Urdu   /   English   /   Nawayathi

ಅಂದಾಜು ಮೀರಿದ ಕ್ಷೀರಪಥ ವಿಸ್ತಾರ

share with us

ನಮ್ಮ ಕ್ಷೀರಪಥ ಅಂದಾಜಿಸಿದ್ದಕ್ಕಿಂತ ಹೆಚ್ಚಿನ ವಿಸ್ತಾರ ಹೊಂದಿದೆ ಎಂದು ಹೊಸ ಸಂಶೋದನೆಯೊಂದು ಹೇಳಿದೆ. ಇದರ ಈಗಿನ ವಿಸ್ತಾರ 2 ಲಕ್ಷ ಜ್ಯೋರ್ತಿವರ್ಷಗಳು ಅಥವಾ ಬೆಳಕಿನ ವರ್ಷಗಳಷ್ಟು ವಿಸ್ತಾರದಲ್ಲಿದೆ ಎಂದು ಈ ಕುರಿತ ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.

ಇತ್ತೀಚಿನ ಸಂಶೋಧನೆಯಲ್ಲೂ ಹಿಂದೆ ಅಂದಾಜಿಸಿದ್ದಕ್ಕಿಂತ ನಾವಿರುವ ಕ್ಷೀರಪಥ ದುಪ್ಪಟ್ಟು ವಿಸ್ತಾರವನ್ನು ಹೊಂದಿದೆ ಎಂದು ಹೇಳಿದೆ. 
ಹಿಂದಿನ ಅಂದಾಜಿನಂತೆ ಕ್ಷೀರಪಥದ ವಿಸ್ತಾರ ೧ ಲಕ್ಷ ಜೋರ್ತಿವರ್ಷಗಳು. ಈಗಿನ ಸಂಶೋಧನೆಯಂತೆ ಅದು ೨ ಲಕ್ಷ  ಜೋರ್ತಿವರ್ಷಗಳಷ್ಟು ವಿಸ್ತಾರ ಹೊಂದಿದೆ ಎಂದು ವರದಿಯಲ್ಲಿ ಹೇಳಿದೆ. ಕ್ಷೀರಪಥದ ಅಂಚಿನ ಭಾಗದಲ್ಲಿರುವ ನಮ್ಮ ಸೌರಮಂಡಲದಲ್ಲಿರುವ ಸೂರ್ಯ, ಅದರ ಕೇಂದ್ರಭಾಗದಿಂದ ೨೫,೦೦೦ ಬೆಳಕಿನ ವರ್ಷದಷ್ಟು ದೂರದಲ್ಲಿದ್ದು, ಅದರ ಕೇಂದ್ರಭಾಗವನ್ನು ಸುತ್ತುತ್ತಿದ್ದಾನೆ.

ಬ್ರಹ್ಮಾಂಡದಲ್ಲಿ (ಯೂನಿವರ್ಸ್) ಇರುವ ಕೋಟ್ಯಂತರ ತಾರಾಮಂಡಲಗಳಲ್ಲಿ ನಾವು ವಾಸಿಸುವ ಭೂಮಿ ಇರುವ ತಾರಮಂಡಲವನ್ನು ಕ್ಷೀರಪಥ ಅಥವಾ ಆಕಾಶಗಂಗೆ ಎನ್ನುತ್ತೇವೆ. ಈ ತಾರಾಮಂಡಲ ಹಿಂದಿನ ಅಂದಾಜಿಗಿಂತ 2 ಪಟ್ಟು ವಿಸ್ತಾರದಿಂದ ಕೂಡಿದೆ ಎಂದು ಸ್ಪೇನಿನ ಖಭೌತ ವಿಜ್ಞಾನ ಕೇಂದ್ರದ ಸಂಶೋಧಕ ಮಾರ್ಟಿನ್ ಲೊಪೆಜ್ ಕೊರಡೊರಿಯಾ ಹೇಳಿದ್ದಾರೆ.

ಇದು ಎಷ್ಟು ವಿಸ್ತಾರವಾಗಿದೆ ಎಂದರೆ ಇದರ ಒಂದು ಬದಿಯಿಂದ ಇನ್ನೊಂದು ಬದಿ ತಲುಪಲು ಬೆಳಕಿನ ವೇಗದಲ್ಲಿ ಹೋದರೂ 200,000 ಬೆಳಕಿನ ವರ್ಷಗಳು ಬೇಕು ಎನ್ನಲಾಗಿದೆ.

ನಮ್ಮ ಕ್ಷೀರಪಥ ಸುರುಳಿಯಾಕಾರದಲ್ಲಿದ್ದು, ಮಧ್ಯಭಾಗ ಉಬ್ಬಿದಂತಿದೆ. ಸುತ್ತಲಿನ ಭಾಗ ತೆಳುವಾಗಿದೆ. ಕ್ಷೀರಪಥ ಅಂಚಿನ ತೆಳುವಾದ ಭಾಗದಲ್ಲಿಯೇ ನಮ್ಮ ಭೂಮಿ, ಸೂರ್ಯ-ಚಂದ್ರ ಗ್ರಹಗಳಿರುವ ನಮ್ಮ ಸೌರಮಂಡಲವಿರುವುದು. ಕ್ಷೀರಪಥವನ್ನು ಮೇಲಿನಿಂದ ಗಮನಿಸಿದರೆ, ಇದರ ಮಧ್ಯಭಾಗ ಉಬ್ಬಿರುವ ಭಾಗವಾಗಿದ್ದು, ಇದರ ಸುತ್ತ ನಾಲ್ಕುದೊಡ್ಡ ಸುರುಳಿಯಾಕಾರದ ಬಾಹುಗಳು ಅದರ ಸುತ್ತ ಸುತ್ತುವರೆದಿವೆ. ಕೇಂದ್ರ ಭಾಗದ ಗುರುತ್ವಾಕರ್ಷಣೆಗೊಳಪಟ್ಟು ಇದರಲ್ಲಿಯ ಸೌರಮಂಡಲಗಳು ಇದರ ಕೇಂದ್ರಭಾಗದ ಸುತ್ತ ಸುತ್ತುತ್ತಿರುತ್ತವೆ.

ಎಲ್ಲ ನಕ್ಷತ್ರ ಮಂಡಲಗಳು ಒಂದೇ ಆಕಾರದಲ್ಲಿ ಇರುವುದಿಲ್ಲ. ಕೆಲವು ಸುರುಳಿಯಾಗಿ, ಕೆಲವು ಅಂಡಾಕಾರದಲ್ಲಿ ಇದ್ದರೆ, ಇನ್ನು ಕೆಲವು ಅನಿಗಧಿತ ಆಕಾರದಲ್ಲಿರುತ್ತವೆ. ನಮ್ಮ ಕ್ಷೀರಪಥ ಸುರುಳಿಯ ಆಕಾರದ್ದಾಗಿದೆ. ಖಗೋಳ ವಿಜ್ಞಾನಿಗಳು ಅಂದಾಜಿಸಿರುವಂತೆ ನಮ್ಮ ಕ್ಷೀರಪಥದಲ್ಲಿ ೨೦೦ ಶತಕೋಟಿ ನಕ್ಷತ್ರಗಳಿವೆ. ಇದರ ಮಧ್ಯಭಾಗ ಧೂಳು, ಅನಿಲ ತಾರೆಗಳಿಂದ ಆವರಿಸಿದೆ.

ತಾರಮಂಡಲ ಎಂದರೆ ಗುಂಪು ನಕ್ಷತ್ರಗಳ ವಿಶಾಲಭಾಗ. ಇದನ್ನು ನಕ್ಷತ್ರ ಸಾಗರ ಎಂದರೂ ತಪ್ಪಲ್ಲ. ೨೦ ಶತಕೋಟಿ ವರ್ಷಗಳ ಹಿಂದೆ ಜಗತ್ತು ಸೃಷ್ಟಿಯಾದಾಗ ನಕ್ಷತ್ರಗಳ ಸಮೂಹಗಳು ಸೃಷ್ಠಿಯಾದವು. ಪ್ರಾರಂಭದಲ್ಲಿ ಇವು ಜಲಜನಕ ಮೋಡಗಳಾಗಿದ್ದು, ನಂತರದಲ್ಲಿ ಬೃಹದಾಕಾರದ ಅನಿಲ ಮೋಡಗಳು ಒಟ್ಟುಗೂಡಿ ನಕ್ಷತ್ರಗಳಂತೆ ಪ್ರಕಾಶಿಸತೊಡಗಿದವು.

ಬ್ರಹ್ಮಾಂಡ ಎಂಬುದು ಊಹಿಸಲು ಅಸಾಧ್ಯವಾದ ಎಲ್ಲವನ್ನು ಒಳಗೊಂಡದ್ದಾಗಿದೆ. ಇದು ತಾರಾ ಮಂಡಲಗಳು, ಸೌರ ಮಂಡಲಗಳು, ಗ್ರಹ, ನಕ್ಷತ್ರ, ಆಕಾಶಕಾಯ ಎಲ್ಲವನ್ನೂ ಒಳಗೊಂಡದ್ದು, ಇದರಲ್ಲಿ ೨೦೦ ಶತಕೋಟಿ ತಾರಾ ಮಂಡಲಗಳಿದ್ದು, ನಮ್ಮಕ್ಷೀರಪಥವೂ ಅದರಲ್ಲಿಯ ಒಂದು ತಾರಾಮಂಡಲ.

ಹಬಲ್ ದೂರದರ್ಶಕ ಒದಗಿಸಿರುವ ಮಾಹಿತಿಯಂತೆ ಒಂದೊಂದು ತಾರಾಮಂಡಲದಲ್ಲಿಯೂ ಅಸಂಖ್ಯ ನಕ್ಷತ್ರಗಳಿವೆ. ಒಂದೊಂದು ನಕ್ಷತ್ರದ ವಿಸ್ತಾರ ಸುಮಾರು ೧೦೦,೦೦೦ ಬೆಳಕಿನ ವರ್ಷಗಳಷ್ಟು ವಿಸ್ತಾರ ಹೊಂದಿದೆ.

ನಾವು ಅಂಚಿನಲ್ಲಿದ್ದೇವೆ ಸುರುಳಿಯಾಕಾರದ ಕ್ಷೀರಪಥದಲ್ಲಿ ನಮ್ಮ ಸೌರಮಂಡಲ ಇರುವುದು ಅದರ ತೆಳುವಾದ ಅಂಚಿನ ಭಾಗದಲ್ಲಿ, ಕ್ಷೀರಪಥದ ಮಧ್ಯ ಭಾಗದಿಂದ ನಮ್ಮ ಸೌರಮಂಡಲ ೨೫,೦೦೦ ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ. ಹೀಗಾಗಿ ನಾವಿರುವ ಭೂಗ್ರಹ ಕ್ಷೀರಪಥದ ಅಂಚಿನ ಭಾಗದಲ್ಲಿದೆ.

– ಉತ್ತನೂರು ವೆಂಕಟೇಶ್

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا