Urdu   /   English   /   Nawayathi

ಕರ್ನಾಟಕದ ಮೊದಲ IAF ಫೈಟರ್‌ ಪೈಲಟ್‌ ಆಗಿ ಮೇಘನಾ ಶಾನುಭೋಗ್‌!

share with us

ಬೆಂಗಳೂರು: 17 ಜೂನ್ (ಫಿಕ್ರೋಖಬರ್ ಸುದ್ದಿ) ನಾರಿ ಶಕ್ತಿಗೆ ಸಾಕ್ಷಿ ಯಾಗಿ ಕಾಫಿ ನಾಡು ಚಿಕ್ಕಮಗಳೂರಿನ ಹುಡುಗಿ ಮೇಘನಾ ಶಾನುಭೋಗ್‌ ಅವರು ಭಾರತೀಯ ವಾಯುಪಡೆಯ ಕರ್ನಾಟಕದ ಮೊದಲ ಫೈಟರ್‌ ಪೈಲಟ್‌ ಆಗಿ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಫೈಟರ್‌ ಪೈಲಟ್‌ ಆದ ದಕ್ಷಿಣ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಮೇಘನಾ ಅವರದ್ದು. 

ಚಿಕ್ಕಮಗಳೂರಿನ ಮರ್ಲೆಯಲ್ಲಿ ಜನಿಸಿರುವ ಮೇಘನಾ ಅವರ ತಂದೆ ಎಂ.ಕೆ.ಸುರೇಶ್‌ ವಕೀಲರಾಗಿದ್ದು , ತಾಯಿ ಶೋಭಾ ಅವರು ಉಡುಪಿಯ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಪ್ರಾಥಮಿಕ ಶಿಕ್ಷಣವನ್ನು ಮಹರ್ಷಿ ವಿದ್ಯಾಮಂದಿರ, ಪ್ರೌಢ ಮತ್ತು ಪಿಯುಸಿಯನ್ನು ಬ್ರಹ್ಮಾವರದ ಲಿಟ್ಲರಾಕ್‌ ಶಾಲೆಯಲ್ಲಿ ಪೂರೈಸಿದ ಮೇಘನಾ ಮೈಸೂರು ಚಾಮರಾಜೇಂದ್ರ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಇನ್‌ಫಾರ್ಮೆಷನ್‌ ಟೆಕ್ನಾಲಜಿಯಲ್ಲಿ  ಬಿಇ ಪದವಿಯನ್ನು 2015 ರಲ್ಲಿ ಪೂರೈಸಿದ್ದರು.

ಉ, ವಾ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا