Urdu   /   English   /   Nawayathi

ಕ್ರಿಪ್ಟೊ ಕರೆನ್ಸಿ ಜಾಲ ಬಯಲು: ಒಬ್ಬನ ಬಂಧನ

share with us

ಠಾಣೆ, ಮಹಾರಾಷ್ಟ್ರ: 06 ಜೂನ್ (ಫಿಕ್ರೋಖಬರ್ ಸುದ್ದಿ) ಉತ್ತಮ ಆದಾಯ ನೀಡುವುದಾಗಿ ಹೇಳಿ ₹500 ಕೋಟಿ ಸಂಗ್ರಹಿಸಿದ್ದ ಆನ್‌ಲೈನ್ ಕ್ರಿಪ್ಟೊ ಕರೆನ್ಸಿ (ಪರ್ಯಾಯ ಕರೆನ್ಸಿ) ಜಾಲವನ್ನು ಪೊಲೀಸರು ಭೇದಿಸಿದ್ದು ಒಬ್ಬನನ್ನು ಬಂಧಿಸಿದ್ದಾರೆ.

ವರ್ಷದ ಹಿಂದೆ ಕಂಪನಿ ಆರಂಭಿಸಿದ್ದ ಕೆಲವರು, ‘ಮನಿ ಟ್ರೇಡ್ ಕಾಯಿನ್’ (ಎಂಟಿಸಿ) ಹೆಸರಿನ ಕ್ರಿಪ್ಟೊ ಕರೆನ್ಸಿಯನ್ನು ಜಾರಿಗೆ ತಂದಿದ್ದರು. ಅತ್ಯಧಿಕ ಆದಾಯವನ್ನು ನೀಡುವುದಾಗಿ ಜನರಿಗೆ ಆಕರ್ಷಕ ಭರವಸೆ ನೀಡಿ, ಬಂಡವಾಳ ತೊಡಗಿಸುವಂತೆ ಪ್ರೇರೇಪಿಸಿದ್ದರು. ಆದರೆ ಹೂಡಿಕೆದಾರರಿಗೆ ನಿರೀಕ್ಷಿತ ಹಣ ನೀಡುವಲ್ಲಿ ಕಂಪನಿ ವಿಫಲವಾಗಿತ್ತು.

ಕೇಂದ್ರ ಹಣಕಾಸು ಸಚಿವಾಲಯದ ಪ್ರತಿನಿಧಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ, ಜನರನ್ನು ದಾರಿ ತಪ್ಪಿಸಲು ನಕಲಿ ಗುರುತಿನ ಚೀಟಿ ಇಟ್ಟುಕೊಂಡಿದ್ದ ಎಂದು ಠಾಣೆ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಹೇಳಿದ್ದಾರೆ.
25 ಸಾವಿರ ಜನರು ಈ ಕಂಪನಿಯ ಮೋಸದ ಜಾಲಕ್ಕೆ ಬಲಿಯಾಗಿದ್ದಾರೆ. ಜಾಲದಲ್ಲಿರುವ ಐವರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا