Urdu   /   English   /   Nawayathi

ಪ್ರಾಣ ಉಳಿಸಿದ ಲಂಚ್‌ ಬ್ರೇಕ್‌!

share with us

ಮುಂಬೈ: 30 ಜೂನ್ (ಫಿಕ್ರೋಖಬರ್ ಸುದ್ದಿ) ಲಘು ವಿಮಾನ ಪತನದ ವೇಳೆ ಕಾರ್ಮಿಕರೆಲ್ಲರೂ ಊಟಕ್ಕೆಂದು ಹೋಗದೇ ಇದ್ದಿದ್ದರೆ ಮಾಯಾ ನಗರಿ ಮಾರಣ ಹೋಮಕ್ಕೆ ಸಾಕ್ಷಿಯಾಗುತ್ತಿತ್ತು! ಗುರುವಾರ ಪೂರ್ವ ಮುಂಬೈನ ಘಾಟೋಪರ್‌ನಲ್ಲಿ ಖಾಸಗಿ ಲಘು ವಿಮಾನ ಪತನವಾದ ಸಂದರ್ಭದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ 40ಕ್ಕೂ ಹೆಚ್ಚು ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. 1.11ರ ಸುಮಾರಿಗೆ ಘಟನೆ ಸಂಭವಿಸಿದ್ದು, ಕೆಲವೇ ನಿಮಿಷ ಮೊದಲು ಎಲ್ಲರೂ ಊಟದ ವಿರಾಮದಲ್ಲಿದ್ದರು. ಊಟಕ್ಕೆ ಕೊಂಚ ತಡವಾಗಿ ಹೋಗಿದ್ದರೂ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುತ್ತಿತ್ತು. ಅದೃಷ್ಟವಶಾತ್‌ ಕಾರ್ಮಿಕರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಆದರೆ, ಮೂವರು ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ದು ಎದೆಗೆ ಗುದ್ದಿದಂತಿತ್ತು: ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕ ನರೇಶ್‌ ನಿಶಾದ್‌, ""ನಾವು ಊಟಕ್ಕೆ ಹೋಗದೇ ಇದ್ದಿದ್ದರೆ ನಮ್ಮ ಸಾವು ಖಚಿತವಾಗುತ್ತಿತ್ತು. ವಿಮಾನ ಪತನಗೊಂಡಿರುವ ಮಹಡಿಯ ಮೇಲೆ ಕೆಲಸ ಮಾಡುತ್ತಿದ್ದೆವು. ಒಮ್ಮೆಲೇ ಭಾರೀ ಸದ್ದು ಕೇಳಿಸಿತು. ಆ ಸದ್ದು ಎದೆಗೇ ಗುದ್ದಿದಂತಿತ್ತು. ಸುಟ್ಟು ಕರಕಲಾದ ಕೆಲ ಲೋಹದ ತುಂಡುಗಳು ನಾವಿದ್ದ ಕಡೆ ಬಂದು ಬಿದ್ದವು. ಒಮ್ಮೆಲೇ ಹೊಗೆ ಆವರಿಸಿಕೊಂಡಿತು. ಏನಾಯಿತು ಎಂದು ಗೊತ್ತಾ ಗಿದ್ದೇ ವಿಮಾನ ಕೆಳಕ್ಕೆ ಉರುಳಿ ಹೊತ್ತಿ ಉರಿಯು ತ್ತಿದುದನ್ನು ನೋಡಿದ ಮೇಲೆ'' ಎಂದಿದ್ದಾರೆ.

"ರೋಗಗ್ರಸ್ತ ವಿಮಾನ'ದಲ್ಲಿ ಹೊರಟಿದ್ದೇನೆ
ಪತನಗೊಂಡ ಲಘು ವಿಮಾನದಲ್ಲಿ ಟೇಕ್‌ಆಫ್ ಮಾಡುವುದಕ್ಕೂ ಕೆಲವೇ ಗಂಟೆಗಳ ಮೊದಲು, ಇಂಜಿನಿಯರ್‌ ಸೌರಭಿ ಗುಪ್ತಾ ಅವರು ತಮ್ಮ ತಂದೆಗೆ ಕರೆ ಮಾಡಿ "ರೋಗಗ್ರಸ್ತ ವಿಮಾನ'ದಲ್ಲಿ ಪ್ರಯಾಣಿಸುತ್ತಿದ್ದೇನೆ ಎಂದು ಹೇಳಿದ್ದರು. ದುರದೃಷ್ಟವಶಾತ್‌ ಗುಪ್ತಾ ಘಟನೆಯಲ್ಲಿ ಬದುಕುಳಿದಿಲ್ಲ. ಗುಪ್ತಾ ವಿಮಾನದಲ್ಲಿದ್ದ ನಾಲ್ವರಲ್ಲಿ ಒಬ್ಬರಾಗಿದ್ದಾರೆ. ಪುತ್ರಿಯನ್ನು ಕಳೆದುಕೊಂಡ ಎಸ್‌.ಪಿ.ಗುಪ್ತಾ ಅವರು ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆ ಹೇಳಿಕೊಂಡು ದು:ಖ ತೋಡಿಕೊಂಡಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا