Urdu   /   English   /   Nawayathi

ರಾಬರ್ಟ್‌ ವಾದ್ರಾ ತೆರಿಗೆ ವಂಚನೆ: ರಾಹುಲ್‌ ಗಾಂಧಿಗೆ ಬಿಜೆಪಿ ಪ್ರಶ್ನೆ

share with us

ಹೊಸದಿಲ್ಲಿ: 27 ಜೂನ್ (ಫಿಕ್ರೋಖಬರ್ ಸುದ್ದಿ) "ನಿಮ್ಮ ಭಾವ ರಾಬರ್ಟ್‌ ವಾದ್ರಾ ಅವರಿಗೆ ಸೇರಿರುವ ದಿಲ್ಲಿ ಕಂಪೆನಿಯೊಂದು 25.8 ಕೋಟಿ ರೂ. ಆದಾಯ ತೆರಿಗೆಯನ್ನು ತಪ್ಪಿಸಿಕೊಂಡಿರುವ ಬಗ್ಗೆ ನೀವೇನು ಹೇಳುತ್ತೀರಿ ? ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. 

2010-11ರ ಹಣಕಾಸು ವರ್ಷದ ಆದಾಯ ತೆರಿಗೆಯನ್ನು ಪಾವತಿಸದೆ ಬಾಕಿ ಇರಿಸುವ ರಾಬರ್ಟ್‌ ವಾದ್ರಾ ಅವರ ಕಂಪೆನಿಗೆ ಐಟಿ ಇಲಾಖೆ ನೊಟೀಸ್‌ ಜಾರಿ ಮಾಡಿದೆ. 

"ಈ ಬಗ್ಗೆ  ರಾಹುಲ್‌ ಗಾಂಧಿ ಏನು ಹೇಳ ಬಯಸುತ್ತಾರೆ ಎಂಬುದನ್ನು ನಾವು ತಿಳಿಯಬಯಸುತ್ತೇವೆ' ಎಂದು ಪಾತ್ರ ಹೇಳಿದ್ದಾರೆ. 

ರಾಬರ್ಟ್‌ ವಾದ್ರಾ ಅವರಿಗೆ ಸೇರಿರುವ ದಿಲ್ಲಿಯ ಸ್ಕೈ ಲೈಟ್‌ ಹಾಸ್ಪಿಟಾಲಿಟಿ ಎಲ್‌ಎಲ್‌ಪಿ 2010-11 ರ ಸಾಲಿಗೆ ಬಾಕಿ ಇರಿಸುವ 25.8 ಕೋಟಿ ರೂ. ಆದಾಯ ತೆರಿಗೆಯನ್ನು ಪಾವತಿಸುವಂತೆ ಐಟಿ ಇಲಾಖೆ ನೊಟೀಸ್‌ ಜಾರಿ ಮಾಡಿರುವ ವಿಷಯವನ್ನು ರಿಪಬ್ಲಿಕ್‌ ಟಿವಿ ಚ್ಯಾನಲ್‌ ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮೇಲೆ ವಾಗ್ಧಾಳಿ ಆರಂಭಿಸಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا