Urdu   /   English   /   Nawayathi

ಕಾಬೂಲ್‌ನಲ್ಲಿ ಆತ್ಮಾಹುತಿ ದಾಳಿ: 13 ಸಾವು

share with us

ಕಾಬೂಲ್(ಎಎಫ್‌ಪಿ):  12 ಜೂನ್ (ಫಿಕ್ರೋಖಬರ್ ಸುದ್ದಿ)ಅಪ್ಗಾನಿಸ್ಥಾನದ ಕಾಬೂಲ್‌ನಲ್ಲಿ ಸೋಮವಾರ ನಡೆದ ಆತ್ಮಾಹುತಿ ಬಾಂಬ್‌ದಾಳಿಯಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡಿದ್ದಾರೆ. ಸರ್ಕಾರಿ ನೌಕರರು ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದಾಗ ಗ್ರಾಮೀಣ ಪುನರ್‌ವಸತಿ ಮತ್ತು ಅಭಿವೃದ್ಧಿ ಕಚೇರಿಯ ದ್ವಾರದ ಬಳಿ ದಾಳಿ ನಡೆದಿದ್ದು, ಇದರ ಹಿಂದೆ ಐಎಸ್‌ ಸಂಘಟನೆಯ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ. ಆದರೆ, ಇದುವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ರಮ್ಜಾನ್‌ ಇರುವ ಕಾರಣ ನೌಕರರು ಬೇಗನೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ಸಜ್ಜಾಗಿದ್ದರು. ಆ ಸಂದರ್ಭದಲ್ಲಿ ದಾಳಿ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا