Urdu   /   English   /   Nawayathi

ಸಿಂಗಾಪುರದಲ್ಲಿ ಮಹಾತ್ಮ ಗಾಂಧಿ ಸ್ಮರಣಾರ್ಥ ಫಲಕ ಅನಾವರಣಗೊಳಿಸಿದ ಪ್ರಧಾನಿ ಮೋದಿ

share with us

ಸಿಂಗಾಪುರ: 02 ಜೂನ್ (ಫಿಕ್ರೋಖಬರ್ ಸುದ್ದಿ) ಕ್ಲಿಫರ್ಡ್‌ ಪಿಯರ್‌ನಲ್ಲಿ ಮಹಾತ್ಮ ಗಾಂಧಿ ಅವರ ಚಿತಾಭಸ್ಮ ವಿಸರ್ಜಿಸಲಾಗಿದ್ದರ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಫಲಕವೊಂದನ್ನು ಅನಾವರಣಗೊಳಿಸಿದರು.

1948ರ ಮಾರ್ಚ್‌ 27ರಂದು ಇಲ್ಲಿನ ಸಮುದ್ರ ತೀರದಲ್ಲಿ ಗಾಂಧೀಜಿ ಅವರ ಚಿತಾಭಸ್ಮವನ್ನು ವಿಸರ್ಜಿಸಲಾಗಿತ್ತು. ಗಾಂಧೀಜಿ ಅವರ ಸಾವಿನ ನಂತರ ಅವರ ಚಿತಾಭಸ್ಮವನ್ನು ಭಾರತದ ವಿವಿಧ ಪ್ರದೇಶಗಳು ಸೇರಿ ಜಗತ್ತಿನ ಹಲವು ಭಾಗಗಳಿಗೆ ಕಳುಹಿಸಲಾಗಿತ್ತು.

ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶನಿವಾರ ಸಿಂಗಾಪುರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು.

'ಗಾಂಧೀಜಿ ಅವರ ಚಿತಾಭಸ್ಮ ವಿಸರ್ಜಿಸಲಾದ ಕ್ಲಿಫರ್ಡ್ ಪಿಯರ್‌ನಲ್ಲಿ ಗೌರವಾರ್ಥವಾಗಿ ಸಿಂಗಾಪುರದ ಮಾಜಿ ಪ್ರಧಾನಿ ಗೋ ಚೋಕ್‌ ಟಾಂಗ್ ಮತ್ತು ನಾನು ಫಲಕವನ್ನು ಅನಾವರಣಗೊಳಿಸಿದೆವು. ಗಾಂಧೀಜಿ ಅವರ ಯೋಚನೆ ಮತ್ತು ಸಂದೇಶಗಳು ಮನುಕುಲದ ಉನ್ನತಿಗಾಗಿ ದುಡಿಯಲು ಸದಾ ಪ್ರೇರೇಪಿಸುತ್ತಿರುತ್ತವೆ’ ಎಂದು ಮೋದಿ ಟ್ವೀಟಿಸಿದ್ದಾರೆ.

View image on TwitterView image on TwitterView image on TwitterView image on Twitter

Narendra Modi✔@narendramodi

Emeritus Senior Minister Mr. Goh Chok Tong and I unveiled a plaque marking the site where Mahatma Gandhi’s ashes were immersed at the Clifford Pier in Singapore.

Bapu’s message reverberates globally. His thoughts and ideals motivate us to work for the greater good of humanity.

ಇದೇ ಸಂದರ್ಭದಲ್ಲಿ ವೈಷ್ಣವ ಜನತೋ ತೇನೇ ಕಹಿಯೇ ಹಾಗೂ ರಘು ಪತಿ ರಾಘವ ರಾಜಾರಾಂ ಭಜನೆಗಳನ್ನು ಪ್ರಸ್ತುತ ಪಡಿಸಲಾಯಿತು.

ಚೀನೀ ವಾದ್ಯಗಳ ಮೂಲಕ ನುಡಿಸಲಾದ ರಘು ಪತಿ ರಾಘವ ರಾಜಾರಾಂ ಭಜನೆಯನ್ನು ನೀವೆಲ್ಲರೂ ಕೇಳಲೇ ಬೇಕು ಎಂದು ಪ್ರಧಾನಿ ಮೋದಿ ವಿಡಿಯೊ ಪ್ರಕಟಿಸಿದ್ದಾರೆ.

Narendra Modi✔@narendramodi

Exceptional musical performance of 'Raghupati Raghav Raja Ram' using Chinese instruments. A must listen!

 

 ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا