Urdu   /   English   /   Nawayathi

ಪತ್ರಕರ್ತರಿಗೆ ಬೆದರಿಕೆ ಒಡ್ಡಿದ್ದ ಬಿಜೆಪಿ ನಾಯಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

share with us

ನವದೆಹಲಿ: 25 ಜೂನ್ (ಫಿಕ್ರೋಖಬರ್ ಸುದ್ದಿ) ಕಾಶ್ಮೀರ ಪತ್ರಕರ್ತರಿಗೆ ಜೀವ ಬೆದರಿಕೆ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಚೌಧರಿ ಲಾಲ್‌ ಸಿಂಗ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾ ಸೇರಿದಂತೆ ಹಲವು ಸುದ್ದಿ ಸಂಸ್ಥೆಗಳು ಆಗ್ರಹಿಸಿವೆ.

ಭಾರತೀಯ ಮಹಿಳಾ ಪತ್ರಿಕಾ ಮಂಡಳಿ, ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾ, ಪ್ರೆಸ್‌ ಅಸೋಸಿಯೇಷನ್‌ ಹಾಗೂ ಪ್ರೆಸ್‌ ಕ್ಲಬ್‌ ಫೆಡರೇಷನ್‌ ಸಂಸ್ಥೆಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಕಣಿವೆ ರಾಜ್ಯದ ಪತ್ರಕರ್ತರ ವಿರುದ್ಧ ಜೀವ ಬೆದರಿಕೆ ಹೇಳಿಕೆ ನೀಡಿದ್ದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇಟ್ಟಿವೆ.

‘ಇಂತಹ ಹೇಳಿಕೆಗಳು ಪತ್ರಿಕಾ ಸ್ವಾತಂತ್ರಕ್ಕೆ ನೇರ ಹೊಡೆತ ನೀಡುತ್ತವೆ. ಜೊತೆಗೆ ಕಲುಷಿತ ವಾತಾವರಣ ನಿರ್ಮಿಸುವ ಮೂಲಕ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಜೀವಕ್ಕೆ ಆಪತ್ತು ತರಲಿವೆ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಸಿಂಗ್‌, ‘ಸತ್ಯವನ್ನು ಬರೆಯುವ ಮತ್ತು ಉಗ್ರರನ್ನು ಬೆಂಬಲಿಸುವುದರ ನಡುವೆ ಸ್ಪಷ್ಟವಾದ ಗೆರೆ ಎಳೆದುಕೊಳ್ಳಿ ಅಥವಾ ಇತ್ತೀಚೆಗೆ ಹತ್ಯೆಯಾದ ಪತ್ರಕರ್ತ ಶುಜಾತ್‌ ಬುಖಾರಿ ಗತಿಯೇ ನಿಮಗೂ ಬರುತ್ತದೆ’ ಎಂದು ಶುಕ್ರವಾರ ಬೆದರಿಕೆ ಒಡ್ಡಿದ್ದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا