Urdu   /   English   /   Nawayathi

ನೋ ಡೌಟ್, ಉತ್ತರ ಕೊರಿಯ ಅಣ್ವಸ್ತ್ರ ನಾಶಪಡಿಸಲಿದೆ : ಟ್ರಂಪ್

share with us

ವಾಷಿಂಗ್ಟನ್: 02 ಜುಲೈ (ಫಿಕ್ರೋಖಬರ್ ಸುದ್ದಿ) ತನ್ನ ಬಳಿ ಇರುವ ಅಣ್ವಸ್ತ್ರಗಳನ್ನು ನಾಶಪಡಿಸಲು ಉತ್ತರ ಕೊರಿಯ ಮನಸು ಮಾಡಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಕಳೆದ ಜೂ.12ರಂದು ಸಿಂಗಾಪುರದಲ್ಲಿ ಟ್ರಂಪ್ ಮತ್ತು ಉತ್ತರ ಕೊರಿಯ ಅಧ್ಯಕ್ಷ ಕಿಮ್-ಜಂಗ್ ನಡುವೆ ನಡೆದ ಮಾತುಕತೆ ಸಂದರ್ಭದಲ್ಲಿ ಅಣ್ವಸ್ತ್ರ ನಾಶಪಡಿಸುವ ಬಗ್ಗೆ ಒಡಂಬಡಿಕೆಯಾಗಿತ್ತು. ಆದರೆ ಅಮೆರಿಕ ಮಾಧ್ಯಮಗಳು ಅಣ್ವಸ್ತ್ರ ನಾಶಪಡಿಸುವುದಾಗಿ ಉತ್ತರ ಕೊರಿಯ ಆಶ್ವಾಸನೆ ನೀಡಿದ್ದರೂ ತನ್ನ ಅಣ್ವಸ್ತ್ರಗಳನ್ನು ರಹಸ್ಯವಾಗಿ ಕಾಯ್ದಿಟ್ಟುಕೊಂಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರಂಪ್ ಅವರು, ಉತ್ತರಕೊರಿಯ ವರ್ತನೆ ಬಗ್ಗೆ ಯಾವುದೇ ಅನುಮಾನ ಬೇಡ. ಕಿಮ್-ಜಂಗ್ ಮತ್ತು ನನ್ನ ನಡುವೆ ಉತ್ತಮ ಬಾಂಧವ್ಯವಿದೆ. ಕೊಟ್ಟ ಮಾತಿನಂತೆ ಅವರು ತನ್ನ ಬಳಿ ಇರುವ ಎಲ್ಲ ಅಣ್ವಸ್ತ್ರಗಳನ್ನು ನಾಶಗೊಳಿಸಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا