Urdu   /   English   /   Nawayathi

ಟಿಬೆಟ್‌ನಲ್ಲಿ ಚೀನ ಸಮರಾಭ್ಯಾಸ

share with us

ಬೀಜಿಂಗ್‌: 30 ಜೂನ್ (ಫಿಕ್ರೋಖಬರ್ ಸುದ್ದಿ) ಟಿಬೆಟ್‌ನಲ್ಲಿ ಕೇಂದ್ರೀಕೃತವಾಗಿರುವ ಚೀನದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಹಿಮಾಲಯ ಪರ್ವತದ ಅತ್ಯಂತ ದುರ್ಗಮ ಪ್ರದೇಶವಾಗಿರುವ ಕ್ವಿಂಘೈ ಟಿಬೆಟ್‌ ಎಂಬಲ್ಲಿ ಸಮರಾಭ್ಯಾಸ ನಡೆಸಿದೆ. ಭಾರತದ ಜತೆಗೆ ಡೋಕ್ಲಾಂ ವಿವಾದ ಪರಿಹಾರವಾದ ಬಳಿಕ ಇದೇ ಮೊದಲ ಬಾರಿಗೆ ಚೀನ ಹಿಮಾಲಯದ ಪ್ರದೇಶದಲ್ಲಿ ಇಂಥ ತರಬೇತಿಯನ್ನು ನಡೆಸಿದೆ.

ಯುದ್ಧ ಸನ್ನದ್ಧತೆ ಮತ್ತು ನಾಗರಿಕರು ಹಾಗೂ ಸೇನೆಯ ನಡುವೆ ಸಮನ್ವಯತೆ ಕಾಪಾಡಿಕೊಳ್ಳಲು ಈ ತರಬೇತಿ ನಡೆಸಲಾಗಿದೆ ಎಂದು ಅಲ್ಲಿನ ಸರಕಾರಿ ಮಾಧ್ಯಮ "ಗ್ಲೋಬಲ್‌ ಟೈಮ್ಸ್‌' ವರದಿ ಮಾಡಿದೆ. ಆದರೆ ಈ ಭಾಗದಲ್ಲಿ ಇನ್ನೂ ಬೌದ್ಧ ಧರ್ಮಗುರು ದಲಾಯಿ ಲಾಮಾ ಅವರ ಪ್ರಭಾವ ಹೆಚ್ಚಿರುವ ಹಿನ್ನೆಲೆಯಲ್ಲಿ, ಇದನ್ನು ಕಡಿಮೆ ಮಾಡುವ ಸಂಬಂಧ ಚೀನವು ಈ ಮಿಲಿಟರಿ ಅಭ್ಯಾಸ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಜತೆಗೆ ಸ್ಥಳೀಯರ ನಡುವೆ ಉತ್ತಮ ಸಂಪರ್ಕ ಏರ್ಪಟ್ಟರೆ ಸಮ ನ್ವಯತೆಗೂ ಅನುಕೂಲವಾಗುತ್ತದೆ ಎಂಬ ಚಿಂತನೆ ಚೀನದ್ದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا