Urdu   /   English   /   Nawayathi

ಜ್ವಾಲಾಮುಖಿ ರುದ್ರನರ್ತನದಿಂದ ಸತ್ತವರ ಸಂಖ್ಯೆ 80ಕ್ಕೆ, 200 ಮಂದಿ ನಾಪತ್ತೆ

share with us

ಅಲೋಟೆನನ್‍ಗೊ(ಗ್ವಾಟೆಮಾಲಾ): 06 ಜೂನ್ (ಫಿಕ್ರೋಖಬರ್ ಸುದ್ದಿ) ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ರೌದ್ರಾವತಾರದಿಂದ ಸತ್ತವರ ಸಂಖ್ಯೆ 80ಕ್ಕೇರಿದ್ದು, ಲೆಕ್ಕವಿಲ್ಲದಷ್ಟು ಮಂದಿ ಗಾಯಗೊಂಡಿದ್ದಾರೆ. ಅಗ್ನಿಪರ್ವತ ದುರಂತದಲ್ಲಿ 200ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ವಾರದ ಹಿಂದೆ ಸ್ಪೋಟಗೊಂಡ ಜ್ವಾಲಾಮುಖಿ ಇನ್ನೂ ಸಕ್ರಿಯವಾಗಿದ್ದು, ಪರ್ವತ ತಪ್ಪಲಿನಲ್ಲಿರುವ ಕೆಲವು ಪುಟ್ಟ ಹಳ್ಳಿಗಳ ಗ್ರಾಮಸ್ಥರು ಕೆಂಡದ ಹೊಳೆಯ ಪ್ರದೇಶದಲ್ಲಿ ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ. ಅತ್ಯಂತ ಸಕ್ರಿಯ ಅಗ್ನಿಪರ್ವತಗಳಲ್ಲಿ ಒಂದಾದ ಪ್ಯೂಗೊ ವಾಲ್ಕ್ಯಾನೋ ಸ್ಫೋಟಗೊಂಡು ಬೆಂಕಿ ಹೊಳೆ ಗ್ರಾಮಗಳತ್ತ ನುಗ್ಗಿ ಈವರೆಗೆ 80ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಜನರು ತೀವ್ರ ಗಾಯಗೊಂಡಿದ್ದಾರೆ ಎಂದು ಗ್ವಾಟೆಮಾಲಾದ ವಿಪತ್ತು ನಿರ್ವಹಣಾ ಸಂಸ್ಥೆ ಹೇಳಿದೆ. ಜಾಲಾಮುಖಿ ಆತಂಕದಿಂದ ಅನೇಕರು ತಮ್ಮ ವಾಹನಗಳಲ್ಲಿ ಪಾರಾಗುವ ಯತ್ನದಲ್ಲಿದ್ದಾಗ ಅನೇಕ ಕಡೆ ಸಂಚಾರ ದಟ್ಟನೆಯಾಗಿ ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا