Urdu   /   English   /   Nawayathi

50 ಕೋಟಿ ಮಂದಿ ಸಾಮಾಜಿಕ ಭದ್ರತೆ: ಮೋದಿ

share with us

ನವದೆಹಲಿ: 27 ಜೂನ್ (ಫಿಕ್ರೋಖಬರ್ ಸುದ್ದಿ) `ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ಇದರಿಂದಾಗಿ ದೇಶದ 50 ಕೋಟಿ ಜನ ಫಲಾನುಭವಿಗಳಾಗಲಿದ್ದಾರೆ. 2014ಕ್ಕೆ ಹೋಲಿಸಿದರೆ ಇದು 10 ಪಟ್ಟು ಹೆಚ್ಚು’ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. `ಭಾರತ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಬದುಕಿನ ಅನಿಶ್ಚಿತತೆಗಳನ್ನು ತೊಡೆದು ಹಾಕಲು ಸಹಾಯಕವಾಗುತ್ತವೆ’ ಎಂದೂ ಅವರು ಹೇಳಿದ್ದಾರೆ.’

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಾಮಾಜಿಕ ಭದ್ರತೆಯ ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ ನಡೆಸುತ್ತಿದ್ದರು. 2014ರಲ್ಲಿ 5 ಕೋಟಿಯಿದ್ದ ಫಲಾನುಭವಿಗಳು ಈಗ 50 ಕೋಟಿಗೆ ಹೆಚ್ಚಿದ್ದಾರೆ.

ಪ್ರಧಾನಮಂತ್ರಿ ಜನ್‌ಧನ್ ಯೋಜನೆಯನ್ನು ಹಣಕಾಸು ವಿಭಾಗಕ್ಕೆ ಸೇರಿಸಿದಾಗ ಮೂರು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಲಾಯಿತು. ಬಡವರಿಗೆ ಬ್ಯಾಂಕ್‌ಗಳ ಬಾಗಿಲು ತೆಗೆಯುವುದು, ಸಣ್ಣ ಉದ್ದಿಮೆಗಳಿಗೆ ಬಂಡವಾಳ ದೊರೆಯುವಂತೆ ಮಾಡುವುದು ಹಾಗೂ ಹಣಕಾಸು ಭದ್ರತೆ ಇಲ್ಲದವರಿಗೆ ಭದ್ರತೆ ಒದಗಿಸುವುದಾಗಿತ್ತು.

ಜನ್‌ಧನ್ ಯೋಜನೆಯಡಿ ಈವರೆಗೆ ಸುಮಾರು 28 ಕೋಟಿ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.

ಹೆಚ್ಚು ಮಹಿಳೆಯರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂಬುದು ನನಗೆ ಸಂತಸ ತಂದಿದೆ. ಮಹಿಳೆಯರು ಹಣಕಾಸಿನ ಮುಖ್ಯ ವಾಹಿನಿಯಲ್ಲಿರುವುದು ಮುಖ್ಯಎಂದರು.

ಪ್ರಧಾನಮಂತ್ರಿ ಜೀವನ್ ಭೀಮಾ ಯೋಜನೆ ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ ಮತ್ತು ಅಟಲ್ ಪೆನ್ಷನ್‌ನಂತಹ ಯೋಜನೆಗಳನ್ನು ಪ್ರೋತ್ಸಾಹಿಸುತ್ತಿದೆ ಎಂದರು.

60 ವರ್ಷ ಮೀರಿದ ಹಿರಿಯ ನಾಗರಿಕರಿಗಾಗಿ ಸರ್ಕಾರ ಪ್ರಧಾನ ಮಂತ್ರಿ ವಯಾ ವಂದನ ಯೋಜನೆಯನ್ನು ಆರಂಭಿಸಿದ್ದು, ಇದರಿಂದ 3 ಲಕ್ಷ ಫಲಾನುಭವಿಗಳಾಗಿದ್ದಾರೆ ಎಂದರು.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا