Urdu   /   English   /   Nawayathi

ಮಲೇಷ್ಯಾ ಮಾಜಿ ಪ್ರಧಾನಿ ನಿವಾಸಗಳಿಂದ 273 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳು ವಶ

share with us

ಕೌಲಾಲಂಪೂರ್: 28 ಜೂನ್ (ಫಿಕ್ರೋಖಬರ್ ಸುದ್ದಿ) ಮಲೇಷ್ಯಾದ ಪದಚ್ಯುತ ಪ್ರಧಾನಮಂತ್ರಿ ನಜೀಬ್ ರಜಾಕ್ ಅವರಿಗೆ ಸೇರಿದ ಆರು ಸ್ಥಳಗಳಿಂದ ನಗದು ಸೇರಿದಂತೆ 273 ದಶಲಕ್ಷ ಡಾಲರ್ ಮೌಲ್ಯದ ದುಬಾರಿ ವಸ್ತುಗಳನ್ನು ಪಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.  26 ವಿವಿಧ ಕರೆನ್ಸಿಗಳ 28.8 ದಶಲಕ್ಷ ಡಾಲರ್ ನಗದು, 12,000 ಆಭರಣ ತುಣುಕುಗಳು, ನೂರಾರು ಲಕ್ಷುರಿ ಹ್ಯಾಂಡ್‍ಬ್ಯಾಗ್‍ಗಳು ಹಾಗೂ ಸಾಕಷ್ಟು ಸಂಖ್ಯೆಯ ದುಬಾರಿ ಕೈಗಡಿಯಾರಗಳೂ ಸೇರಿದಂತೆ ಒಟ್ಟು 910 ದಶಲಕ್ಷ ರಿಂಗ್ಗಿಟ್‍ಗಳ(273 ದಶಲಕ್ಷ ಡಾಲರ್‍ಗಳು) ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಾಣಿಜ್ಯ ಅಪರಾಧ ವಿಭಾಗದ ಪೊಲೀಸ್ ಮುಖ್ಯಸ್ಥ ಅಮರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಾರೀ ಭಷ್ಟಾಚಾರಗಳ ಆರೋಪಗಳಿಂದಾಗಿ ಚುನಾವಣೆಯಲ್ಲಿ ಆಘಾತಕಾರಿ ಸೋಲು ಅನುಭವಿಸಿದ ನಜೀಬ್ ನೇತೃತ್ವದ ಆಡಳಿತರೂಢ ಸಮ್ಮಿಶ್ರ ಸರ್ಕಾರವು ಕಳೆದ ತಿಂಗಳ ಚುನಾವಣೆಯಲ್ಲಿ ಮಹತಿರ್ ಮಹಮದ್ ನಾಯಕತ್ವದ ಸುಧಾರಣಾವಾಧಿ ಮೈತ್ರಿಕೂಟದಿಂದ ಪರಾಭವಗೊಂಡಿತ್ತು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا