Urdu   /   English   /   Nawayathi

7 ಜನರನ್ನು ಜೀವಂತ ಸುಟ್ಟು ಕೊಂದವನಿಗೆ ಕ್ಷಮಾದಾನ ನೀಡಲು ರಾಷ್ಟ್ರಪತಿ ನಕಾರ

share with us

ನವದೆಹಲಿ: 03 ಜೂನ್ (ಫಿಕ್ರೋಖಬರ್ ಸುದ್ದಿ) ಎಮ್ಮೆ ಕಳವು ಪ್ರಕರಣ ಸಂಬಂಧ ಐವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿಯನ್ನು ಜೀವಂತ ದಹನ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ಕ್ಷಮಾದಾನ ನೀಡಲು ರಾಷ್ಟ್ರಪತಿ ರಮಾನಾಥ ಕೋವಿಂದ್ ನಿರಾಕರಿಸಿದ್ದಾರೆ.

ರಾಷ್ಟ್ರಪತಿಯಾದ ನಂತರ ಮರಣದಂಡನೆಗೆ ಸಂಬಂಧಿಸಿದಂತೆ ಕೋವಿಂದ್ ಅವರು ಕ್ಷಮಾದಾನ ನಿರಾಕರಿಸಿದ ಪ್ರಥಮ ಪ್ರಕರಣ ಇದಾಗಿದೆ. 2006ರಲ್ಲಿ ಬಿಹಾರದ ವೈಶಾಲಿ ಜಿಲ್ಲೆಯ ರಾಘೋವ್‍ಪುರ್ ತಾಲ್ಲೂಕಿನ ವಿಜಯೇಂದ್ರ ಮಹತೊ ಮತ್ತು ಅವರ ಕುಟುಂಬದ ಆರು ಮಂದಿಯನ್ನು ಜಗತ್‍ರೈ ಎಂಬಾತ ಸಜೀವ ದಹನ ಮಾಡಿದ್ದ. ಕೇವಲ ಎಮ್ಮೆಯೊಂದನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಪಿತನಾಗಿದ್ದ ರೈ ಈ ದುಷ್ಕøತ್ಯ ಎಸಗಿದ್ದ. ಈ ಘೋರ ಕೃತ್ಯಕ್ಕೆ ರಾಷ್ಟ್ರಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا