Urdu   /   English   /   Nawayathi

ದೆಹಲಿ ಸಿಎಂ ಕೇಜ್ರಿವಾಲ್- ಲೆಫ್ಟಿನೆಂಟ್ ಗೌರ್ನರ್ ನಡುವೆ ಜಟಾಪಟಿ

share with us

ನವದೆಹಲಿ: 17 ಜೂನ್ (ಫಿಕ್ರೋಖಬರ್ ಸುದ್ದಿ)  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಾಲ್ ನಡುವಣ ಭಿನ್ನಾಭಿಪ್ರಾಯ ಇಂದು ಇನ್ನೊಂದು ಹಂತ ತಲುಪಿದೆ. ರಾಜಧಾನಿಯಲ್ಲಿ ನೀತಿ ಆಯೋಗದ ಸಭೆಯಲ್ಲಿ ತಮ್ಮ ಬದಲಿಗೆ ಭಾಗವಹಿಸಲು ಲೆಫ್ಟಿನೆಂಟ್ ಗೌರ್ನರ್ ಅವರಿಗೆ ತಾವು ಅಧಿಕಾರ ನೀಡಿಲ್ಲ. ಅಲ್ಲಿ ಅವರ ಉಪಸ್ಥಿತಿ ಅನಧಿಕೃತ ಎಂದು ಮುಖ್ಯಮಂತ್ರಿ ಆರೋಪಿಸಿರುವುದು ಇವರಿಬ್ಬರ ನಡುವೆ ಜಟಾಪಟಿ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಿದೆ. ಈ ಕುರಿತು ಟ್ವಿಟ್ ಮಾಡಿರುವ ಕೇಜ್ರಿವಾಲ್. ಸಂವಿಧಾನದ ಯಾವ ನಿಯಮದ ಅಡಿ ನನ್ನ ಬದಲು ಸಭೆಯಲ್ಲಿ ಭಾಗವಹಿಸಿದರು. ನನ್ನ ಬದಲು ಅಲ್ಲಿಗೆ ಹೋಗಲು ನಾನು ಅವರಿಗೆ ತಿಳಿಸಿಲ್ಲ. ಅಲ್ಲದೇ ಆ ಅಧಿಕಾರವೂ ಅವರಿಗಿಲ್ಲ ಎಂದು ಆರೋಪಿಸಿದ್ದಾರೆ.

ಇದಕ್ಕೆ ಸ್ಪಷ್ಟನೆ ನೀಡಿರುವ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅಮಿತಾಭ್ ಕಾಂತ್, ನಾಲ್ಕನೇ ನೀತಿ ಆಯೋಗದ ಸಭೆಯಲ್ಲಿ ಲೆಫ್ಟಿನೆಂಟ್ ಗೌರ್ನರ್ ಭಾಗವಹಿಸಿಲ್ಲ. ಈ ಕುರಿತು ವರದಿ ತಪ್ಪು ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕೇಜ್ರಿ ವರ್ತನೆಗೆ ಲೆ.ಗೌ. ಅನಿಲ್ ಬೈಜಾಲ್ ಕುಪಿತಗೊಂಡಿದ್ಧಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا