Urdu   /   English   /   Nawayathi

ಮುಸ್ಲಿಮರು ಮುಸ್ಲಿಮರಿಗೆ ಓಟ್‌ ಹಾಕಬೇಕು: ಓವೈಸಿ ವಿವಾದಾತ್ಮಕ ಭಾಷಣ

share with us

ಹೈದರಾಬಾದ್‌: 25 ಜೂನ್ (ಫಿಕ್ರೋಖಬರ್ ಸುದ್ದಿ) 'ಭಾರತದಲ್ಲಿ ಜಾತ್ಯತೀತತೆಯನ್ನು ಜೀವಂತವಿರಿಸಲು ಮುಸ್ಲಿಮರು ತಮ್ಮದೇ ಸಮುದಾಯದ ಅಭ್ಯರ್ಥಿಗಳಗೆ ಓಟ್‌ ಹಾಕಬೇಕು' ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. 

ಕಾಂಗ್ರೆಸ್‌ ಮತ್ತು ಭಾರತೀಯ ಜನತಾ ಪಕ್ಷಗಳು ಹಿಂದೂ ಮತಗಳ ಹಿಂದೆ ಬಿದಿದ್ದಾರೆ; ಮುಸ್ಲಿಮರ ಬಗ್ಗೆ ಅವಜ್ಞೆ ತೋರುತ್ತಿದ್ದಾರೆ ಎಂದು ಓವೈಸಿ ಆಪಾದಿಸಿದರು.

ಹೈದರಾಬಾದ್‌ ಸಂಸದರಾಗಿರುವ ಅಸಾದುದ್ದೀನ್‌ ಓವೈಸಿ ಅವರು ವಿವಾದಾತ್ಮಕ ಭಾಷಣ ಮಾಡುತ್ತಾ, "ಕಾಸಿಂ ಸಾವು ನಮ್ಮನ್ನುಆಲೋಚಿಸುವಂತೆ ಮಾಡಿದೆ. ಆದರೆ ಅದಕ್ಕಾಗಿ ನೀವು ಮೊಸಳೆ ಕಣ್ಣೀರು ಸುರಿಸಬೇಕೆಂದು ನಾನು ಹೇಳುತ್ತಿಲ್ಲ. ನಿಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಲು ಬಯಸುತ್ತೇನೆ. ಜಾತ್ಯತೀತತೆಯ ಬಗ್ಗೆ ಮಾತನಾಡುವ ಈ ಜನರು ಬಹಳ ದೊಡ್ಡ ಡಕಾಯಿತರಾಗಿದ್ದಾರೆ;  ದೊಡ್ಡ ಸಮಯಸಾಧಕರಾಗಿದ್ದಾರೆ.ಅವರು ಮುಸ್ಲಿಮರನ್ನು ಕಳೆದ 70 ವರ್ಷಗಳಿಂದ ಉಪಯೋಗಿಸಿಕೊಂಡು ಬಂದಿದ್ದಾರೆ; ಬೆದರಿಕೆ ಹಾಕಿದ್ದಾರೆ; ಸುಮ್ಮಗಿರುವಂತೆ ಬಲವಂತ ಮಾಡಿದ್ದಾರೆ' ಎಂದು ಓವೈಸಿ ಹೇಳಿದರು. 

"ಈಗ ನೀವು ನಿಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾಗಿದೆ; ಈ ದೇಶದಲ್ಲಿ ಜಾತ್ಯತೀತತೆ ಜೀವಂತ ಇರಬೇಕು ಎಂದು ನೀವು ಬಯಸುವುದಾದರೆ ನಿಮಗಾಗಿ ನೀವು ಹೋರಾಡಿ ಎಂದು ನಾನು ಹೇಳುತ್ತೇನೆ. ನೀವೊಂದು ರಾಜಕೀಯ ಶಕ್ತಿಯಾಗಬೇಕು ಎಂದು ಹೇಳುತ್ತೇನೆ. ನಿಮ್ಮ ಸಮುದಾಯದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಿರೆಂದು ಕೇಳಿಕೊಳ್ಳುತ್ತೇನೆ ' ಎಂದು ಓವೈಸಿ ಕರೆ ನೀಡಿದರು. 

ಚಚ್ಚಿ ಸಾಯಿಸಲಾದ ಹಾಪುರ್‌ ಪ್ರಕರಣವನ್ನು ಉಲ್ಲೇಖೀಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಹಿರಂಗ ವಾಕ್‌ ದಾಳಿ ನಡೆಸಿದ ಓವೈಸಿ, "ಅವರು ಕೆಟ್ಟ ಪದಗಳನ್ನು ಬಳಸಿದ್ದಾರೆ; ಎಷ್ಟು ಬಂಧನಗಳನ್ನು ಮಾಡಿದ್ದಾರೆ; ಕೇವಲ ಎರಡು; ಇದನ್ನು ನಿಮ್ಮ ಆಳ್ವಿಕೆಯಡಿಯೇ ಮಾಡಲಾಗಿದೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂಬ ನಿಮ್ಮ ಘೋಷಣೆಯ ಅರ್ಥ ಇದೇ ಏನು?' ಎಂದು ಓವೈಸಿ ಪ್ರಶ್ನಿಸಿದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا