Urdu   /   English   /   Nawayathi

ಜಮ್ಮು:ವ್ಯಾಪಕ ಮಳೆಯಿಂದ ಪ್ರವಾಹ ಭೀತಿ; ಅಮರನಾಥ ಯಾತ್ರೆ ಸ್ಥಗಿತ

share with us

ಜಮ್ಮು: 30 ಜೂನ್ (ಫಿಕ್ರೋಖಬರ್ ಸುದ್ದಿ) ಕಣಿವೆ ರಾಜ್ಯ ಪ್ರವೇಶಿಸಿರುವ ಮುಂಗಾರು ಅಬ್ಬರಿಸುತ್ತಿದ್ದು ಜಮ್ಮು ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಪಹಲ್‌ಗಾಮ್‌ ಮಾರ್ಗದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. 

ಶುಕ್ರವಾರವೂ ಪ್ರತೀಕೂಲ ಹವಾಮಾನದ ಕಾರಣ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಯಾತ್ರೆ ಆರಂಭಿಸಿದ 3 ನೇ ತಂಡವನ್ನು ಟಿಕ್ರಿ ಬೇಸ್‌ ಕ್ಯಾಂಪ್‌ನಲ್ಲೇ ಉಳಿಸಿಕೊಳ್ಳಲಾಗಿದೆ. 

ಝೀಲಂ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ. 

ಮಳೆ ಮುಂದುವರಿದಿದ್ದು, ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ಬಿರುಸಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದ್ದು, ತಗ್ಗು ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. 

ಉ, ವಾ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا