂದಿ ಮಾತನಾಡುವ ಕಾರ್ಮಿಕರು ವಾಸ್ತವಿಸಿದ್ದಾರೆ.

ಕಾಂಕ್ರೀಟ್‌ ಸೇತುವೆ ಜೋಡಣೆಯ ನಡುವಿನ ಸಂದು ಅಗಲವಾಗಿದ್ದು ಇನ್ನಷ್ಟು ಗ್ಯಾಪ್‌ ಹೆಚ್ಚುತ್ತಿದೆ. ವಾಹನದಲ್ಲಿ ಸಂಚರಿಸುವ ಮಂದಿಗೆ ಇದು ಗಮನಕ್ಕೆ ಬರುವುದಿಲ್ಲ. ನಡೆದು ಹೋಗುವಾಗ ಮಾತ್ರ ಗೋಚರಕ್ಕೆ ಬರುತ್ತದೆ ಎನ್ನುತ್ತಾರೆ.

ಮೂಲರಪಟ್ಣ ಸೇತುವೆ ಬೀಳುವಾಗ ಇದೇ ರೀತಿಯ ಗ್ಯಾಪ್‌ ಗರ್ಡರ್‌ಗಳಲ್ಲಿ, ಬಳಿಕ ಸೇತುವೆಯ ಡಾಮರು ರಸ್ತೆಯಲ್ಲಿ ಕಂಡು ಬಂದಿತ್ತು. ಇಲ್ಲಿಯೂ ಸೇತುವೆಗೆ ಕಾಂಕ್ರಿಟ್‌ ಪಿಲ್ಲರ್‌ ಇದೆ. ಪಿಲ್ಲರ್‌ ಅಡಿಭಾಗ ಯಾವುದೇ ರೀತಿಯಲ್ಲಿ ಕುಸಿದಿರುವುದು ಕಾಣುವುದಿಲ್ಲ. ಆದರೆ ಗರ್ಡರ್‌ ಮತ್ತು ರಸ್ತೆಯಲ್ಲಿ ಬಿರುಕು ಸ್ಪಷ್ಟವಾಗಿ ಕಾಣುತ್ತದೆ.

ಇಲ್ಲಿ ರಸ್ತೆ ಚತುಷ್ಪಥವಾಗಿದ್ದು ಮಂಗಳೂರಿಗೆ ಹೋಗುವ ರಸ್ತೆಯಲ್ಲಿರುವ ಸೇತುವೆಯಲ್ಲಿ ಈ ಬಿರುಕು ಕಾಣಿಸಿಕೊಂಡಿದೆ. ಮಳೆಗಾಲಕ್ಕೆ ಪೂರ್ವದಲ್ಲಿ ಇದು ಸಣ್ಣದಾಗಿದ್ದು ಪ್ರಸ್ತುತ ಮಳೆಯ ಬಳಿಕ ಬಿರುಕು ದೊಡ್ಡಾದಾಗಿದೆ ಎಂದಿದ್ದಾರೆ.

ಈ ಸೇತುವೆಯ ತಳಪಾಯ ಗಟ್ಟಿ ಮಣ್ಣಿನಲ್ಲಿ ನಿರ್ಮಾಣ ಆಗಿದೆ. ನೇತ್ರಾವತಿಯಲ್ಲಿ ನೆರೆ ಬಂದಾಗ ಬಂಟ್ವಾಳ ಮಂಗಳೂರು ಸಂಪರ್ಕದ ಈ ರಸ್ತೆ ಮುಳುಗುವ ಮೂಲಕ ಸಂಚಾರ ಅಡಚಣೆ ಸಮಸ್ಯೆ ಎದುರಿಸುತ್ತಿತ್ತು. ಇದರಿಂದಾಗಿ ಒಂದು ದಶಕದ ಹಿಂದೆ ನೆರೆಮುಕ್ತ ಹೆದ್ದಾರಿ ನಿರ್ಮಾಣ ಆಗಿತ್ತು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا