Urdu   /   English   /   Nawayathi

ಶಾಂಘೈ ಶೃಂಗಸಭೆಯಲ್ಲಿ ಪಾಕ್ ಅಧ್ಯಕ್ಷ ಹುಸೇನ್ – ಮೋದಿ ಮುಖಾಮುಖಿ

share with us

ಕ್ವಿಂಗ್‍ಡಾವೋ(ಚೀನಾ): 10 ಜೂನ್ (ಫಿಕ್ರೋಖಬರ್ ಸುದ್ದಿ) ಇಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ(ಎಸ್‍ಸಿಒ) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಅಧ್ಯಕ್ಷ ಮಮ್ನೂನ್ ಹುಸೇನ್ ಪರಸ್ಪರ ಹಸ್ತಲಾಘವ ನೀಡಿ ಅಲ್ಪ ಕಾಲ ಚರ್ಚೆ ನಡೆಸಿದರು. 18ನೇ ಎಸ್‍ಸಿಒ ಶೃಂಗಸಭೆಯಲ್ಲಿ ಭಾಗವಹಿಸಿದ ಉಭಯ ನಾಯಕರು, ಎಂಟು ದೇಶಗಳ ನಡುವೆ ಪರಸ್ಪರ ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಪರಸ್ಪರ ಕೈ ಕುಲುಕಿದರು. ಅಲ್ಲದೇ ಕೆಲವು ಕ್ಷಣಗಳ ಕಾಲ ಮಾತುಕತೆ ನಡೆಸಿದರು.  2016ರಲ್ಲಿ ಉರಿ ಸೇನಾ ನೆಲೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ದಾಳಿ ನಡೆಸಿ ಯೋಧರ ಮಾರಣಹೋಮ ನಡೆಸಿದ ನಂತರ ಭಾರತ-ಪಾಕ್ ಸಂಬಂಧ ಹದಗೆಟ್ಟಿದ್ದು, ಗಡಿಯಲ್ಲಿ ಈಗಲೂ ಉದ್ವಿಗ್ನ ಸ್ಥಿತಿ ನೆಲೆಗೊಂಡಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا