Urdu   /   English   /   Nawayathi

ವೆನಿಜುವೆಲ್ಲಾದ ನೈಟ್ ಕ್ಲಬ್‍ನಲ್ಲಿ ಕಾಲ್ತುಳಿತಕ್ಕೆ 19 ಮಂದಿ ಸಾವು

share with us

ಕಾರಾಕಾಸ್: 17 ಜೂನ್ (ಫಿಕ್ರೋಖಬರ್ ಸುದ್ದಿ) ವೆನಿಜುವೆಲ್ಲಾ ರಾಜಧಾನಿ ಕಾರಾಕಾಸ್‍ನ ನೈಟ್ ಕ್ಲಬ್‍ವೊಂದರಲ್ಲಿ ಇಂದು ನಸುಕಿನಲ್ಲಿ ಸಂಭವಿಸಿದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಕನಿಷ್ಠ 19 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಗುಂಪು ಘರ್ಷಣೆಯಲ್ಲಿ ದುಷ್ಕರ್ಮಿಯೊಬ್ಬ ಟಿಯರ್ ಗ್ಯಾಸ್ ಗ್ರೆನೇಡ್ ಸ್ಫೋಟಿಸಿದ್ದರಿಂದ ಉಂಟಾದ ಆತಂಕದಿಂದಾಗಿ ಈ ದುರಂತ ಸಂಭವಿಸಿದೆ.

ರಾಜಧಾನಿ ಹೊರವಲಯದ ಮಧ್ಯಮ ವರ್ಗದ ಜನರೇ ಹೆಚ್ಚಾಗಿ ವಾಸಿಸುವ ಎಲ್ ಪ್ಯಾರೈಸೋದಲ್ಲಿನ ಲಾಸ್ ಕೊಟೊರ್ರೊಸ್ ನೈಟ್‍ಕ್ಲಬ್‍ನಲ್ಲಿ ಪಾರ್ಟಿ ನಡೆಯುತ್ತಿತ್ತು. ಈ ಮೋಜಿನ ಕೂಟದಲ್ಲಿ 500ಕ್ಕೂ ಹೆಚ್ಚು ಮಂದಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆಯಿತು ಎಂದು ವೆನಿಜುವೆಲ್ಲಾ ಒಳಾಡಳಿತ ಸಚಿವ ನೆಸ್ಟೆರ್ ರೆವೆರೊಲ್ ತಿಳಿಸಿದ್ದಾರೆ.
ಮೂರರ ನಸುಕಿನಲ್ಲಿ ದುಷ್ಕರ್ಮಿಯೊಬ್ಬ ಆಶುವ್ರಾಯು ಗ್ರೆನೇಡ್ ಎಸೆದ. ಇದರಿಂದ ಭಯಭೀತರಾದ ಜನರು ದಿಕ್ಕಾಪಾಲಾಗಿ ಓಡಿದಾಗ ನೂಕುನುಗ್ಗಲು ಹಾಗೂ ಕಾಲ್ತುಳಿತ ಉಂಟಾಯಿತು. ಈ ದುರ್ಘಟನೆಯಲ್ಲಿ ಕನಿಷ್ಠ 19 ಮಂದಿ ಮೃತರಾಗಿ ಅನೇಕರು ಗಾಯಗೊಂಡರು ಎಂದು ಅವರು ಹೇಳಿದ್ದಾರೆ.  ಮೃತರಲ್ಲಿ 11 ಮಂದಿ ಉಸಿರುಗಟ್ಟಿ ಸಾವಿಗೀಡಾಗಿದ್ದರೆ, ಇನ್ನೂ ಎಂಟು ಜನರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಮೃತರಲ್ಲಿ ಅರ್ಧದಷ್ಟು ಮಂದಿ 18 ವರ್ಷಗಳಿಗಿಂತ ಕಡಿಮೆ ವಯೋಮಾನದವರು. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا