Urdu   /   English   /   Nawayathi

ಅಮೇರಿಕದಲ್ಲಿ ಪತ್ರಿಕಾ ಕಛೇರಿ ಮೇಲೆ ಗುಂಡಿನ ದಾಳಿ. ಐವರ ಸಾವು

share with us

ಮೇರಿಲ್ಯಾಂಡ್: 30 ಜೂನ್ (ಫಿಕ್ರೋಖಬರ್ ಸುದ್ದಿ) ಶುಕ್ರವಾರ ಬೆಳ್ಳಂಬೆಳಗ್ಗೆ ಅಮೆರಿಕದ ಶಸ್ತ್ರಧಾರಿಯೋರ್ವ ಪತ್ರಿಕಾ ಸಂಸ್ಥೆಯ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಪತ್ರಿಕಾ ಸಂಸ್ಥೆಯ ಐವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.

ಅಮೆರಿಕದ ಮೇರಿಲ್ಯಾಂಡ್ ರಾಜಧಾನಿ ಅನ್ನಾಪೋಲಿಸ್‌ನ ದಿ ಕ್ಯಾಪಿಟಲ್ ಗೆಜೆಟ್ ಪತ್ರಿಕಾ ಕಚೇರಿ ಮೇಲೆ ಶಸ್ತ್ರಧಾರಿಯೋರ್ವ ಗುಂಡಿನ ದಾಳಿ ನಡೆಸಿದ್ದು,  ಈ ವೇಳೆ ಕಚೇರಿಯಲ್ಲಿದ್ದ ಐವರು ಸಿಬ್ಬಂದಿಗಳು ಗುಂಡೇಟಿನಿಂದ ಸಾವಿಗೀಡಾಗಿದ್ದಾರೆ.

ವಿಚಾರ ತಿಳಿದ ಕೂಡಲೇ ಅನ್ನಾಪೋಲಿಸ್‌ನ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಸುಮಾರು 2 ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ದಾಳಿಕೋರನನ್ನು ಬಂಧಿಸಿದ್ದಾರೆ. ಪ್ರಸ್ತುತ ಕಚೇರಿಯನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದು, ಕಟ್ಟಡವನ್ನು ತೀವ್ರ ಶೋಧಕ್ಕೆ ಒಳಪಡಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ಸತ್ತವರ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا