Urdu   /   English   /   Nawayathi

ಸೂರ್ಯ ಶೋಧನೆಗೆ ನಾಸಾ ನೌಕೆ

share with us

ಧಗಧಗನೆ ಉರಿಯುತ್ತಿರುವ ಅನಿಲದ ಗೋಳವಾಗಿರುವ ಸೂರ್ಯನ ಸಮೀಪಕ್ಕೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವ ಸಾಹಸವನ್ನು ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕೈಗೆತ್ತಿಕೊಂಡಿದೆ. ಪಾರ್ಕರ್ ಪ್ರೋಬ್ ಹೆಸರಿನ ನೌಕೆಯನ್ನು ಜುಲೈ 31 ರಂದು ಉಡಾವಣೆ ಮಾಡುವ ಸಿದ್ಧತೆಯಲ್ಲಿ ನಾಸಾ ನಿರತವಾಗಿದೆ. ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿರುವ ಈ ಸೂರ್ಯ ಶೋಧನಾ ನೌಕೆ ಇದುವರೆವಿಗೂ ಯಾವುದೇ ಬಾಹ್ಯಾಕಾಶ ನೌಕೆ ಸಮೀಪಿಸದಷ್ಟು ಹತ್ತಿರದ ಸೂರ್ಯನ ಸಮೀಪ ಕಕ್ಷೆಗೆ ಹೋಗುತ್ತಿದೆ.

ಸೂರ್ಯ ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ ದೂರದಲ್ಲಿದ್ದರೂ ಅದರಲ್ಲಿ ನಿರಂತರವಾಗಿ ಉರಿಯುವ ಅನಿಲಗಳಿಂದಾಗಿ ಅದು ಉರಿಯುವ ಕೆಂಡವಾಗಿದೆ.

ಸೂರ್ಯನಿಂದ ಹೊರ ಬರುವ ಶಾಖ ಮತ್ತು ಬೆಳಕಿನ ಕಿರಣಗಳ ತೀಕ್ಷ್ಣತೆ ಅತಿ ಪ್ರಖರವಾಗಿದ್ದು, ಅದನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಇದುವರೆವಿಗೆ ನಿರ್ಮಾಣವಾದ ಯಾವುದೇ ಬಾಹ್ಯಾಕಾಶ ನೌಕೆಗಳು ಹೊಂದಿರಲಿಲ್ಲ.  ಸೂರ್ಯನ ಹೊರ ಮೈ ಉಷ್ಣಾಂಶ 6000 ಡಿಗ್ರಿ ಸೆಂಟಿಗ್ರೇಡ್ ಎಂದು ಅಂದಾಜಿಸಲಾಗಿದೆ.

ಇದರ ಮಧ್ಯಭಾಗದ ಉಷ್ಣಾಂಶ ಒಂದು ಕೋಟಿ 40 ಲಕ್ಷ ಡಿಗ್ರಿ ಸೆಂಟಿಗ್ರೇಡ್, ಕಬ್ಬಿಣವೇ 1430 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಕರಗಿ ನೀರಾಗುತ್ತದೆ. ಅಂದ ಮೇಲೆ ಸೂರ್ಯನ ಶಾಖದ ಪ್ರಖರತೆ ಎಷ್ಟು ಎಂಬುದು ಅರ್ಥವಾಗುತ್ತದೆ.

ಅತ್ಯಂತ ಹೆಚ್ಚಿನ ಒತ್ತ‌ಡದಲ್ಲಿ ನಿರಂತರವಾಗಿ ಜಲಜನಕದ ಕಣಗಳು ವಿದಳನಗೊಂಡು ಹೀಲಿಂ ಅನ್ನು ಉತ್ಪಾದನೆ ಮಾಡುವ ಮೂಲಕ ಸೂರ್ಯನಲ್ಲಿ ಈ ಪ್ರಮಾಣ ಶಾಖ ಉತ್ಪತ್ತಿಯಾಗುತ್ತದೆ. ಈ ಶಾಖದ ಕಾರಣಕ್ಕಾಗಿಯೇ ಅನ್ಯಗ್ರಹಗಳ ಶೋಧನೆ ನಡೆಸುವ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಸೂರ್ಯನ ಶೋಧನೆಗೆ ಮುಂದಾಗುವ ಧೈರ್ಯ ಮಾಡಿರಲಿಲ್ಲ.

ಈಗ ನಾಸಾ ಮೊದಲ ಬಾರಿಗೆ ಸೂರ್ಯನ ಅತಿ ಸಮೀಪದ ಕಕ್ಷೆಗೆ ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯನ್ನು ಕಳುಹಿಸುತ್ತಿದೆ.

ಧಗಧಗನೆ ಉರಿಯುತ್ತಿರುವ ಅನಿಲದ ಗೋಳವಾಗಿರುವ ಸೂರ್ಯನ ಸಮೀಪಕ್ಕೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವ ಸಾಹಸವನ್ನು ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕೈಗೆತ್ತಿಕೊಂಡಿದೆ.

ಪಾರ್ಕರ್ ಪ್ರೋಬ್ ಹೆಸರಿನ ನೌಕೆಯನ್ನು ಜುಲೈ 31 ರಂದು ಉಡಾವಣೆ ಮಾಡುವ ಸಿದ್ಧತೆಯಲ್ಲಿ ನಾಸಾ ನಿರತವಾಗಿದೆ. ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿರುವ ಈ ಸೂರ್ಯ ಶೋಧನಾ ನೌಕೆ ಇದುವರೆವಿಗೂ ಯಾವುದೇ ಬಾಹ್ಯಾಕಾಶ ನೌಕೆ ಸಮೀಪಿಸದಷ್ಟು ಹತ್ತಿರದ ಸೂರ್ಯನ ಸಮೀಪ ಕಕ್ಷೆಗೆ ಹೋಗುತ್ತಿದೆ.

ಸೂರ್ಯ ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ ದೂರದಲ್ಲಿದ್ದರೂ ಅದರಲ್ಲಿ ನಿರಂತರವಾಗಿ ಉರಿಯುವ ಅನಿಲಗಳಿಂದಾಗಿ ಅದು ಉರಿಯುವ ಕೆಂಡವಾಗಿದೆ.

ಸೂರ್ಯನಿಂದ ಹೊರ ಬರುವ ಶಾಖ ಮತ್ತು ಬೆಳಕಿನ ಕಿರಣಗಳ ತೀಕ್ಷ್ಣತೆ ಅತಿ ಪ್ರಖರವಾಗಿದ್ದು, ಅದನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಇದುವರೆವಿಗೆ ನಿರ್ಮಾಣವಾದ ಯಾವುದೇ ಬಾಹ್ಯಾಕಾಶ ನೌಕೆಗಳು ಹೊಂದಿರಲಿಲ್ಲ.

ಸೂರ್ಯನ ಹೊರ ಮೈ ಉಷ್ಣಾಂಶ 6000 ಡಿಗ್ರಿ ಸೆಂಟಿಗ್ರೇಡ್ ಎಂದು ಅಂದಾಜಿಸಲಾಗಿದೆ.

ಇದರ ಮಧ್ಯಭಾಗದ ಉಷ್ಣಾಂಶ ಒಂದು ಕೋಟಿ 40 ಲಕ್ಷ ಡಿಗ್ರಿ ಸೆಂಟಿಗ್ರೇಡ್, ಕಬ್ಬಿಣವೇ 1430 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಕರಗಿ ನೀರಾಗುತ್ತದೆ. ಅಂದ ಮೇಲೆ ಸೂರ್ಯನ ಶಾಖದ ಪ್ರಖರತೆ ಎಷ್ಟು ಎಂಬುದು ಅರ್ಥವಾಗುತ್ತದೆ.

ಅತ್ಯಂತ ಹೆಚ್ಚಿನ ಒತ್ತ‌ಡದಲ್ಲಿ ನಿರಂತರವಾಗಿ ಜಲಜನಕದ ಕಣಗಳು ವಿದಳನಗೊಂಡು ಹೀಲಿಂ ಅನ್ನು ಉತ್ಪಾದನೆ ಮಾಡುವ ಮೂಲಕ ಸೂರ್ಯನಲ್ಲಿ ಈ ಪ್ರಮಾಣ ಶಾಖ ಉತ್ಪತ್ತಿಯಾಗುತ್ತದೆ. ಈ ಶಾಖದ ಕಾರಣಕ್ಕಾಗಿಯೇ ಅನ್ಯಗ್ರಹಗಳ ಶೋಧನೆ ನಡೆಸುವ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಸೂರ್ಯನ ಶೋಧನೆಗೆ ಮುಂದಾಗುವ ಧೈರ್ಯ ಮಾಡಿರಲಿಲ್ಲ.

ಈಗ ನಾಸಾ ಮೊದಲ ಬಾರಿಗೆ ಸೂರ್ಯನ ಅತಿ ಸಮೀಪದ ಕಕ್ಷೆಗೆ ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯನ್ನು ಕಳುಹಿಸುತ್ತಿದೆ.

ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ನೌಕೆಯನ್ನು ಡೆಲ್ಟಾ-IV ರಾಕೆಟ್ ಮೂಲಕ ಉಡಾವಣೆ ಮಾಡಲಾಗುತ್ತಿದೆ.

ಸೂರ್ಯನ ಹೊರ ಮೇಲ್ಮೈಯಲ್ಲಿಯ ಶಾಖ ಹಾಗೂ ಇತರೆ ಅಂಶಗಳನ್ನು ಅಧ್ಯಯನ ಮಾಡುವುದು ಪಾರ್ಕರ್ ಸೋಲಾರ್ ಪ್ರೋಬ್‌ನ ಉದ್ದೇಶ.

ಸೂರ್ಯನ ಪ್ರಖರಶಾಖ ಮತ್ತು ವಿಕಿರಣ ಪ್ರಭಾವವನ್ನು ತಡೆದುಕೊಳ್ಳುವಂತೆ ಈ ನೌಕೆಯನ್ನು ಸಿದ್ಧಪಡಿಸಲಾಗಿದೆ. ಈ ನೌಕೆಯಲ್ಲಿ ಥರ್ಮಲ್ ಪ್ರೊಟೆಕ್ಷನ್ ಸಿಸ್ಟಮ್ ಅಥವಾ ಹೀಟ್‌ಶೀಲ್ಡ್ ಅನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಅಳವಡಿಸಲಾಗಿದ್ದು, ಇದು ಸೂರ್ಯನ ಶಾಖವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ನೌಕೆಗೆ ಒದಗಿಸಲಿದೆ ಎಂದು ಪಾರ್ಕರ್ ಸೋಲಾರ್ ಪ್ರೋಬ್ ಯೋಜನೆಯ ಪ್ರಾಜೆಕ್ಟ್ ಮ್ಯಾನೇಜರ್ ಆಂಡಿ ಡೀಸ್ಟನ್ ಹೇಳಿದ್ದಾರೆ.

ಅನ್ಯಗ್ರಹ ನಕ್ಷತ್ರಗಳ ಶೋಧನೆಯಲ್ಲಿ ತೊಡಗಿರುವ ಜಾಗತಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಸೂರ್ಯನ ಶೋಧನೆ ಕೈಗೊಳ್ಳುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಕಾರಣ ಸೂರ್ಯನಲ್ಲಿಯ ಪ್ರಖರಶಾಖ.

ಸೂರ್ಯನ ಹೊರ ಮೇಲ್ಮೈಯಲ್ಲಿಯ ಶಾಖವೇ 6000 ಡಿಗ್ರಿ ಸೆಂಟಿಗ್ರೇಡ್, ಇನ್ನು ಅದರ ಮಧ್ಯಭಾಗದ ಉಷ್ಣಾಂಶ 1 ಕೋಟಿ, 40 ಲಕ್ಷ ಡಿಗ್ರಿ ಸೆಂಟಿಗ್ರೇಡ್ ಎಂದು ಅಂದಾಜಿಸಲಾಗಿದೆ.

ಇಷ್ಟು ಶಾಖದ ಸೂರ್ಯನ ಹೊರ ಮೇಲ್ಮೈಯ ಶೋಧನೆಗೆಂದು ಮುಂದಾಗಿರುವ ನಾಸಾ ಜುಲೈ 31 ರಂದು ಪಾರ್ಕರ್ ಸೋಲಾರ್ ಪ್ರೋಬ್‌ ನೌಕೆಯನ್ನು ಕಳುಹಿಸುತ್ತಿದೆ. ಸೂರ್ಯನ ಪ್ರಖರ ಶಾಖವನ್ನು ತಡೆದುಕೊಳ್ಳಲು ಸಾಧ್ಯವಾಗುವಂತೆ ನೌಕೆಯನ್ನು ನಿರ್ಮಾಣ ಮಾಡಿದೆ.

ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ನೌಕೆಯನ್ನು ಡೆಲ್ಟಾ-IV ರಾಕೆಟ್ ಮೂಲಕ ಉಡಾವಣೆ ಮಾಡಲಾಗುತ್ತಿದೆ. ಸೂರ್ಯನ ಹೊರ ಮೇಲ್ಮೈಯಲ್ಲಿಯ ಶಾಖ ಹಾಗೂ ಇತರೆ ಅಂಶಗಳನ್ನು ಅಧ್ಯಯನ ಮಾಡುವುದು ಪಾರ್ಕರ್ ಸೋಲಾರ್ ಪ್ರೋಬ್‌ನ ಉದ್ದೇಶ.

ಸೂರ್ಯನ ಪ್ರಖರಶಾಖ ಮತ್ತು ವಿಕಿರಣ ಪ್ರಭಾವವನ್ನು ತಡೆದುಕೊಳ್ಳುವಂತೆ ಈ ನೌಕೆಯನ್ನು ಸಿದ್ಧಪಡಿಸಲಾಗಿದೆ. ಈ ನೌಕೆಯಲ್ಲಿ ಥರ್ಮಲ್ ಪ್ರೊಟೆಕ್ಷನ್ ಸಿಸ್ಟಮ್ ಅಥವಾ ಹೀಟ್‌ಶೀಲ್ಡ್ ಅನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಅಳವಡಿಸಲಾಗಿದ್ದು, ಇದು ಸೂರ್ಯನ ಶಾಖವನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ನೌಕೆಗೆ ಒದಗಿಸಲಿದೆ ಎಂದು ಪಾರ್ಕರ್ ಸೋಲಾರ್ ಪ್ರೋಬ್ ಯೋಜನೆಯ ಪ್ರಾಜೆಕ್ಟ್ ಮ್ಯಾನೇಜರ್ ಆಂಡಿ ಡೀಸ್ಟನ್ ಹೇಳಿದ್ದಾರೆ.

– ಉತ್ತನೂರು ವೆಂಕಟೇಶ್

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا