Urdu   /   English   /   Nawayathi

ಭೂಪರಿವರ್ತನೆ: ವರದಿ ಆಧರಿಸಿ ಕ್ರಮ

share with us

ಮಂಗಳೂರು: 26 ಜೂನ್ (ಫಿಕ್ರೋಖಬರ್ ಸುದ್ದಿ) ಭೂ ಪರಿವರ್ತನೆ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮೂರು ದಿನಗಳೊಳಗೆ ವರದಿ ನೀಡಲು ಸೂಚಿಸಿದ್ದು, ವರದಿ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ನಗರಾಭಿವೃದ್ಧಿ  ಸಚಿವ ಯು.ಟಿ. ಖಾದರ್‌ ಹೇಳಿದರು.

(ಕೆಯುಐಡಿಎಫ್ಸಿ) ಮಲ್ಲಿಕಟ್ಟೆ ಕಚೇರಿಯಲ್ಲಿ 9/11 ಭೂಪರಿವರ್ತನೆ ಹಾಗೂ ಸ್ಮಾರ್ಟ್‌ ಸಿಟಿ ಯೋಜನೆ ಕುರಿತಂತೆ ಜನ ಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿ ಗಳೊಂದಿಗೆ ಸೋಮ ವಾರ ವಿಶೇಷ ಸಭೆ ನಡೆಸಿ, ಸುದ್ದಿ ಗಾರರ ಜತೆಗೆ ಮಾತನಾಡಿದರು.

ಸ್ಮಾರ್ಟ್‌ಸಿಟಿಗೆ ವೇಗ ಸೂಚನೆ
ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆ ದೇಶಕ್ಕೆ ಮಾದರಿಯಾಗುವಂತೆ ತಯಾರಾಗುತ್ತಿದೆ. ಜನರ ಸಹಭಾಗಿತ್ವ ಅಗತ್ಯ. ಯೋಜನೆಯ ತ್ವರಿತ ಅನುಷ್ಠಾನಕ್ಕೆ ಆಡಳಿತ ನಿರ್ದೇಶಕರಿಗೆ (ಮನಪಾ ಆಯುಕ್ತರು)  ಜವಾಬ್ದಾರಿ ನೀಡಲಾಗಿದೆ ಎಂದರು.

ಮಾನವ ಸಂಪದ ಕ್ರೋಡೀಕರಿಸಿ, ಕೆಲಸ ಚುರುಕಾಗಿ ಸಾಗುವಂತೆ ಮಾಡಲು ಎಸ್‌ಪಿವಿ (ಸ್ಪೆಷಲ್‌ ಪರ್ಪಸ್‌ ವೆಹಿಕಲ್‌) ಎಂಡಿಗೆ ಅಧಿಕಾರ ನೀಡಲಾಗುವುದು. ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ,  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಡಳಿತ ಮಂಡಳಿ ಸಭೆ ನಡೆಸಬೇಕು. ಪಾಲಿಕೆಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ಸಭೆ ಮಾಡಿ ಮೇಲ್ವಿಚಾರಣೆ ನಡೆಸಲಿದ್ದೇವೆ ಎಂದು ಸಚಿವ ಖಾದರ್‌ ಹೇಳಿದರು.

ಸಭೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ,  ಪರಿಷತ್‌ ಸದಸ್ಯ ಐವನ್‌ ಡಿ'ಸೋಜಾ, ಮೇಯರ್‌ ಭಾಸ್ಕರ್‌, ಸ್ಮಾರ್ಟ್‌ಸಿಟಿ ನಿರ್ದೇಶಕರಾದ ಎಂ. ಶಶಿಧರ ಹೆಗ್ಡೆ, ಪ್ರೇಮಾನಂದ ಶೆಟ್ಟಿ, ಲ್ಯಾನ್ಸಿಲಾಟ್‌ ಪಿಂಟೋ, ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್‌, ಕೆಯುಐಡಿಎಫ್ಸಿ ವ್ಯವ ಸ್ಥಾಪಕ ನಿರ್ದೇಶಕ‌ ಎ.ಬಿ. ಇಬ್ರಾಹಿಂ, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌, ಮನಪಾ ಆಯುಕ್ತ ಮೊಹಮ್ಮದ್‌ ನಝೀರ್‌ ಉಪಸ್ಥಿತರಿದ್ದರು.

ಹೆದ್ದಾರಿಯಿಂದ ನಗರದ ಸಂಪರ್ಕ ರಸ್ತೆ ಅಭಿವೃದ್ಧಿ
ಹೆದ್ದಾರಿಯಿಂದ ನಗರವನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ತೊಕ್ಕೊಟ್ಟಿನಿಂದ ಜಪ್ಪಿನಮೊಗರು-ಮಹಾಕಾಳಿಪಡು- ಮೋರ್ಗನ್ಸ್‌ಗೆಟ್‌ ರಸ್ತೆಯನ್ನು ಷಟ್ಪಥ ಅಥವಾ ಚತುಷ್ಪಥಗೊಳಿಸುವ ನಿಟ್ಟಿನಲ್ಲಿ ಸಂಸದರು, ಜನಪ್ರತಿನಿಧಿಗಳ ಜತೆ ಕೇಂದ್ರ ರೈಲ್ವೇ ಸಚಿವರನ್ನು ಭೇಟಿಯಾಗಿ 50:50ರ ಅನುಪಾತದಲ್ಲಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗುವುದು. ಅನುದಾನ ದೊರೆಯದಿದ್ದಲ್ಲಿ  ರಾಜ್ಯ ಸರಕಾರ ಅಥವಾ ಮಹಾನಗರ ಪಾಲಿಕೆ ವತಿಯಿಂದ ಸಮಸ್ಯೆ ಬಗೆಹರಿಸಲಾಗುವುದು. ಜಪ್ಪು ಮೂಲಕ ಮೀನುಗಾರಿಕಾ ಬಂದರಿಗೆ ಸಂಪರ್ಕ ಕಲ್ಪಿಸಲು ಹೊಸ ರಸ್ತೆ ನಿರ್ಮಾಣದ ಬಗ್ಗೆ ಯೋಚಿಸಲಾಗಿದೆ. ಇದನ್ನು ಪರಿಶೀಲಿಸಲು ವಿಶೇಷ ತಂಡವೊಂದನ್ನು ರಚಿಸಿ ಅವರಿಂದ ವಿಸ್ತೃತ ವರದಿ ತರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.

ಮೀನಿಗೆ ರಾಸಾಯನಿಕ ಬಳಕೆ; ಪರಿಶೀಲಿಸಿ ಕ್ರಮ
ಮೀನುಗಳು ಕೆಡದಂತೆ ರಾಸಾಯನಿಕ ಬಳಕೆ ಮಾಡುತ್ತಿರುವ ಆರೋಪಗಳ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಖಾದರ್‌, ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ಸತ್ಯಾಸತ್ಯತೆ ಅರಿಯಲಾಗುವುದು. ಆ ಬಳಿಕ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا