Urdu   /   English   /   Nawayathi

ಎಚ್ಚರಿಕೆ ಕಡೆಗಣಿಸಿ ಉಗ್ರರಿಗೆ ಹಣಕಾಸು ನೆರವು: ಪಾಕ್‌ grey listಗೆ

share with us

ಪ್ಯಾರಿಸ್‌, ಫ್ರಾನ್ಸ್‌: 28 ಜೂನ್ (ಫಿಕ್ರೋಖಬರ್ ಸುದ್ದಿ) ನೀಡಲಾಗಿದ್ದ  ಎಲ್ಲ  ಎಚ್ಚರಿಕೆಗಳನ್ನು ಕಡೆಗಣಿಸಿ ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ಮುಂದುವರಿಸಿರುವ ಪಾಕಿಸ್ಥಾನವನ್ನು ಫ್ರಾನ್ಸ್‌ನ ಉಗ್ರ ನಿಗ್ರಹ ಹಣಕಾಸು ಕಗ್ಗಾವಲು ಸಂಸ್ಥೆಯಾಗಿರುವ ಫಿನಾನ್ಶಿಯಲ್‌ ಟಾಸ್ಕ್ ಫೋರ್ಸ್‌ (ಎಫ್ಎಟಿಎಫ್) ಅಧಿಕೃತವಾಗಿ "ಗ್ರೇ ಲಿಸ್ಟ್‌' ಗೆ ಸೇರಿಸಿದೆ.

ಪ್ಯಾರಿಸ್‌ನಲ್ಲಿ ಈಚೆಗೆ ನಡೆದಿರುವ ಎಫ್ಎಟಿಎಫ್ ಮಹಾಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಪಾಕಿಸ್ಥಾನ ಹಲವು ಎಚ್ಚರಿಕೆಗಳನ್ನು ಸಂಪೂರ್ಣವಾಗಿ ಅಲಕ್ಷಿಸಿ ತನ್ನ ನೆಲದಲ್ಲಿ  ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ನೀಡುವುದನ್ನು ಮುಂದುವರಿಸಿದೆ ಎಂದು ಸಭೆ ಹೇಳಿತು.

ಎಫ್ಎಟಿಎಫ್ ಎನ್ನುವುದು ಒಂದು ಕಣ್ಗಾವಲು ಸಂಸ್ಥೆಯಾಗಿದ್ದು ಇದು ಜಗತ್ತಿನಾದ್ಯಂತ ಭಯೋತ್ಪಾದಕ ಸಂಘಟನೆಗಳಿಗೆ ನಿಗೂಢವಾಗಿ ಒದಗುವ ಹಣಕಾಸು ನೆರವು ಮತ್ತು ಒಟ್ಟಾರೆಯಾಗಿ ನಡೆಯುವ ಹಣ ದುರುಪಯೋಗ ವಿದ್ಯಮಾನಗಳ ಮೇಲೆ ಹದ್ದಿನ ಕಣ್ಣಿಡುತ್ತದೆ. 

ಪಾಕಿಸ್ಥಾನವನ್ನು ಎಫ್ಎಟಿಎಫ್ ಗ್ರೇ ಲಿಸ್ಟ್‌ ಗೆ ಸೇರಿಸುವ ಉಪಕ್ರಮಕ್ಕೆ ಮುನ್ನ ಪಾಕಿಸ್ಥಾನದ ಮಧ್ಯಾವಧಿ ಹಣಕಾಸು ಸಚಿವ ಡಾ. ಶಂಶದ್‌ ಅಖ್‌ತರ್‌ ಅವರು ಪಾಕ್‌ ಉಗ್ರರಿಗೆ ದೊರಕುತ್ತಿರುವ ಹಣಕಾಸು ನೆರವನನ್ನು ತಡೆಯುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಪಾಕಿಸ್ಥಾನವನ್ನು ಗ್ರೇ ಲಿಸ್ಟ್‌ ಗೆ ಸೇರಿಸಬಾರದೆಂದು ಬಿನ್ನವಿಸಿಕೊಂಡರು ಎಂಬುದಾಗಿ ಪಾಕಿಸ್ಥಾನದ ಖಾಸಗಿ ಟಿವಿ ಚ್ಯಾನಲ್‌ ಜಿಯೋ ನ್ಯೂಸ್‌ ವರದಿ ಮಾಡಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا