Urdu   /   English   /   Nawayathi

ನೀರವ್ ಸೆರೆಗೆ ರೆಡ್‌ಕಾರ್ನರ್ ನೋಟೀಸ್

share with us

ನವದೆಹಲಿ: 02 ಜುಲೈ (ಫಿಕ್ರೋಖಬರ್ ಸುದ್ದಿ) ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಬಂಧನಕ್ಕೆ ಇಂಟರ್ ಪೋಲ್,  ರೆಡ್ ಕಾರ್ನರ್ (ಅಂತಾರಾಷ್ಟ್ರೀಯ ವಾರಂಟ್) ನೋಟೀಸ್ ಜಾರಿ ಮಾಡಿದೆ.

  • ನೀರವ್ ಬಂಧನಕ್ಕೆ ರೆಡ್ ಕಾರ್ನರ್ ನೋಟೀಸ್
  •  ಸಾವಿರಾರು ಕೋಟಿ ರೂ ವಂಚಿಸಿ
  • ವಿದೇಶಕ್ಕೆ ಪರಾರಿಯಾಗಿರುವ ನೀರವ್
  •  ಈಗಾಗಲೇ ಆರೋಪಪಟ್ಟಿ ಸಲ್ಲಿಸಿರುವ ಸಿಬಿಐ
  •  ಜಾರಿ ನಿರ್ದೇಶನಾಲಯದಿಂದಲೂ ಆಸ್ತಿ ಮುಟ್ಟುಗೋಲು

ಸರ್ಕಾರಿ ಸ್ವಾಮ್ಯದ ಪಿಎನ್‌ಬಿ ಗೆ ೧೪ ಸಾವಿರ ಕೋಟಿ ರೂಪಾಯಿಗಳನ್ನು ವಂಚಿಸಿರುವ ನೀರವ್ ಮೋದಿ ಭಾರತಕ್ಕೆ ಬೇಕಾದ ವ್ಯಕ್ತಿಯಾಗಿದ್ದಾನೆ. ಈತನನ್ನು ಬಂಧಿಸುವಂತೆ ಸದಸ್ಯ ರಾಷ್ಟ್ರಗಳನ್ನು ಇಂಟರ್ ಪೋಲ್ ಒತ್ತಾಯಿಸಿದೆ.

ವಂಚನೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಈಗಾಗಲೇ ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ಮೋದಿ ಸಹೋದರ ನಿಶಾಲ್  ವಿರುದ್ಧ ಆರೋಪಪಟ್ಟಿ ಸಿಬಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.  ಬೆಲ್ಜಿಯಂ ರಾಷ್ಟ್ರದ ಪ್ರಜೆಯಾಗಿದ್ದು, ಕಂಪನಿಯೊಂದರ ಎಕ್ಸಿಕ್ಯೂಟಿವ್ ಆಗಿ ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಪಾರಬ್ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲಾಗಿದೆ.

ಫೆ.೧೫ರಂದು ಮೋದಿ, ಚೋಕ್ಸಿ ಮತ್ತು ನಿಶಾಲ್ ವಿರುದ್ಧ ಸಿಬಿಐ ಸಿಬಿಐ ಇಂಟರ್ ಪೋಲ್ ಮುಖಾಂತರ ಪ್ರಸರಣ ನೋಟೀಸ್ ಜಾರಿ ಮಾಡಿದೆ. ಈ ಮೂಲಕ ತಲೆಮರೆಸಿಕೊಂಡಿರುವ ಸ್ಥಳದ ಮಾಹಿತಿ ಹಂಚಿಕೊಳ್ಳಲು ಇಂಟರ್ ಪೋಲ್ ಸದಸ್ಯ ರಾಷ್ಟ್ರಗಳಿಗೆ ನೋಟೀಸ್ ರವಾನಿಸಲಾಗಿದೆ.

ಪಿಎನ್ ಬಿ ಹಗರಣ ಬೆಳಕಿಗೆ ಬರುತ್ತಿದ್ದಂತೆ ರಾಷ್ಟ್ರ ರಾಜಕಾರಣದಲ್ಲಿ  ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದವು. ಸಂಸತ್ತಿನ ಉಭಯ ಸದನಗಳಲ್ಲೂ ಕೋಲಾಹಲವೆಬ್ಬಿಸಿದ್ದ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಕಲಾಪಕ್ಕೂ ಅಡ್ಡಿಪಡಿಸಿ ನೀರವ್ ಮೋದಿ ಬಂಧನಕ್ಕೆ ಒತ್ತಾಯಿಸಿದ್ದವು.

ಈಗಾಗಲೇ ಈ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀರವ್ ಮೋದಿ ನಿವಾಸದ ಮೇಲೆ ದಾಳಿ ನಡೆಸಿ ಐಷರಾಮಿ ಕಾರುಗಳು, ವಾಚ್, ವಜ್ರದ ಉಂಗುರ ಸೇರಿದಂತೆ ಕೋಟ್ಯಂತರ ರೂ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಂಚನೆ ನಡೆದಿರುವುದು ದೇಶದ ಅರ್ಥವ್ಯವಸ್ಥೆಗೂ ಭಾರೀ ಪೆಟ್ಟು ಬಿದ್ದಿತ್ತು.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا