Urdu   /   English   /   Nawayathi

ಮುಂದಿನ ತಿಂಗಳು ಎಐಎಂಪಿಎಲ್‍ಬಿ ಮಹತ್ವದ ಸಭೆ, ಅಯೋಧ್ಯೆ ವಿವಾದ ಚರ್ಚೆ ನಿರೀಕ್ಷೆ

share with us

ಲಕ್ನೋ: 28 ಜೂನ್ (ಫಿಕ್ರೋಖಬರ್ ಸುದ್ದಿ) ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‍ಬಿ) ಮಹತ್ವದ ಕಾರ್ಯಕಾರಿ ಸಭೆ ಜುಲೈ 15ರಂದು ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ನಡೆಯಲಿದ್ದು, ಅಯೋಧ್ಯೆ ವಿವಾದ ಚರ್ಚೆಯಾಗುವ ನಿರೀಕ್ಷೆ ಇದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಪರ ಕೆಲವು ನಾಯಕರು ಮೊನ್ನೆಯಷ್ಟೇ ನೀಡಿದ್ದ ಹೇಳಿಕೆಗಳ ಬೆನ್ನಲ್ಲೇ ಎಐಎಂಪಿಎಲ್‍ಬಿ ಸಭೆ ನಡೆಯುತ್ತಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ.

ಜುಲೈ 15ರಂದು ಮಂಡಳಿಯ 41 ಸದಸ್ಯರು ಒಂದು ದಿನದ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಇಸ್ಲಾಮಿಕ್ ಸೆಮಿನಾರಿ ನಡ್ವಾ ಸಮಾವೇಶ ನಡೆಯಲಿದೆ. ಇದರಲ್ಲಿ ಅಯೋಧ್ಯೆ ವಿಷಯವೂ ಚರ್ಚೆಯಾಗಲಿದೆ. ಇತ್ತೀಚೆಗೆ ಅಯೋಧ್ಯೆ ವಿವಾದದ ಬಗ್ಗೆ ಪ್ರಚೋದನಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಸಭೆಯಲ್ಲಿ ಈ ವಿಚಾರವೂ ಮಾತುಕತೆಗೆ ಬರಲಿದೆ ಎಂದು ಮಂಡಳಿ ಸದಸ್ಯ ಮೌಲಾನಾ ಖಾಲಿದ್ ರಷೀದ್ ಫರಂಗಿ ಮೆಹಲಿ ಹೇಳಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا