Urdu   /   English   /   Nawayathi

ಇಟಲಿ ಮಹಿಳೆ ಮೇಲೆ ರೇಪ್‌: ಮುಂಬಯಿ ಟೂರಿಸ್ಟ್‌ ಗೈಡ್‌ ಅರೆಸ್ಟ್‌

share with us

ಮುಂಬಯಿ: 03 ಜುಲೈ (ಫಿಕ್ರೋಖಬರ್ ಸುದ್ದಿ) ಕಳೆದ ಜೂನ್‌ ತಿಂಗಳಲ್ಲಿ ನಗರ ಹೊರವಲಯದ ಜುಹೂ ನಲ್ಲಿ ಇಟಲಿಯ ಮಹಿಳೆಯೊಬ್ಬಳನ್ನು ಕ್ಯಾಬ್‌ ನಲ್ಲೇ ರೇಪ್‌ ಮಾಡಿದ ಆರೋಪದ ಮೇಲೆ ಮುಂಬಯಿ ಪೊಲೀಸರು 27ರ ಹರೆಯದ ಟೂರಿಸ್ಟ್‌ ಗೈಡ್‌ ನನ್ನು ಬಂಧಿಸಿದ್ದಾರೆ.

ಬಂಧಿತ ಗೈಡ್‌ ನನ್ನು ರಾಕೇಶ್‌ ನಂದಿ ಎಂದು ಗುರುತಿಸಲಾಗಿದೆ. ರೇಪ್‌ ಗೆ ಗುರಿಯಾಗಿದ್ದ ಮಹಿಳೆ ಎರಡು ದಿನಗಳ ಹಿಂದೆ ನೀಡಿದ ದೂರನ್ನು ಅನುಸರಿಸಿ ಪೊಲೀಸರು ನಿನ್ನೆ ಸೋಮವಾರ ಆರೋಪಿ ರಾಕೇಶ್‌ ನಂದಿಯನ್ನು ದಕ್ಷಿಣ ಮುಂಬಯಿಯಲ್ಲಿ ಸೆರೆ ಹಿಡಿದರು ಎಂದು ಕ್ರೈಮ್‌ ಬ್ರಾಂಚ್‌ನ ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ತನ್ನ ಮೇಲಿನ ರೇಪ್‌ ಘಟನೆಯನ್ನು ಮಹಿಳೆಯು ಇಟಲಿ ದೂತಾವಾಸಕ್ಕೆ ತಿಳಿಸಿದ್ದಳು. ಅಲ್ಲಿನವರು ಸ್ಥಳೀಯ ಪೊಲೀಸರಲ್ಲಿ ಕೇಸು ದಾಖಲಿಸುವಂತೆ ಆಕೆಗೆ ಸೂಚಿಸಿದರು. ಆ ಪ್ರಕಾರ ಜುಹೂ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಯಿತು.

ಇಟಲಿ ಮಹಿಳೆಯು ಕಳೆದ ವರ್ಷ ಡಿಸೆಂಬರ್‌ ನಲ್ಲಿ ಭಾರತಕ್ಕೆ ಬಂದು ಜೂನ್‌ 11ರಂದು ಮುಂಬಯಿಗೆ ಆಗಮಿಸಿದ್ದಳು. 

ಉ, ವಾ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا