Urdu   /   English   /   Nawayathi

ಕಸದ ಗೂಡಾಗುತ್ತಿರುವ ಮೌಂಟ್ ಎವರೆಸ್ಟ್

share with us

ಕಠ್ಮಂಡು: 17 ಜೂನ್ (ಫಿಕ್ರೋಖಬರ್ ಸುದ್ದಿ) ಪ್ರಪಂಚದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ತನ್ನ ಸುಂದರತೆ ಕಳೆದುಕೊಳ್ಳುತ್ತಾ ಕಸದ ತೊಟ್ಟಿಯಾಗಿ ಪರಿವರ್ತಿತವಾಗುತ್ತಿದೆ. ಪ್ರಪಂಚದ ಎಲ್ಲಾ ತ್ಯಾಜ್ಯಗಳು ಶಿಖರದ ಅಡಿಯಲ್ಲೇ ಶೇಖರಣೆಯಾಗುತ್ತಿದ್ದು, ಪರ್ವತಾರೋಹಿಗಳ ಅಸಡ್ಡೆ ಮನೋಭಾವವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಪರ್ವತಯಾತ್ರೆ ಕೈಗೊಳ್ಳಲು ಬೇಕಾದ ಸಾಧನಗಳಾದ ಹಗ್ಗ, ಎತ್ತರಕ್ಕೆ ಏರಲು ಬೇಕಾದ ಸಾಧನಗಳು, ಖಾಲಿ ಗ್ಯಾಸ್ ಸಿಲಿಂಡರ್‌ಗಳು,  ಪ್ಲಾಸ್ಟಿಕ್ ಬ್ಯಾಗ್, ವಾಟರ್‌ ಬಾಟಲ್ ಸೇರಿದಂತೆ ಇನ್ನಿತರ ತ್ಯಾಜ್ಯಗಳು ಪರ್ವತದ ಅಡಿಯಲ್ಲಿ ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ.

ಪ್ರಾಕೃತಿಕ ವರವಾದ ಮೌಂಟ್‌ ಎವರೆಸ್ಟ್‌ ಅಡಿಯಲ್ಲಿ ಟನ್‌ಗಟ್ಟಲೇ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದನ್ನು ನೋಡಲು ಹೇವರಿಕೆಯಾಗುತ್ತದೆ. ಪರ್ವತಾರೋಹಿ ಪೆಂಬಾ ದೊರ್ಜೆ ಶೆರ್ಪಾ ಬೇಸರ ವ್ಯಕ್ತಪಡಿಸಿದ್ದಾರೆ.

ಈ ವರ್ಷ ಸುಮಾರು 600ಕ್ಕೂ ಹೆಚ್ಚು ಮಂದಿ ಶಿಖರವೇರಿದ್ದು, ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ.

ಸಾಗರ್‌ಮಠ ಮಾಲಿನ್ಯ ನಿಯಂತ್ರಣ ಸಮಿತಿಯ(ಎಸ್‌ಪಿಸಿಸಿ) ಪ್ರಕಾರ,  2017ರಲ್ಲಿ ನೇಪಾಳವು 25 ಟನ್ ಕಸ ಹಾಗೂ 1 5 ಟನ್ ಮಾನವ ತ್ಯಾಜ್ಯಗಳನ್ನು ಶಿಖರದಿಂದ ಹೊರಹಾಕಿತ್ತು. ಈ ವರ್ಷ ಇದಕ್ಕೂ ಹೆಚ್ಚು ತ್ಯಾಜ್ಯವನ್ನು ತೆಗೆಯಲಾಗಿದೆ. ಆದರೆ ತಗೆದಷ್ಟೇ ಸಲೀಸಾಗಿ ಕಸ ಶೇಖರಣೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ದಿನನಿತ್ಯ ಬೇತಾಳವಾಗಿ ಕಾಡುತ್ತಿರುವ ತ್ಯಾಜ್ಯ ಸಂಗ್ರಹಣೆ ಬಗ್ಗೆ ಸಾಕಷ್ಟು ಮಂದಿ ನಿರ್ಲಕ್ಯ ವಹಿಸುತ್ತಿದ್ದಾರೆ. ಲಂಚ ಪಡೆದುಕೊಳ್ಳುವ ಮೂಲಕ ವಂಚನೆ ಎಸಗುತ್ತಿದ್ದಾರೆ. ಪರಿಸರ ಜಾಗೃತಿಯ ಕುರಿತಾಗಿ ಕೇವಲ ಶಿಬಿರಗಳನ್ನು ಮಾಡಿದರೆ ಮಾತ್ರ ಸಾಲದು. ಸ್ವಚ್ಛತೆ ಕಾಪಾಡುವ ಮನೋಭಾವ ಎಲ್ಲರಲ್ಲೂ ಮೈಗೂಡಬೇಕು ಎಂದು ಪೆಂಬಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا