Urdu   /   English   /   Nawayathi

ಅಪಘಾತ: 26 ಮಂದಿ ಬಲಿ : ಆಂಧ್ರ, ತೆಲಂಗಾಣದಲ್ಲಿ ಭೀಕರ ಅಪಘಾತ,

share with us

ಅಮರಾವತಿ/ ಯರಾದ್ರಿ: 24 ಜೂನ್ (ಫಿಕ್ರೋಖಬರ್ ಸುದ್ದಿ) ಆಂದ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ ಕನಿಷ್ಟ 26 ಕ್ಕೂ ಅಧಿಕ ಮಂದಿ ಮೃತಪಟ್ಟು 20ಕ್ಕೂ ಹೆಚ್ಚು ಮಂದಿಗೆ ಗಂಭೀರಗಾಯಗಳಾಗಿರುವ ಧಾರುಣ ಘಟನೆ ಇಂದು ಮುಂಜಾನೆ ಸಂಭವಿಸಿದೆ.

  •  ತೆಲಂಗಾಣ, ಆಂದ್ರದಲ್ಲಿ ಬೆಳ್ಳಂಬೆಳಿಗ್ಗೆ ಅಪಘಾತ.
  •  ಎರಡು ಪ್ರಕರಣಗಳಲ್ಲಿ 26 ಮಂದಿ ಸಾವು
  •  20ಕ್ಕೂ ಅಧಿಕ ಮಂದಿಗೆ ಗಾಯ
  •  ಕರ್ನೂಲ್‌ನಲ್ಲಿ ಬಸ್-ಆಟೋ ಡಿಕ್ಕಿ. 9 ಮಂದಿ ದುರ್ಮರಣ.
  •  ಆಂದ್ರದ ನಂದನಂ ಬಳಿ 16 ಮಂದಿ ಸಾವು
  •  ಮೃತರೆಲ್ಲಾ ಕೂಲಿ ಕಾರ್ಮಿಕರು

ತೆಲಂಗಾಣದ ಸೋಮಯಾಜಪಲ್ಲಿ ಬಳಿ ರಾಜ್ಯ ಸಾರಿಗೆ ಬಸ್ ಮತ್ತು ಆಟೋ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಇವರೆಲ್ಲಾ ಪ್ರಕೃತಿ ಚಿಕಿತ್ಸೆಗೆ ತೆರಳುತ್ತಿದ್ದ ವಯಸ್ಸಾದ ಮಂದಿಯೇ ಅಧಿಕವಾಗಿದ್ಧಾರೆ.

ಆಂದ್ರ ಪ್ರದೇಶದ ಯರಾದ್ರಿ ಬಳಿಕ ನಂದನಂ ಬಳಿ ಟ್ರಾಕ್ಟರ್ ಪಲ್ಪಿ ಹೊಡೆದು ೧೬ಕ್ಕೂ ಹೆಚ್ಚು ಮಂದಿ  ಕಾರ್ಮಿಕರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ೧೫ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕರ್ನೂಲ್-ನಂದ್ಯಾಲ ಹೆದ್ದಾರಿಯಲ್ಲಿ ಬೆಳ್ಳಂಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ. ಬಸ್-ಆಟೋಗೆ ಡಿಕ್ಕಿ ಹೊಡೆದ ರಭಸಕ್ಕೆ ಆಟೋದಲ್ಲಿದ್ದ ೧೩ ಮಂದಿಯ ಪೈಕಿ ೭ ಮಂದಿ ಸ್ಥಳದಲ್ಲಿಯೇ ಮೃತಪಟ್ಟು, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾರೆ.೪ ಮಂದಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಕರ್ನೂಲ್ ಜಿಲ್ಲೆಯ ಕಲ್ಲವಾಡ ಗ್ರಾಮದವರೆಂದು ತಿಳಿದು ಬಂದಿದ್ದು, ಮಹಾನಂದಿ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಗಾಯಾಳುಗಳನ್ನು ಕರ್ನೂಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹೆದ್ದಾರಿಯಲ್ಲಿ ಮೂರು ಆಟೋಗಳು ವಿರುದ್ಧ ದಿಕ್ಕಿನಲ್ಲಿ ಬಂದಿದ್ದವು. ಅದರಲ್ಲಿ ೨ ಆಟೋಗಳು ಸುರಕ್ಷಿತವಾಗಿ ಮುಂದೆ ಹೋದವು. ೩ನೇ ಆಟೋ ಬಸ್‌ಗೆ ಡಿಕ್ಕಿ ಹೊಡೆದ ಈ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತರೆಲ್ಲಾ ಅನಾರೋಗ್ಯ ಪೀಡಿತರು ಮತ್ತು ವಯಸ್ಸಾದವರೇ ಇದ್ದಾರೆ.

ಮಹಾನಂದಿ ಹಳ್ಳಿಯ ಬಳಿಯ ನಂದ್ಯಾಲದಲ್ಲಿ ಪ್ರಕೃತಿ ಚಿಕಿತ್ಸೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.ಆಟೋದಲ್ಲಿದ್ದ ಮಂದಿ ಪೆನುಗೊಂಡ್ಲ ಮತ್ತು ಕಲಪಾರಿ ಹಳ್ಳಿಯವರೂ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಘಟನೆಯ ಸಂಬಂಧ  ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು, ಸಾರಿಗೆ ಸಚಿವ  ಅಚ್ಚುತ ನಾಯ್ಡು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ

ಇನ್ನೂ ತೆಲಂಗಾಣದ ಯರಾದ್ರಿ ಬಳಿಯ ನಂದನಂ ಬಳಿ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ಯಾಕ್ಟರ್ ಪಲ್ಟಿ ಹೊಡೆದು ಸ್ಥಳದಲ್ಲಿಯೇ ೧೬ ಮಂದಿ ಸಾವನ್ನಪ್ಪಿದ್ದು ೧೫ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಗೆ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا