Urdu   /   English   /   Nawayathi

ಎಸ್‌ಸಿಒ ಶೃಂಗ: ಚೀನಾಕ್ಕೆ ತೆರಳಿದ ಪ್ರಧಾನಿ ಮೋದಿ

share with us

ನವದೆಹಲಿ: 09 ಜೂನ್ (ಫಿಕ್ರೋಖಬರ್ ಸುದ್ದಿ) ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಕಿಂಗ್ಡಾವೋದಲ್ಲಿ ಇಂದಿನಿಂದ(ಜೂನ್ 9) ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಶನಿವಾರ ಬೆಳಿಗ್ಗೆ ಇಲ್ಲಿಂದ ಪ್ರಯಾಣ ಬೆಳೆಸಿದರು.

ಎರಡು ದಿನದ ಚೀನಾ ಪ್ರವಾಸದ ವೇಳೆ ಭಯೋತ್ಪಾದನೆ ವಿರುದ್ಧ ಜಾಗತಿಕ ಮಟ್ಟದಲ್ಲಿ ಸಂಘಟಿತರಾಗಿ ಹೋರಾಟ, ವ್ಯಾಪಾರ ಮತ್ತು ಹೂಡಿಕೆ ವಲಯಗಳ ಬಗ್ಗೆ ಉಭಯ ದೇಶಗಳು ಸಹಕಾರ ನೀಡುವ ವಿಚಾರವಾಗಿ ಮಾತುಕತೆ ನಡೆಸಲಿದ್ದಾರೆ.

ವಾರದ ಹಿಂದೆ ಚೀನಾದ ವುಹಾನ್ ನಗರದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ಮೋದಿ ಭೇಟಿಯಾಗಿ ಚರ್ಚಿಸಿದ್ದರು. ಈ ವೇಳೆ ಕೈಗೊಂಡ ನಿರ್ಣಯಗಳ ಬಗ್ಗೆ ಷಿ ಅವರೊಂದಿಗೆ ಮತ್ತೆ ಚರ್ಚಿಸಲಿದ್ದಾರೆ.

ಎಸ್‌ಸಿಒ ಸಭೆಯಲ್ಲಿ ಭಾಗವಹಿಸಲು ಇರಾನ್‌ ಅಧ್ಯಕ್ಷ ಹಸನ್ ರೌಹಾನಿ ಶುಕ್ರವಾರ‌ವೇ ಚೀನಾಕ್ಕೆ ಬಂದಿಳಿದ್ದಾರೆ. ಉಳಿದ ದೇಶಗಳ ನಾಯಕರು ಇಂದು ಬರಲಿದ್ದಾರೆ.

View image on Twitter

View image on Twitter

PMO India✔@PMOIndia

PM @narendramodi leaves for Qingdao, China to take part in the annual SCO Summit.

7:31 AM - Jun 9, 2018

ಪ್ರ, ವಾ ವರದಿ 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا