Urdu   /   English   /   Nawayathi

ಜೀಪಿಗೆ ಟ್ರ್ಯಾಕ್ಟರ್‌ ಟ್ರಾಲಿ ಢಿಕ್ಕಿ: ಒಂದೇ ಕುಟುಂಬದ 12 ಮಂದಿ ಸಾವು

share with us

ಮೊರೆನಾ, ಮಧ್ಯಪ್ರದೇಶ: 21 ಜೂನ್ (ಫಿಕ್ರೋಖಬರ್ ಸುದ್ದಿ) ಇಂದು ಬೆಳಗ್ಗೆ ಟ್ರ್ಯಾಕ್ಟರ್‌ ಟ್ರಾಲಿಯೊಂದು ಜೀಪಿಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ  ಒಂದೇ ಕುಟುಂಬದ 12 ಮಂದಿ ಮಡಿದು ಇತರ ಎಂಟು ಮಂದಿ ಗಾಯಗೊಂಡ ದಾರುಣ ಘಟನೆ ಈ ಜಿಲ್ಲೆಯಲ್ಲಿ ನಡೆದಿದೆ. ಜೀಪಿನಲ್ಲಿದ್ದವರು ಈಚೆಗೆ ಅಗಲಿದ ತಮ್ಮ ಕುಟುಂಬದ ಸದಸ್ಯರೋರ್ವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು 

ಜೀಪಿನಲ್ಲಿ ಒಂದೇ ಕುಟುಂಬದ ಸುಮಾರು ಇಪ್ಪತ್ತು ಮಂದಿ ಪ್ರಯಾಣಿಸುತ್ತಿದ್ದರು. ಹಾಗಾಗಿ ಅದು ಓವರ್‌ಲೋಡ್‌ ಆಗಿತ್ತು. ಈ ಜೀಪಿಗೆ ಬೆಳಗ್ಗೆ 6 ಗಂಟೆಯ ಸುಮಾರಿಗೆ ಗಂಜ್ರಾಮ್‌ಪುರ ಗ್ರಾಮಕ್ಕೆ ಸಮೀಪ ಕ್ರಾಸ್‌ ರೋಡ್‌ ಒಂದರಲ್ಲಿ ಉಸುಕು ತುಂಬಿದ ಟ್ರ್ಯಾಕ್ಟರ್‌ ಟ್ರಾಲಿ ಢಿಕ್ಕಿ ಹೊಡೆಯಿತು ಎಂದು ಮೊರೆನಾ ಎಸ್‌ಪಿ ಅಮಿತ್‌ ಸಾಂಗಿ  ಹೇಳಿದರು. 

ಅಪಘಾತದ ಭೀಕರತೆ ಎಷ್ಟಿತ್ತೆಂದರೆ 12 ಮಂದಿ ಸ್ಥಳದಲ್ಲೇ ಮೃತಪಟ್ಟರು. ಗಾಯಾಳುಗಳಾದ ಇತರ 8 ಮಂದಿಯನ್ನು ಒಡನೆಯೇ ಜಿಲ್ಲಾ ಸರಕಾರಿ ಅಸ್ಪತ್ರೆಗೆ ಸೇರಿಸಲಾಯಿತು. 

ಮೃತಪಟ್ಟವರೆಲ್ಲರೂ ಗ್ವಾಲಿಯರ್‌ ಜಿಲ್ಲೆಯವರಾಗಿದ್ದಾರೆ. ಅವರು ಗುರ್ಗಾನ್‌ ಗ್ರಾಮಕ್ಕೆ ಹೋಗುತ್ತಿದ್ದರು. 

ರಾಷ್ಟ್ರೀಯ ಚಂಬಲ್‌ ಸ್ಯಾಂಕ್‌ಚುವರಿಯಿಂದ ಅಕ್ರಮವಾಗಿ ಉಸುಕು ತುಂಬಿಕೊಂಡು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಟ್ರಾಲಿ ಚಾಲಕ ಅಪಘಾತ ನಡೆದೊಡನೆಯೇ ಪರಾರಿಯಾಗಿದ್ದಾನೆ. 
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا