Urdu   /   English   /   Nawayathi

ಲೈಂಗಿಕ ಹಿಂಸೆ? ಗಾಯಕ ಅಂಕಿತ್‌ ತಿವಾರಿ ತಂದೆಗೆ ಹೊಡೆದ ಕಾಂಬ್ಳಿ ಪತ್ನಿ

share with us

ಮುಂಬಯಿ: 02 ಜುಲೈ (ಫಿಕ್ರೋಖಬರ್ ಸುದ್ದಿ) ಮಾಜಿ ಭಾತೀಯ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಅವರೀಗ ಹೊಸ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಕಾಂಬ್ಳಿ ಅವರ ಪತ್ನಿ ಆ್ಯಂಡ್ರಿಯಾ ಅವರು ಇನ್‌ ಆರ್ಬಿಟ್‌ ಮಾಲ್‌ನಲ್ಲಿ ಗಾಯಕ ಅಂಕಿತ್‌ ತಿವಾರಿ ಅವರ ತಂದೆ, 59ರ ಹರೆಯ ರಾಜೇಂದ್ರ ತಿವಾರಿ ಅವರು ತನ್ನನ್ನು ಅನುಚಿತವಾಗಿ ಪದೇ ಪದೇ ಸ್ಪರ್ಶಿಸಿದರೆಂಬ ಕಾರಣಕ್ಕೆ ತನ್ನ ಕೈಯಲ್ಲಿದ್ದ ಬ್ಯಾಗಿನಿಂದ ಹೊಡೆದಿರುವುದಾಗಿ ವರದಿಯಾಗಿದೆ. ಸಿಸಿಟಿವಿ ಚಿತ್ರಿಕೆಯಲ್ಲಿ ಆ್ಯಂಡ್ರಿಯಾ ಅವರು ರಾಜೇಂದ್ರ ತಿವಾರಿ ಅವರಿಗೆ ಹೊಡೆಯುತ್ತಿರುವ ದೃಶ್ಯ ದಾಖಲಾಗಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ. 

ಘಟನೆಯನ್ನು ಅನುಸರಿಸಿ ಕಾಂಬ್ಳಿ ಕೂಡ ರಾಜೇಂದ್ರ ತಿವಾರಿ ಮತ್ತು ಆತನ ಸಹೋದರ ಅಂಕುರ್‌ ಅವರೊಂದಿಗೆ ಮಾತಿನ ಜಗಳ ನಡೆಸಿ ಬಳಿಕ ಆತನ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿರುವುದಾಗಿ ತಿಳಿದು ಬಂದಿದೆ. 

ಆ್ಯಂಡ್ರಿಯಾ ದೂರಿರುವ ಪ್ರಕಾರ 'ಆರೋಪಿ ರಾಜೇಂದ್ರ ತಿವಾರಿ ತನ್ನನ್ನು ಕೆಟ್ಟ ಉದ್ದೇಶದಿಂದ ಪದೇ ಪದೇ ಮುಟ್ಟಿದಾನೆ. ಆತನ ಲೈಂಗಿಕ ಹಿಂಸೆಯನ್ನು ತಾಳಿಕೊಳ್ಳಲು ಸಾಧ್ಯವಾಗದೆ ಆತನಿಗೆ ಹೊಡೆದು ಬುದ್ಧಿಕಲಿಸಬೇಕಾಯಿತು'. 

ತನ್ನ ಪತ್ನಿಯ ಮೇಲೆ ಮಾಲ್‌ ನಲ್ಲಿ ಮೂವರು ದಾಳಿ ಮಾಡಿದ್ದಾರೆ ಎಂದು ಕಾಂಬ್ಳಿ ಎಫ್ಐಆರ್‌ನಲ್ಲಿ ಹೇಳಿದ್ದಾರೆ. ಇವರಲ್ಲಿ ಗಾಯಕ ಅಂಕಿತ್‌ ತಿವಾರಿ ತಂದೆ ರಾಜೇಂದ್ರ ತಿವಾರಿ ಮತ್ತು ಆತನ ಸಹೋದರ ಅಂಕುರ್‌ ಸೇರಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا