Urdu   /   English   /   Nawayathi

ಉಗ್ರರಿಗೆ ಕೋಟಿಗಟ್ಟಲೆ ಹಣ ಪೂರೈಸುತ್ತಿದ್ದ ಮಾಸ್ಟರ್ ಮೈಂಡ್ ಅರೆಸ್ಟ್

share with us

ಲಕ್ನೋ: 21 ಜೂನ್ (ಫಿಕ್ರೋಖಬರ್ ಸುದ್ದಿ) ಭಯೋತ್ಪಾದಕರಿಗೆ ಒಂದು ಕೋಟಿ ರೂ.ಗಳಿಗೂ ಹೆಚ್ಚು ಹಣ ಪೂರೈಸಿದ ಪ್ರಮುಖ ಆರೋಪಿ ರಮೇಶ್ ಶಾನನ್ನು ಉತ್ತರ ಪ್ರದೇಶ ಉಗ್ರರ ನಿಗ್ರಹ ದಳ (ಎಟಿಎಸ್) ಮತ್ತು ಮಹಾರಾಷ್ಟ್ರ ಪೋಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪುಣೆಯಲ್ಲಿ ಬಂಧಿಸಿದ್ದಾರೆ. ಪಾಕಿಸ್ತಾನ ವ್ಯಕ್ತಿಯೊಬ್ಬನ ಸೂಚನೆ ಮೇರೆಗೆ ವಿವಿಧ ಬ್ಯಾಂಕ್‍ಗಳಿಗೆ ಹಣ ಜಮೆಗೊಳಿಸಿದ ಆರೋಪದ ಮೇಲೆ ಕಳೆದ ಮಾರ್ಚ್‍ನಲ್ಲಿ ಉತ್ತರ ಪ್ರದೇಶದ ಗೋರಖ್‍ಪುರ್‍ನಲ್ಲಿ ಆರು ಜನರನ್ನು ಬಂಧಿಸಲಾಗಿತ್ತು. ಅವರು ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು 28 ವರ್ಷದ ರಮೇಶ್ ಶಾನನ್ನು ಜಂಟಿ ಪಡೆ ಬಂಧಿಸಿದೆ. ಈತ ಉಗ್ರರಿಗೆ ಹಣ ಪೂರೈಸುವ ಪ್ರಮುಖ ಸೂತ್ರಧಾರ ಎನ್ನಲಾಗಿದೆ. ಈತ ಈವರೆಗೆ 1 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಣವನ್ನು ಉಗ್ರರಿಗೆ ಪೂರೈಸಿದ್ದಾರೆ. ಈತನನ್ನು ತೀವ್ರ ತನಿಖೆಗೆ ಒಳಪಡಿಸಿದ ನಂತರ ಮತ್ತಷ್ಟು ಸಂಗತಿಗಳು ಬೆಳಕಿಗೆ ಬರುವ ನಿರೀಕ್ಷೆ ಇದೆ.

21 ಜೂನ್ (ಫಿಕ್ರೋಖಬರ್ ಸುದ್ದಿ)

Prayer Timings

Fajr فجر
Dhuhr الظهر
Asr أسر
Maghrib مغرب
Isha عشا