Urdu   /   English   /   Nawayathi

ಪೆಟ್ರೋಲ್‌ಗೆ ಶೇ.28 ಜಿಎಸ್‌ಟಿ

share with us

ನವದೆಹಲಿ: 30 ಜೂನ್ (ಫಿಕ್ರೋಖಬರ್ ಸುದ್ದಿ) ಪೆಟ್ರೋಲ್‌ ಹಾಗೂ ಡೀಸೆಲ್‌ ಅನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಒಳಪಡಿಸಿದರೆ, ಅದನ್ನು ಅತಿ ಹೆಚ್ಚಿನ ತೆರಿಗೆ ಸ್ಲಾಬ್‌ ಶೇ. 28ಕ್ಕೆ ನಿಗದಿಸಲಾಗುತ್ತದೆ. ಜೊತೆಗೆ ರಾಜ್ಯಕ್ಕೂ ತೆರಿಗೆ ವಿಧಿಸುವ ಅವಕಾಶ ವಿರುತ್ತದೆ ಎಂದು ಬಿಹಾರ ಡಿಸಿ ಎಂ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ. ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲು ಇನ್ನೂ ಕಾಲಾವಕಾಶ ಬೇಕಿದೆ. ಯಾಕೆಂದರೆ ರಾಜ್ಯಗಳಲ್ಲಿ ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ ಎಂದು ಸುಶೀಲ್‌ ಹೇಳಿದ್ದಾರೆ.

ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸಿದರೂ, ಬೆಲೆಯಲ್ಲಿ ಹೆಚ್ಚೇನೂ ಪರಿಣಾಮ ಆಗುವುದಿಲ್ಲ. ಶೇ. 45-50ರಷ್ಟು ತೆರಿಗೆ ಆದಾಯ ರಾಜ್ಯಗಳಿಗೆ ಪೆಟ್ರೋಲ್‌ ಹಾಗೂ ಡೀಸೆಲ್‌ನಿಂದಲೇ ಲಭ್ಯವಾಗುತ್ತದೆ. ಸದ್ಯಕ್ಕೆ ಜಿಎಸ್‌ಟಿ ರಿಟರ್ನ್ ಫೈಲಿಂಗ್‌ ವ್ಯವಸ್ಥೆಯ ಮೇಲೆ ಜಿಎಸ್‌ಟಿ ಸಮಿತಿ ಗಮನ ಹರಿಸಲಿದೆ. ನಂತರದಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

1 ಕೋಟಿ ಹೊಸ ತೆರಿಗೆದಾರರು: ತೆರಿಗೆ ಸಂಗ್ರಹ ಮತ್ತು ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಜಿಎಸ್‌ಟಿ ನಂತರ ಗಮನಾರ್ಹ ಏರಿಕೆಯಾಗಿದೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. 2018 ಮಾರ್ಚ್‌ನಲ್ಲಿ ಕೊನೆಯಾದ ವಿತ್ತ ವರ್ಷದಲ್ಲಿ 6.86 ಕೋಟಿ ತೆರಿಗೆದಾರರು ತೆರಿಗೆ ಪಾವತಿ ಮಾಡಿದ್ದಾರೆ. ಹೊಸದಾಗಿ 1.06 ಕೋಟಿ ಹೊಸ ತೆರಿಗೆದಾರರು ಸೃಷ್ಟಿಯಾಗಿದ್ದಾರೆ. ಅತ್ಯಂತ ಪ್ರಮುಖ ಸಂಗತಿಯೆಂದರೆ, ವೈಯಕ್ತಿಕ ತೆರಿಗೆ ವಿಭಾಗದಲ್ಲಿ ಶೇ.44ರಷ್ಟು ಏರಿಕೆಯಾಗಿದೆ ಮತ್ತು ಕಾರ್ಪೊರೇಟ್‌ ತೆರಿಗೆ ವಿಭಾಗದಲ್ಲಿ ಶೇ. 17ರಷ್ಟು ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا