Urdu   /   English   /   Nawayathi

ಬಿಗಿ ಭದ್ರತೆ ನಡುವೆ ಅಮರನಾಥ ಯಾತ್ರೆ ಆರಂಭಿಸಿದ ಮೊದಲ ತಂಡದ

share with us

ಜಮ್ಮು: 27 ಜೂನ್ (ಫಿಕ್ರೋಖಬರ್ ಸುದ್ದಿ) ಅಭೂತಪೂರ್ವ ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರೆಯ ಯಾತ್ರಾರ್ಥಿಗಳ ಮೊದಲ ತಂಡವು ಜಮ್ಮುವಿನ ಭಗವಂತ್ ನಗರದ ಮೂಲ ಶಿಬಿರದಿಂದ ಇಂದು ಮುಂಜಾನೆ ಪ್ರಯಾಣ ಬೆಳೆಸಿತು. ಅಮರನಾಥ ಯಾತ್ರಿಕರ ಪ್ರಥಮ ತಂಡಕ್ಕೆ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್.ಸುಬ್ರಹ್ಮಣ್ಯಂ ಹಾಗೂ ರಾಜ್ಯಪಾಲ ಎನ್.ಎನ್.ವೋಹ್ರಾ ಅವರ ಸಲಹೆಗಾರರಾದ ಬಿ.ಬಿ.ವ್ಯಾಸ್ ಮತ್ತು ವಿಜಯ್‍ಕುಮಾರ್ ಹಸಿರು ನಿಶಾನೆ ತೋರಿ ಪ್ರಯಣಕ್ಕೆ ಚಾಲನೆ ನೀಡಿದರು.

ವಿವಿಧ ರಾಜ್ಯಗಳ ಯಾತ್ರಿಕರು ಬಾಲ್‍ತಾಲ್ ಮತ್ತು ಪಹಲ್‍ಗಾಂನ ಎರಡು ಮೂಲ ಶಿಬಿರಗಳಿಂದ ಭದ್ರತಾಪಡೆಗಳ ಭಾರೀ ಬಂದೋಬಸ್ತ್‍ನಲ್ಲಿ ವಾಹನಗಳ ಮೂಲಕ ಪ್ರಯಾಣ ಬೆಳೆಸಿದರು. ನಾಳೆಯಿಂದ ಅವರು 3,880 ಮೀಟರ್‍ಗಳಷ್ಟು ಎತ್ತರದಲ್ಲಿರುವ ಗುಹಾಂತರ ದೇವಾಲಯಕ್ಕೆ ಪಾದಯಾತ್ರೆ ಕೈಗೊಳ್ಳಲಿದ್ದಾರೆ.

ವಿಶ್ವ ವಿಖ್ಯಾತ ಅಮರನಾಥ ಯಾತ್ರೆಗೆ ಭಯೋತ್ಪಾದಕರ ದಾಳಿ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಯಾತ್ರಿಕರ ರಕ್ಷಣೆಗಾಗಿ ಹಿಂದೆಂದೂ ಕಂಡು ಕೇಳರಿಯದ ಬಿಗಿ ಭದ್ರತೆ ಒದಗಿಸಲಾಗಿದೆ.  ಈ ಉದ್ದೇಶಕ್ಕಾಗಿ ಸಿಆರ್‍ಪಿಎಫ್‍ನ ವಿಶೇಷ ಮೋಟಾರ್ ಬೈಕ್ ದಳವನ್ನು ನಿಯೋಜಿಸಲಾಗಿದ್ದು, ಯಾತ್ರಿಕರ ಪ್ರತಿಯೊಂದು ವಾಹನಕ್ಕೆ ರೇಡಿಯೋ ಫ್ರಿಕೆನ್ಸಿ(ಆರ್‍ಎಫ್) ಟ್ಯಾಗ್ ಅಳವಡಿಸಲಾಗಿದೆ. ಇದರಿಂದಾಗಿ ಯಾತ್ರಾರ್ಥಿಗಳಿಗೆ ಪೂರ್ಣ ಪ್ರಮಾಣದ ಭದ್ರತೆ ಇರುತ್ತದೆ.

ಇದೇ ಪ್ರಥಮ ಬಾರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‍ಪಿಎಫ್)ಯ ವಿಶೇಷ ಬೈಕ್ ಸ್ಕ್ವಾಡ್ ನಿಯೋಜಿಸಲಾಗಿದೆ. ಈ ದಳವನ್ನು ಯಾತ್ರಿಕರು ಮತ್ತು ಯಾತ್ರಾ ಮಾರ್ಗದ ಸುರಕ್ಷತೆ ಮತ್ತು ಭದ್ರತೆಗಾಗಿ ಬಳಸಲಾಗುವುದು. ಇದೇ ವೇಳೆ ಯಾತ್ರಿಕರಿಗಾಗಿ ಅವಶ್ಯ ಇರುವ ಕಡೆ ಮಿನಿ ಆಂಬ್ಯುಲೆನ್ಸ್ ರೂಪದಲ್ಲಿ ಉಪಯೋಗಿಸಲಾಗುವುದು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا