Urdu   /   English   /   Nawayathi

ಬ್ಯಾಂಕ್ ವಂಚನೆ ಪ್ರಕರಣ : ಔಷಧಿ ಕಂಪನಿಯ 4,701 ಕೋ.ರೂ. ಸ್ವತ್ತು ಜಪ್ತಿ

share with us

ನವದೆಹಲಿ: 02 ಜೂನ್ (ಫಿಕ್ರೋಖಬರ್ ಸುದ್ದಿ) ಸುಮಾರು 5,000 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಗ್ರೂಪ್ ಔಷಧ ಕಂಪನಿಯ 4,701 ಕೋಟಿ ರೂ.ಗಳ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ(ಇಡಿ) ಮುಟ್ಟುಗೋಲು ಹಾಕಿಕೊಂಡಿದೆ. ಈ ಸಂಬಂಧ ಹಣ ದುರ್ಬಳಕೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿ ಮುಟ್ಟುಗೋಲು ಆದೇಶ ನೀಡಿದ್ದ ಇಡಿ ಅಧಿಕಾರಿಗಳು, ಸಂಸ್ಥೆಗೆ ಸೇರಿದ 4,000 ಎಕರೆಗಳ ಸ್ಥಿರಾಸ್ತಿಗಳು, ಘಟಕ ಮತ್ತು ಯಂತ್ರೋಪಕರಣಗಳು, ವಿವಿಧ ಕಂಪನಿಗಳು ಮತ್ತು ಪ್ರವರ್ತಕರಿಗೆ ಸಂಬಂಧಿಸಿದ 200ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳು, 6.67 ಕೋಟಿ ರೂ. ಮೌಲ್ಯದ ಷೇರುಗಳು ಹಾಗೂ ಅನೇಕ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ವಡೋದರ ಮೂಲದ ಈ ಔಷಧಿ ತಯಾರಿಕೆ ಕಂಪನಿ ಹಾಗೂ ಅದರ ಪ್ರವರ್ತಕರಾದ ನಿತಿನ್ ಮತ್ತು ಚೇತನ್ ಸಂದೇಸರ ಅವರ ವಿರುದ್ಧ ಕಳೆದ ವರ್ಷ ಅಕ್ಟೋಬರ್‍ನಲ್ಲಿ ಇಡಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿತ್ತು. ನಂತರ ದೇಶದ ವಿವಿಧ ಸ್ಥಳಗಳಲ್ಲಿ 50 ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا