Urdu   /   English   /   Nawayathi

ಉತ್ತರ ಪ್ರದೇಶದಲ್ಲಿ ಉತ್ಖನನದ ವೇಳೆ ಕಂಚಿನ ಯುಗದ ರಥಗಳು, ಖಡ್ಗಗಳು ಪತ್ತೆ

share with us

ಮೀರತ್: 06 ಜೂನ್ (ಫಿಕ್ರೋಖಬರ್ ಸುದ್ದಿ) ವಸುಂಧರೆಯ ಒಡಲು ಅನೇಕ ವಿಸ್ಮಯಗಳ ಕಡಲು. ಶತಶತಮಾನಗಳಷ್ಟು ಹಿಂದಿನ ಸಂಗತಿಗಳು ಭೂಗರ್ಭದಲ್ಲಿ ಹುದುಗಿ ಹೋಗಿರುತ್ತವೆ. ಉತ್ಖನನ ವೇಳೆ ಇಂಥ ಅಚ್ಚರಿ ವಿದ್ಯಮಾನಗಳು ಆಗಾಗ ಬೆಳಕಿಗೆ ಬರುತ್ತವೆ. ಉತ್ತರ ಪ್ರದೇಶದಲ್ಲಿ ಕಂಚು ಯುಗದ ಅತ್ಯಂತ ಪ್ರಾಚೀನ ರಥಗಳು ಪತ್ತೆಯಾಗಿರುವುದು ಇದಕ್ಕೆ ಪುರಾವೆಯಾಗಿದೆ.

UP--03

ಉತ್ತರಪ್ರದೇಶದ ಬಾಗ್ಪತ್ ಜಿಲ್ಲೆಯ ಸಿನೌಲಿ ಗ್ರಾಮದಲ್ಲಿ ಭಾರತ ಪುರಾತತ್ತ್ವ ಸರ್ವೇಕ್ಷಣಾ ಸಂಸ್ಥೆ(ಆರ್ಕಿಯೋಲಾಜಿಕಲ್ ಸರ್ವೇ ಆಪ್ ಇಂಡಿಯಾ-ಎಎಸ್‍ಐ)ಗೆ ಕಂಚು-ತ್ರಾಮ ಯುಗದ(ಕಿಸ್ತಪೂರ್ವ 1800-2000) ಪ್ರಾಚೀನ ರಥಗಳ ಅವಶೇಷಗಳು ಪತ್ತೆಯಾಗಿದ್ದು, ಆ ಕಾಲದ ಸಂಸ್ಕøತಿ ಮತ್ತು ನಾಗರಿಕತೆ ಮೇಲೆ ಮತ್ತಷ್ಟು ಸಂಶೋಧನೆಗಳ ಅವಕಾಶವನ್ನು ತೆರೆದಿಟ್ಟಿದೆ. ಪುರಾತತ್ವ ಸಂಶೋಧಕರು ಮತ್ತು ಉತ್ಖನನ ಆಸಕ್ತರಿಗೆ ಬಗೆದಷ್ಟೂ ಸಾರಸ್ಯ ಸಂಗತಿಗಳು ಲಭಿಸುವ ಈ ಪ್ರಾಚೀನ ಸ್ಥಳದಲ್ಲಿ ಎಎಸ್‍ಐ ಕಳೆದ ಮಾರ್ಚ್‍ನಿಂದಲೂ ಸಂಶೋಧನೆ ನಡೆಸುತ್ತಿದೆ. ಇಲ್ಲಿ ದೊರೆತ ಅಪರೂಪದ ಪಳೆಯುಳಿಕೆ ವಸ್ತುಗಳ ಬಗ್ಗೆ ಈಗ ಅಧಿಕೃತ ಮಾಹಿತಿ ನೀಡಿದೆ.

UP--02

ಕಂಚು ಯುಗದಲ್ಲಿ ಬಳಸಲಾಗುತ್ತಿದ್ದ ರಥಗಳ ಅವಶೇಷಗಳೊಂದಿಗೆ ಇಲ್ಲಿ ಎಂಟು ಸಮಾಧಿ ಸ್ಥಳಗಳು, ಮೂರು ಶವ ಪಟ್ಟಿಗೆಗಳು, ಖಡ್ಗ-ಕಠಾರಿ-ಬಾಕುಗಳು, ಬಾಚಣಿಗೆಗಳು ಮತ್ತು ಕಂಚು-ತಾಮ್ರದ ಆಭರಣಗಳೂ ಸೇರಿದಂತೆ ಹಲವು ಪ್ರಾಚೀನ ಕಲಾಕೃತಿಗಳು ಲಭಿಸಿದ್ದು, ಆಗಿನ ನಾಗರಿಕತೆ ಮೇಲೆ ಹೊಸ ಅಧ್ಯಯನಕ್ಕೆ ಪುಷ್ಟಿ ಕೊಟ್ಟಿದೆ.

UP--05

ಗ್ರೀಸ್‍ನ ಮೆಸೊಪೊಟಮಿಯಾದ ಪ್ರಾಚೀನ ನಾಗರಿಕತೆಯನ್ನು ಇದು ಹೋಲುತ್ತದೆ. ಆ ಕಾಲದ ಗ್ರೀಕ್ ವೀರಾಗ್ರಣಿಗಳು ಬಳಸುತ್ತಿದ್ದ ಸಮರ ರಥಗಳು ಮತ್ತು ಶಸ್ತ್ರಾಸ್ತ್ರಗಳಿಗೆ ಇಲ್ಲಿ ದೊರೆತ ಕೆಲವು ವಸ್ತುಗಳು ಹೋಲಿಕೆಯಾಗಿದೆ. ಖಡ್ಗಮಲ್ಲರೂ ಕೂಡ ಈ ಪ್ರಾಂತ್ಯದಲ್ಲಿ ಇದ್ದರು ಎಂಬುದಕ್ಕೆ ಇವು ಸಾಕ್ಷಿಯಾಗಿವೆ ಎಂದು ಉತ್ಖನನದ ಸಹ ನಿರ್ದೇಶಕ ಎಸ್.ಕೆ. ಮಂಜುಳ್ ವಿವರಿಸಿದ್ದಾರೆ. ಇಲ್ಲಿ ಪತ್ತೆಯಾಗಿರುವ ಸಮಾಧಿ ಸ್ಥಳಗಳು ಮತ್ತು ಶವಪಟ್ಟಿಗೆಗಳು ಆ ಕಾಲದ ಅಂತ್ಯಕ್ರಿಯೆ ವಿಧಿ-ವಿಧಾನಗಳ ಬಗ್ಗೆ ಅಸ್ಪಷ್ಟ ಮಾಹಿತಿಯನ್ನೂ ನೀಡಿದೆ. ಇದು ಹರಪ್ಪ-ಮಹೆಂಜೊದಾರೋ ನಾಗರಿಕತೆಗಿಂತ ತೀರಾ ಭಿನ್ನವಾಗಿರುವುದು ಮತ್ತಷ್ಟು ಆಸಕ್ತಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

UP--04

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا