Urdu   /   English   /   Nawayathi

45ನೇ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು..?

share with us

ನವದೆಹಲಿ: 24 ಜೂನ್ (ಫಿಕ್ರೋಖಬರ್ ಸುದ್ದಿ) ಕ್ರೀಡೆಗಳು ದೇಶಗಳು ಮತ್ತು ಮನುಷ್ಯರನ್ನು ಪರಸ್ಪರ ಬೆಸೆಯಲು ಸಹಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಯೋಗಾಸನ ಸಹ ವಿಶ್ವವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈಗ ಯೋಗವು ವೆಲ್‍ನೆಸ್ (ಸೌಖ್ಯ) ಅಭಿಯಾನವಾಗಿ ಲೋಕಪ್ರಿಯವಾಗುತ್ತಿದೆ ಎಂದು ಮೋದಿ ಬಣ್ಣಿಸಿದರು.

ಅಪಾರ ಜನಪ್ರಿಯತೆ ಪಡೆದಿರುವ ಮನ್ ಕಿ ಬಾತ್ (ಮನದ ಮಾತು) ಬಾನುಲಿ ಕಾರ್ಯಕ್ರಮದ 45ನೆ ಆವೃತ್ತಿಯಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದಲ್ಲಿ ಕ್ರೀಡೆ ಮತ್ತು ಯೋಗಾಸನದ ಪ್ರಾಮುಖ್ಯತೆ ಬಗ್ಗೆ ಪ್ರಸ್ತಾಪಿಸಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಭಾರತ ಮತ್ತು ಆಫ್ಘಾನಿಸ್ಥಾನದ ನಡುವೆ ನಡೆದ ಕ್ರಿಕೆಟ್ ಟೆಸ್ಟ್ ಪಂದ್ಯ ಎರಡೂ ದೇಶಗಳ ಬಾಂಧವ್ಯ ಬೆಸುಗೆಯಲ್ಲಿ ನೆರವಾಗಿದೆ. ಇಂತಹ ಕ್ರೀಡೆಗಳಿಂದ ದೇಶಗಳು ಮತ್ತು ಜನರ ನಡುವೆ ಪರಸ್ಪರ ಬೆಸುಗೆ ವೃದ್ಧಿಯಾಗುತ್ತದೆ ಎಂದು ಮೋದಿ ವಿಶ್ಲೇಷಿಸಿದರು.

ಜುಲೈ 1ರಂದು ಅಂತಾರಾಷ್ಟ್ರೀಯ ವೈದ್ಯರ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಪ್ರತಿ ತಿಂಗಳ ಮಾಸಾಂತ್ಯದಲ್ಲಿ ಮೋದಿ ಅವರು ನಡೆಸಿಕೊಡುವ ಮನ್ ಕಿ ಬಾತ್, ಬಾನುಲಿ ಭಾಷಣ, ಪ್ರಚಲಿತ ವಿದ್ಯಮಾನಗಳು ಮತ್ತು ಸಾರ್ವಜನಿಕ ಉಪಯುಕ್ತ ಮಾಹಿತಿಗಳಿಂದ ಮಾಸದಿಂದ ಮಾಸಕ್ಕೆ ಅಪಾರ ಜನಪ್ರಿಯತೆ ಪಡೆಯುತ್ತಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا