Urdu   /   English   /   Nawayathi

ಕೊನೆಗೂ ಮುಖಾಮುಖಿಯಾದ ಹಾವು-ಮುಗುಸಿಯಂತಿದ್ದ ಕಿಮ್- ಟ್ರಂಪ್, ಮುಂದೇನಾಯ್ತು..?

share with us

ಸಿಂಗಾಪುರ: 12 ಜೂನ್ (ಫಿಕ್ರೋಖಬರ್ ಸುದ್ದಿ) ಇಡೀ ವಿಶ್ವವೇ ಕಾತುರದಿಂದ ಎದುರುನೋಡುತ್ತಿದ್ದ ಐತಿಹಾಸಿಕ ಕ್ಷಣಕ್ಕೆ ಸಿಂಗಾಪುರ ಸಾಕ್ಷಿಯಾಗಿದ್ದು, ಹಾವು- ಮುಂಗುಸಿಯಂತಿದ್ದ ವಿಶ್ವದ ಬದ್ಧ ವೈರಿಗಳೆಂದೇ ಕರೆಯಲ್ಪಡುತ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೊತೆಯಾಗಿ ಕಾಣಿಸಿಕೊಳ್ಳುವುದಲ್ಲದೆ ಪರಸ್ಪರ ಕೈಕುಲುಕಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

DfdSCdeVAAEYMZQ

ಮಲೇಷ್ಯಾದ ಸಿಂಗಾಪುರದ ಸೆಂಟೋಸಾ ದ್ವೀಪದಲ್ಲಿರುವ ಕ್ಯಾಪೆಲ್ಲಾ ಹೋಟೆಲ್ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮುಖಾಮುಖಿಯಾಗಿದ್ದು, ಹಸ್ತಲಾಘವದ ಮೂಲಕ ಪರಸ್ಪರ ಸ್ವಾಗತ ಕೋರಿದ್ದಾರೆ. ಪರಸ್ಪರ ಮೈಕೈ ಮುಟ್ಟಿಕೊಂಡಿದ್ದಲ್ಲದೆ, ಕೆಲ ಹೊತ್ತು ಇಬ್ಬರು ಏಕಾಂತದಲ್ಲಿ ಮಾತುಕತೆ ನಡೆಸಿದರು. ಈ ಇಬ್ಬರು ನಾಯಕರನ್ನು ಒಟ್ಟಿಗೆ ನೋಡಲು ಸಾಧ್ಯವೇ ಇಲ್ಲ ಎಂಬುದನ್ನು ಸುಲಾಗಿಸಿದ್ದಾರೆ, ಪರಸ್ಪರ ಒಬ್ಬರನ್ನು ಇನ್ನೊಬ್ಬರು ಸುಟ್ಟುಹಾಕುವ ಮಾತನಾಡುತ್ತಿದ್ದ ಇವರು ಈಗ ಉತ್ತಮ ಸ್ನೇಹಿತರಾಗೋ ಸೂಚನೆ ನೀಡಿದ್ದಾರೆ. ವಿಚಿತ್ರವೇನೆಂದರೆ ಇಬ್ಬರ ಮನಸ್ಥಿತಿಯೂ ವಿಭಿನ್ನ, ಒಬ್ಬ ಕ್ರೂರಿ, ಸರ್ವಾಧಿಕಾರಿಯಾದರೆ ಇನ್ನೊಬ್ಬ ಊಹೆಗೂ ನಿಲುಕದ ನಿರ್ಧಾರಗಳನ್ನು ಕೈಗೊಳ್ಳುವ ವ್ಯಕ್ತಿತ್ವ. ಈಗ ಈ ಎರಡು ಅದ್ಭುತಗಳ ಸಮಾಗಮವಾಗಿದೆ.

DfdR_a2VAAA4o2G

ಪರಸ್ಪರ ಸ್ವಾಗತಿಸಿ ಹಸ್ತಲಾಘವ ಮಾಡಿದ ನಂತರ, ಐತಿಹಾಸಿಕ ದ್ವಿಪಕ್ಷೀಯ ಸಭೆಯಲ್ಲಿ ಭಾಷಾಂತರಕಾರರ ನೆರವಿನಿಂದ ಉಭಯ ನಾಯಕರು ಚರ್ಚೆ ನಡೆಸಿದರು. ಉತ್ತರ ಕೊರಿಯಾ ಈ ಹಿಂದೆ ಅಣ್ವಸ್ತ್ರ ಪರೀಕ್ಷೆ ಮೂಲಕ ವಿಶ್ವದ ದೊಡ್ಡಣ್ಣಗೆ ಸೆಡ್ಡು ಹೊಡೆದಿತ್ತು. ಆಗ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ಟ್ರಂಪ್ ಸರ್ವನಾಶದ ಎಚ್ಚರಿಕೆ ನೀಡಿದ್ದರು. ಸದ್ಯ ಎರಡು ರಾಷ್ಟ್ರಗಳ ಅಧ್ಯಕ್ಷರು ಪ್ರತ್ಯೇಕ ಸಭೆ ನಡೆಯುತ್ತಿದ್ದು, ಸಭೆ ಬಳಿಕ ಅಲ್ಲಿ ಚರ್ಚೆಯಾದ ವಿಷಯಗಳನ್ನ ಮಾಧ್ಯಮಗಳ ಮುಂದೆ ತಿಳಿಸುವ ಸಾಧ್ಯತೆ ಇದೆ.

DfdK4YLWsAAKMW8
ಸಿಂಗಪುರದ ಸೆಂತೋಸಾ ದ್ವೀಪದಲ್ಲಿ ನಡೆಯಲಿರು ಶೃಂಗಸಭೆಗಾಗಿ ಉಭಯ ನಾಯಕರೂ ಭೇಟಿಯಾಗಿದ್ದು, ಮಹತ್ವದ ಮಾತುಕತೆ ನಡೆಸುವ ಸಾಧ್ಯತೆ ಇದೆ. ಜಗತ್ತಿನ ಪ್ರಭಾವಿ ನಾಯಕರಾದ ಟ್ರಂಪ್ ಮತ್ತು ಉನ್ ಭೇಟಿಯ ಸಲುವಾಗಿ ನಾಯಕರು ತಂಗಿರುವ ಹೊಟೇಲ್ ಸುತ್ತ ಬಿಗಿಬಂದೋಬಸ್ತ್ ಮಾಡಲಾಗಿತ್ತು. ಉಭಯ ರಾಷ್ಟ್ರಗಳು ಸಂಪೂರ್ಣ ಅಣ್ವಸ್ತ್ರ ನಿಷೇಧದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಉಭಯ ರಾಷ್ಟ್ರಗಳು ವೈಮನಸ್ಯ ಮರೆತು ಶಾಂತಿಗೆ ನಾಂದಿ ಹಾಡುತ್ತಿರುವುದು ವಿಶ್ವದ ನಾನಾ ಗಣ್ಯರು ಸ್ವಾಗತಿಸಿದ್ದಾರೆ. ಶೃಂಗಸಭೆ ಯಶಸ್ವಿಯಾದಲ್ಲಿ ಉನ್ ರನ್ನು ಅಮೆರಿದ ಶ್ವೇತಭವನಕ್ಕೆ ಆಹ್ವಾನಿಸುವ ಕುರಿತೂ ಟ್ರಂಪ್ ಚಿಂತನೆ ನಡೆಸಿದ್ದಾರೆ.

DfdK4YLWsAAKMW8

DfdF6HLXkAYVTPG

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا