Urdu   /   English   /   Nawayathi

ಏರ್ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ, 131 ಪ್ರಯಾಣಿಕರು ಪಾರು

share with us

ಚೆನ್ನೈ: 21 ಜೂನ್ (ಫಿಕ್ರೋಖಬರ್ ಸುದ್ದಿ) (ಪಿಟಿಐ)-ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಪಕ್ಷಿಯೊಂದು ಬಡಿದ ಪರಿಣಾಮ ಸುರಕ್ಷತೆ ದೃಷ್ಟಿಯಿಂದ 131 ಪ್ರಯಾಣಿಕರನ್ನು ವಿಮಾನನಿಲ್ದಾಣಕ್ಕೆ ವಾಪಸ್ ಕರೆತಂದ ಘಟನೆ ಚೆನ್ನೈನಲ್ಲಿ ಇಂದು ಬೆಳಗ್ಗೆ ನಡೆದಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.  ಎಐ-400 ಸಂಖ್ಯೆಯ ವಿಮಾನ ಹಾರಾಟದಲ್ಲಿದ್ದಾಗ ಹಕ್ಕಿಯೊಂದು ಅದಕ್ಕೆ ಬಡಿಯಿತು. ಸುಮಾರು 20 ನಿಮಿಷಗಳ ಗಗನದಲ್ಲಿದ್ದ ವಿಮಾನ ನಂತರ ಚೆನ್ನೈನ ವಿಮಾನ ನಿಲ್ದಾಣಕ್ಕೆ ಹಿಂದಿರುಗಿತು. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಹಾಗೂ ಅವರಿಗೆ ಪರ್ಯಾಯ ವಿಮಾನಗಳ ಮೂಲಕ ದೆಹಲಿ ಪಯಣಕ್ಕೆ ಅನುವು ಮಾಡಿಕೊಡಲಾಯಿತು ಎಂದು ಏರ್ ಇಂಡಿಯಾ ವಕ್ತಾರರೊಬ್ಬರು ಹೇಳಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا