Urdu   /   English   /   Nawayathi

ಜೋಗ ಜಲಧಾರೆಗೆ ಅಡ್ಡಗಾಲು

share with us

ಬೆಂಗಳೂರು: 26 ಜೂನ್ (ಫಿಕ್ರೋಖಬರ್ ಸುದ್ದಿ) ದೇಶದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಜೋಗ್ ಜಲಪಾತದಲ್ಲಿ ಜಲಧಾರೆ ನಿರಂತರವಾಗಿ ಹರೆಯುವಂತೆ ಮಾಡುವ ಮಹತ್ವಕಾಂಕ್ಷಿ ಯೋಜನೆಯೊಂದು ಆಡಳಿತಗಾರರ ನಿರ್ಲಕ್ಷ ಮತ್ತು ಪರಿಸರ, ಅರಣ್ಯ ಇಲಾಖೆಗಳ ಅನುಮತಿಗಳ ನಡುವೆ ಸಿಕ್ಕಿ ನರಳಾಡುತ್ತಿದೆ. ಈ ಯೋಜನೆಯ ಇಂದಿನ ದುಸ್ಥಿತಿಯನ್ನು ಗಮನಿಸಿದರೆ, ಯೋಜನೆ ಸಾಕಾರಗೊಳ್ಳುವುದೆ ಎಂಬ ಅನುಮಾನ ಎದುರಾಗಿದೆ.
ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದೆ ಬಂದಿರುವ ಮಂಗಳೂರು ಮೂಲದ ಅನಿವಾಸಿ ಭಾರತೀಯ ಕೊಟ್ಯಧಿಪತಿ ಬಿ.ಆರ್. ಶೆಟ್ಟಿ ಮತ್ತು ಅವರ ಬಿ.ಆರ್.ಎಸ್. ವೆಂಚಱ್ಸ್ ಇಂಡಿಯಾ, ಯೋಜನೆಗೆ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಸರ್ಕಾರದ ನಿಧಾನ ನಡೆಯಿಂದ ಬೇಸರಗೊಂಡು ಯೋಜನೆಯಿಂದ ಹಿಂದೆ ಸರಿಯಲು ಯೋಚಿಸುತ್ತಿದೆ. `ನಾವು ಇನ್ನು ಸ್ವಲ್ಪ ದಿನ ಕಾಯುತ್ತೇವೆ ಪೂರಕ ವಾತಾವರಣ ಬರಬಹುದು` ಎಂದು ಬಿ.ಆರ್.ಎಸ್. ವೆಂಚಱ್ಸ್ ಪ್ರಧಾನ ವ್ಯವಸ್ಥಾಪಕ ಕುಶಾಲ್ ಶೆಟ್ಟಿ ಹೇಳಿದ್ದಾರೆ.
ಮಳೆಗಾಲದಲ್ಲಿ ಮಾತ್ರ ಜೋಗ್ ಜಲಪಾತದಲ್ಲಿ ಧುಮ್ಮಿಕ್ಕಿ ಹರಿಯುವ ನೀರು ಬೇಸಿಗೆ ಬಂದರೆ ಬತ್ತಿ ಹೋಗುತ್ತದೆ. ಹೀಗಾಗುವುದನ್ನು ತಪ್ಪಿಸಿ ವರ್ಷ ಪೂರ್ತಿ ಜೋಗ್‌ನಲ್ಲಿ ನೀರು ಧುಮುಕುವಂತೆ ಮಾಡುವ ಮೂಲಕ ವರ್ಷ ಪೂರ್ತಿ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಪ್ರವಾಸಿ ತಾಣವನ್ನಾಗಿಸುವ ಈ ಯೋಜನೆ ಬಹು ಹಿಂದೆಯೇ ರೂಪುಗೊಂಡಿತ್ತು.
ಜೋಗ್ ಸುತ್ತಮುತ್ತಲ 120 ಎಕರೆ ಭೂಮಿಯನ್ನು ವಶಪಡಿಸಿ ಅದನ್ನು ನೀರಿನ ಮೂಲವಾಗಿ ಪರಿವರ್ತಿಸಿ ಆ ಮೂಲಕ ಜೋಗ್‌ನಲ್ಲಿ ನೀರು ನಿರಂತರವಾಗಿ ಮಾಡುವುದು ಈ ಯೋಜನೆ ಮೂಲದ್ದೇಶ. ಇಂತಹ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮಂಗಳೂರು ಮೂಲದ ಖ್ಯಾತ ಉದ್ಯಮಿ ಬಿ.ಆರ್. ಶೆಟ್ಟಿ ಕಂಪನಿ ಮುಂದೆ ಬಂದಿತ್ತು. ಮತ್ತು ಯೋಜನೆಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ಪ್ರಸ್ತಾವಕ್ಕೆ 2016ರಲ್ಲಿಯೇ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಂಪುಟ ಅನುಮೋದನೆಯನ್ನು ನೀಡಿತ್ತು. ಆದರೆ ನಂತರದ ಪ್ರಕ್ರಿಯೆ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ. ದೀರ್ಘಕಾಲಿಕ ನೆನೆಗುದಿಗೆ ಬಿದ್ದಿರುವುದರಿಂದ ಬೇಸರಗೊಂಡು ಈ ಯೋಜನೆಯಿಂದಲೇ ಹಿಂದೆ ಸರಿಯಲು ಬಿ.ಆರ್. ಶೆಟ್ಟಿ ಮತ್ತು ಕಂಪನಿ ಮುಂದಾಗಿದೆ.
ಈ ಯೋಜನೆ ಕಾರ್ಯಕ್ಕೆ ಮುಖ್ಯವಾಗಿ ಎದುರಾಗಿರುವ ಅಡೆತಡೆಗಳಲ್ಲಿ ಒಂದನೆಯದು. 120 ಎಕರೆ ಭೂಮಿ ವಶ. ಇದಕ್ಕೆ ಅಲ್ಲಿ ಭೂ ಮಾಲೀಕರು ಸಹಕರಿಸುತ್ತಿಲ್ಲ. ಇವರ ಮನ ಒಲಿಸುವ ಯತ್ನಕ್ಕೆ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಎರಡನೆಯದು ಇದಕ್ಕೆ ಪರಿಸರ ಇಲಾಖೆ ಮತ್ತು ಅರಣ್ಯ ಇಲಾಖೆಗಳ ಅನುಮತಿ ಸಿಗಬೇಕು. ಅನುಮತಿ ಕೋರಿರುವ ಕಡತಗಳು ಇನ್ನು ಆ ಇಲಾಖೆಗಳಲ್ಲೆ ಉಳಿದಿದ್ದು ಸದರಿ ಇಲಾಖೆಗಳಿಂದ ಶೀಘ್ರದಲ್ಲಿ ಅನುಮತಿ ಪಡೆಯುವ ಯತ್ನ ನಡೆಯುತ್ತಿದೆ ಎಂದು ಜೋಗ್ ಆಡಳಿತ ಮಂಡಳಿ ಜಂಟಿ ಕಾರ್ಯದರ್ಶಿ ಮತ್ತು ಸಾಗರ ಸಹಾಯಕ ಆಯುಕ್ತರು ಹೇಳಿದ್ದಾರೆ.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا