Urdu   /   English   /   Nawayathi

ನಾವಿಲ್ಲಿ ಬದುಕಲಾರೆವು; ಭಾರತಕ್ಕೆ ಮರಳುವೆವು: ಅಫ್ಘಾನ್‌ ಸಿಕ್ಖರ ಅಳಲು

share with us

ಕಾಬೂಲ್‌: 02 ಜುಲೈ (ಫಿಕ್ರೋಖಬರ್ ಸುದ್ದಿ) ನಿನ್ನೆ ಭಾನುವಾರ ಪೂರ್ವ ಅಫ್ಘಾನಿಸ್ಥಾನದ ಜಲಾಲಾಬ್‌ನಲ್ಲಿ ನಡೆದಿದ್ದ  ಆತ್ಮಾಹುತಿ ಬಾಂಬ್‌ ಸ್ಫೋಟಕ್ಕೆ ಸಿಕ್ಖ್ ಸಮುದಾಯ 13 ಮಂದಿ ಬಲಿಯಾಗಿದ್ದು "ನಾವಿನ್ನು ಇಲ್ಲಿಬದುಕಲಾರೆವು; ಭಾರತಕ್ಕೆ ಮರಳುವೆವು' ಎಂದು ಭಯಭೀತರಾಗಿರುವ ಸಮುದಾಯದ ಸದಸ್ಯರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅಂತೆಯೇ ಅಫ್ಘಾನಿಸ್ಥಾನದ ಈ ಭಾಗದಲ್ಲಿ ವಾಸವಾಗಿರುವ ಸಿಕ್ಖ್ ಸಮುದಾಯದವು ತಮ್ಮ ಮೂಲ ದೇಶವಾಗಿರುವ ನೆರೆಯ ಭಾರತಕ್ಕೆ ಮರಳಲು ಬಯಸಿದೆ. 

ಇಸ್ಲಾಮಿಕ್‌ ಉಗ್ರ ಸಂಘಟನೆ ನಡೆಸಿದ್ದ ಬಾಂಬ್‌ ಸ್ಫೋಟಕ್ಕೆ ಬಲಿಯಾದ ಸಿಕ್ಖರಲ್ಲಿ ಮುಖ್ಯವಾಗಿರುವವರೆಂದರೆ ಈ ವರ್ಷ ಅಕ್ಟೋಬರ್‌ ಮಹಾ ಚುನಾವಣೆಯ ಏಕೈಕ ಸಿಕ್ಖ್ ಅಭ್ಯರ್ಥಿಯಾಗಿರುವ ಅವತಾರ್‌ ಸಿಂಗ್‌ ಖಾಲ್ಸಾ, ಸಿಕ್ಖ್ ಸಮುದಾಯದ ಪ್ರಮುಖ ಕಾರ್ಯಕರ್ತ ರಾವೇಲ್‌ ಸಿಂಗ್‌. 

"ನಾವಿನ್ನು ಇಲ್ಲಿ ಬದುಕಲಾರೆವು ಎಂಬುದು ನನಗೀಗ ಸ್ಪಷ್ಟವಾಗಿದೆ.  ಇಸ್ಲಾಮಿಕ್‌ ಉಗ್ರರಿಗೆ ನಮ್ಮ ಧರ್ಮ ಸಹಿಸಲಾಗುತ್ತಿಲ್ಲ ನಾವು ಅಫ್ಘಾನಿಗಳು. ಸರಕಾರ ನಮ್ಮನ್ನು ಮಾನ್ಯ ಮಾಡುತ್ತದೆ. ಆದರೆ ನಾವು ಮುಸ್ಲಿಮರಲ್ಲ ಎಂಬ ಕಾರಣಕ್ಕೆ ಉಗ್ರರು ನಮ್ಮನ್ನು ಬಲಿ ಪಡೆಯುತ್ತಿದ್ದಾರೆ' ಎಂದು 35 ವರ್ಷ ಪ್ರಾಯದ ತೇಜ್‌ವೀರ್‌ ಸಿಂಗ್‌ ಹೇಳಿದ್ದಾರೆ. ಹಿಂದು ಮತ್ತು ಸಿಕ್ಖರ ರಾಷ್ಟ್ರ ಮಂಡಳಿಯ ಕಾರ್ಯದರ್ಶಿಯಾಗಿರುವ ಇವರು ತಮ್ಮ ಚಿಕ್ಕಪ್ಪನನ್ನು ಸ್ಫೋಟದಲ್ಲಿ ಕಳೆದುಕೊಂಡಿದ್ದಾರೆ. 

ಅಫ್ಘಾನಿಸ್ಥಾನದಲ್ಲೀಗ ಸಿಕ್ಖ್ ಕುಟುಂಬಗಳ ಸಂಖ್ಯೆ 300ಕ್ಕಿಂತ ಕಡಿಮೆ ಇವೆ. ಇಷ್ಟು ಕುಟುಂಬಗಳಿಗೆ ಇಲ್ಲಿ ಎರಡೇ ಗುರುದ್ವಾರಗಳಿವೆ : ಒಂದು ಜಲಾಲಾಬಾದ್‌ನಲ್ಲಿ, ಇನ್ನೊಂದು ಕಾಬೂಲ್‌ನಲ್ಲಿ ಎಂದು ಸಿಂಗ್‌ ಹೇಳಿದರು. 

1990ರ ದಶಕದಲ್ಲಿ ಸಂಭವಿಸಿದ ವಿನಾಶಕಾರಿ ಅಂತಃಕಲಹಕ್ಕೆ ಮುನ್ನ ಅಫ್ಘಾನಿಸ್ಥಾನದಲ್ಲಿ 2,50,000 ಸಿಕ್ಖರು ಮತ್ತು ಹಿಂದುಗಳು ಇದ್ದರು. ಇಂದು ಇಡಿಯ ಅಫ್ಘಾನಿಸ್ಥಾನ ಮುಸ್ಲಿಮರ ದೇಶವಾಗಿದೆ ಎಂದವರು ಹೇಳಿದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا