Urdu   /   English   /   Nawayathi

ಸೋತರೂ, ಗೆದ್ದರೂ ಕ್ಷೇತ್ರದಿಂದ ವಿಮುಖರಾದ ಸಿದ್ದರಾಮಯ್ಯ

share with us

ಮೈಸೂರು: 03 ಜೂನ್ (ಫಿಕ್ರೋಖಬರ್ ಸುದ್ದಿ) ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾರೀ ಅಂತರದ ಸೋಲಿನಿಂದ ಮಾನಸಿಕವಾಗಿ ಜರ್ಜರಿತರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ತವರು ಜಿಲ್ಲೆ ಮೈಸೂರಿನಿಂದ ಅಂತರ ಕಾಯ್ದುಕೊಂಡಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ಐದು ವರ್ಷಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಬಾರಿ ಬಂದು-ಹೋಗಿ ತವರು ಪ್ರೇಮ ಮೆರೆಯುತ್ತಿದ್ದ ಸಿದ್ದರಾಮಯ್ಯ,ಚುನಾವಣೆ ಸೋಲಿನ ಬಳಿಕ ಮೈಸೂರಿಗೆ ಬರುವ ಮನಸ್ಸು ಮಾಡಿಲ್ಲ. ಇತ್ತ ತಮ್ಮ ಮಗನನ್ನು ಭಾರೀ ಅಂತರದಿಂದ ಗೆಲ್ಲಿಸಿದ ವರುಣಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲೂ ಬರಲಿಲ್ಲ.

ಮೇ 12ರಂದು ತಮ್ಮ ಹುಟ್ಟೂರು ಸಿದ್ದರಾಮನಹುಂಡಿಯ ಮತಗಟ್ಟೆಯಲ್ಲಿ ಮತದಾನ ಮಾಡಿ ಹೋಗಿದ್ದರು. ಬಳಿಕ, ಮತ ಎಣಿಕೆಯ ಹಿಂದಿನ ದಿನ, ಅಂದರೆ ಮೇ 14ರಂದು ಮೈಸೂರಿಗೆ ಬಂದು ಮತ ಎಣಿಕೆ ಮುಗಿದು ಫ‌ಲಿತಾಂಶ ಪ್ರಕಟಗೊಂಡ ನಂತರ ಬೆಂಗಳೂರಿಗೆ ವಾಪಸ್ಸಾಗುವ ಪ್ರವಾಸ ನಿಗದಿಯಾಗಿತ್ತು.

ಆದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವಸುಳಿವರಿತ ಸಿದ್ದರಾಮಯ್ಯ, ಕಡೇ ಕ್ಷಣದಲ್ಲಿ ಮೈಸೂರು ಪ್ರವಾಸ ರದ್ದುಪಡಿಸಿ ಬೆಂಗಳೂರಲ್ಲೇ ಉಳಿದುಕೊಂಡರು.

ಸಿದ್ದು ನೊಂದಿದ್ದಾರೆ: ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದರಿಂದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್‌ ಹೈಕಮಾಂಡ್‌ ಆದೇಶದಂತೆ ಯಾರ ವಿರುದಟಛಿ ಚುನಾವಣಾ ಸಮರದಲ್ಲಿ ತೊಡೆತಟ್ಟಿ,ಜೆಡಿಎಸ್‌ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದರೋ ಅವರ ಮನೆಗೇ ಹೋಗಿ ಕೈಕಟ್ಟಿ ನಿಲ್ಲಬೇಕಾದ ಪ್ರಸಂಗ ಬಂದಿದ್ದಕ್ಕೆಅವರು ನೊಂದಿದ್ದಾರೆ. ಈ ಹಿಂದೆ 1989ರಲ್ಲಿ ಕಾಂಗ್ರೆಸ್‌ನ ರಾಜಶೇಖರ ಮೂರ್ತಿ ವಿರುದಟಛಿ, 1999ರಲ್ಲಿ ಎ.ಎಸ್‌.ಗುರುಸ್ವಾಮಿ ವಿರುದಟಛಿ ಸೋತಾಗ ಸಿದ್ದರಾಮಯ್ಯ ಇಷ್ಟೊಂದು ಜರ್ಜರಿತರಾಗಿರಲಿಲ್ಲ. ಆದರೆ, ಸಿಎಂ ಆಗಿ ಚಾಮುಂಡೇಶ್ವರಿಯಲ್ಲಿ ಗೆದ್ದೇ ಗೆಲ್ಲುತ್ತೇನೆಂದು ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಅವರ ಅಹಂಗೆ ಈ ಸೋಲು ಬಹು ದೊಡ್ಡ ಪೆಟ್ಟು ನೀಡಿದೆ. ಹೀಗಾಗಿ, ತವರು ಜಿಲ್ಲೆಯ ಜನರಿಗೆ ಅವರು ಮುಖ ತೋರಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.

ಈ ಮಧ್ಯೆ, ಎಚ್‌.ವಿಶ್ವನಾಥ್‌ ಅವರು ಸಿದ್ದರಾಮಯ್ಯ ಸೋಲಿನ ಬಗ್ಗೆ ಕುಹಕವಾಡಿದ್ದರೂ ಅದನ್ನು ಪ್ರಶ್ನಿಸಲೂ
ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಅದರಲ್ಲೂ ಸದಾ ಸಿದ್ದರಾಮಯ್ಯ ಅವರ ಹಿಂದೆ ಮುಂದೆ ಸುಳಿದಾಡುತ್ತಿದ್ದ
ಮುಖಂಡರು ಮುಂದಾಗುತ್ತಿಲ್ಲ.

ಚುನಾವಣಾ ರಾಜಕೀಯ ಸಾಕಾಗಿದೆ. ಇದೇ ನನ್ನ ಕಡೇ ಚುನಾವಣೆ, ಇನ್ನು ಮುಂದೆ ಸಕ್ರಿಯ ರಾಜಕಾರಣದಲ್ಲಿದ್ದು ನನ್ನ ಬೆಂಬಲಿಗರಿಗೆ ಮಾರ್ಗದರ್ಶನ ಮಾಡುತ್ತೇನೆ ಎಂದಿದ್ದ ಸಿದ್ದರಾಮಯ್ಯ, ಸದ್ಯ ಆಡಳಿತ ಪಕ್ಷದ ನಾಯಕರಾಗಿ ಸಮ್ಮಿಶ್ರ ಸರ್ಕಾರದ ಮಂತ್ರಿಮಂಡಲ ರಚನೆ ವಿಷಯದಲ್ಲಿ ಸಲಹೆ ನೀಡುವಷ್ಟಕ್ಕೆ ಸೀಮಿತರಾಗಿದ್ದಾರೆ. ಐದು ವರ್ಷಗಳ ಕಾಲ ಸಿದ್ದರಾಮಯ್ಯ ಮೈಸೂರಿಗೆ ಬಂದರೆಂದರೆ ಜನರಿಂದ ಗಿಜಿಗುಡುತ್ತಿದ್ದ ಟಿ.ಕೆ. ಲೇಔಟ್‌ನ ಅವರ ಮನೆ ಈಗ ಬಿಕೋ ಎನ್ನುತ್ತಿದೆ.

ಲೋಕಸಭೆಗೆ ಸ್ಪರ್ಧಿಸ್ತಾರಾ?
ಸಿದ್ದರಾಮಯ್ಯ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು -ಕೊಡಗು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಚರ್ಚೆ ಇಲ್ಲಿನ ರಾಜಕೀಯ ವಲಯದಲ್ಲಿ ನಡೆದಿದೆ. ಸ್ವತಃ ಸಿದ್ದರಾಮಯ್ಯ ಅವರೇ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಇದೇ ನನ್ನ ಕಡೇ ಚುನಾವಣೆ, ಬ್ರಹ್ಮ ಬಂದು ಹೇಳಿದರೂ ಮತ್ತೆ ಸ್ಪರ್ಧಿಸುವುದಿಲ್ಲ, ರಾಷ್ಟ್ರ ರಾಜಕಾರಣಕ್ಕೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಆದರೆ, ರಾಜಕಾರಣದಲ್ಲಿ ಸಂದರ್ಭಕ್ಕೆ ತಕ್ಕಂತೆ ಹೈಕಮಾಂಡ್‌ ಸೂಚನೆಯನ್ನು ಪಾಲಿಸಬೇಕಾಗುತ್ತದೆ.
ಹೀಗಾಗಿ, ಸಿದ್ದರಾಮಯ್ಯ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ ರಾಜಕೀಯ ಮುಖಂಡರು.

- ಗಿರೀಶ್‌ ಹುಣಸೂರು

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا